ಕೇರಳದ ಕಲಾನದಿ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಪತ್ರ| Priyanka Gandhi

ವಿಜಯವಾಣಿ - 2025-10-28T190607.952
Published on

ವಯನಾಡ್​: ಕೇರಳದ ವಯನಾಡ್​ ಜಿಲ್ಲೆಯಲ್ಲಿ ಬರುವ ಬುಡಕಟ್ಟು ಕಲಾನದಿ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್​ಟಿ) ಪಟ್ಟಿಗೆ ಸೇರಿಸುವಂತೆ ಕಾಂಗ್ರೆಸ್​ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಮಂಗಳವಾರ(ಅ. 28) ವರದಿಯಾಗಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಮ್ ಅವರಿಗೆ ಪ್ರಿಯಾಂಕಾ ಪತ್ರ ಬರೆದಿದ್ದು, ಕಲಾನದಿ ಸಮುದಾಯವು ಪ್ರಸ್ತುತ ಕೇವಲ 328 ಜನಸಂಖ್ಯೆಯನ್ನು ಹೊಂದಿದ್ದು, ಅಲೆಮಾರಿ ಸ್ವಭಾವದ್ದಾಗಿದೆ. ಕೇರಳ ಸಂಶೋಧನಾ, ತರಬೇತಿ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಅಧ್ಯಯಯ ಈ ಸಮುದಾಯದ ಬಗ್ಗೆ ಅಧ್ಯಯನ ನಡೆಸಿದೆ. ಈ ಸಮುದಾಯವು ತನ್ನದೇ ಆದ ಭಾಷೆ, ಪ್ರಾಚೀನ ಮತ್ತು ಪ್ರಾಚೀನ ಗುಣಲಕ್ಷಣಗಳು, ಪ್ರತ್ಯೇಕ ಸಂಸ್ಕೃತಿ, ಪ್ರತ್ಯೇಕ ನಡವಳಿಕೆಯ ಮಾದರಿಗಳು ಮತ್ತು ಪ್ರಾಚೀನ ಆರ್ಥಿಕ ಅಭ್ಯಾಸಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಕಲಾನದಿ ಸಮುದಾಯವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ, ಭೌಗೋಳಿಕವಾಗಿ ಪ್ರತ್ಯೇಕವಾಗಿದೆ ಮತ್ತು ಅದರ ಜನಸಂಖ್ಯೆಯು ಕ್ಷೀಣಿಸುತ್ತಿದೆ. ಐತಿಹಾಸಿಕವಾಗಿ ಅಂಚಿನಲ್ಲಿರುವ ಸಮುದಾಯವು ದಶಕಗಳಿಂದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಹೋರಾಡುತ್ತಿದೆ. ಪ್ರಸ್ತುತ ಈ ಸಮುದಾಯವು ಓಇಸಿ ವರ್ಗದಲ್ಲಿದ್ದು, ಈಗಾಗಲೇ ರಾಜ್ಯ ಸರ್ಕಾರ ಸಹ ಎಸ್​ಟಿ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿದೆ. ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net