ತಮಿಳು ಭಾಷೆಯ ಬಗ್ಗೆ ರಾಹುಲ್​ ಮಾತು: ಚೆನ್ನೈ ಕಾರ್ಯಕ್ರಮದ ಹೆಸರನ್ನೇ ಅಸ್ತ್ರವಾಗಿ ಬಳಸಿ ಕಾಂಗ್ರೆಸ್ ನಾಯಕನ ವಿರುದ್ಧ ಮುಗಿಬಿದ್ದ ಡಿಎಂಕೆ | DMKvsCongress

DMKvsCongress: ನಿನ್ನೆ (ಶನಿವಾರ ಅ.11) ಚೆನ್ನೈನಲ್ಲಿ ನಡೆದ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮದ ಕುರಿತು ರಾಹುಲ್ ಗಾಂಧಿ ವಿರುದ್ಧ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ತೀವ್ರ ವಾಗ್ದಾಳಿ ನಡೆಸಿದ್ದು, ತಮಿಳುನಾಡಿನ ಸಾಂಸ್ಕೃತಿಕ ಗುರುತಿನ ಬಗ್ಗೆ ಮಾತನಾಡುವ ಕಾಂಗ್ರೆಸ್​ ನಾಯಕರು, ರಾಜ್ಯದ ಭಾಷಾ ಗುರುತಿಗೆ ಗೌರವ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕನ ವಿರುದ್ಧ ಮುಗಿಬಿದ್ದ ಡಿಎಂಕೆ
ಕಾಂಗ್ರೆಸ್ ನಾಯಕನ ವಿರುದ್ಧ ಮುಗಿಬಿದ್ದ ಡಿಎಂಕೆ
Published on: 

DMKvsCongress: ನಿನ್ನೆ (ಶನಿವಾರ ಅ.11) ಚೆನ್ನೈನಲ್ಲಿ ನಡೆದ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮದ ಕುರಿತು ರಾಹುಲ್ ಗಾಂಧಿ ವಿರುದ್ಧ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ತೀವ್ರ ವಾಗ್ದಾಳಿ ನಡೆಸಿದ್ದು, ತಮಿಳುನಾಡಿನ ಸಾಂಸ್ಕೃತಿಕ ಗುರುತಿನ ಬಗ್ಗೆ ಮಾತನಾಡುವ ಕಾಂಗ್ರೆಸ್​ ನಾಯಕರು, ರಾಜ್ಯದ ಭಾಷಾ ಗುರುತಿಗೆ ಗೌರವ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಎಎನ್​ಐ ಜೊತೆ ಮಾತನಾಡಿದ ಶರವಣನ್, ತಮಿಳುನಾಡಿನ ಸಂಸ್ಕೃತಿಯನ್ನು ರಕ್ಷಿಸುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಪಾಠ ಮಾಡುವ ಹಕ್ಕಿಲ್ಲ ಎನ್ನುತ್ತಾ, ಛಾತ್ರೋನ್ ಕಿ ಗೂಂಜ್ ಎನ್ನುವ ಹೆಸರಿನ ಬಗ್ಗೆಯೂ ಆಕ್ಷೇಪವೆತ್ತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಬಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆ ಕಾರ್ಯಕ್ರಮಕ್ಕೆ ತಮಿಳಿನಲ್ಲಿ ಅಥವಾ ಇಂಗ್ಲಿಷ್‌ನಂತಹ ಭಾಷೆಯಲ್ಲಿ ಹೆಸರಿಡುವ ಸೌಜನ್ಯವೂ ನಿಮ್ಮಲ್ಲಿರಲಿಲ್ಲ. ಹೀಗಿದ್ದರೂ ನೀವು ಇಲ್ಲಿಗೆ ಬಂದು ನಮ್ಮ ಸಾಂಸ್ಕೃತಿಕ ಗುರುತನ್ನು ರಕ್ಷಿಸುವ ಬಗ್ಗೆ ನಮಗೆ ಪಾಠ ಮಾಡುತ್ತೀರಾ..? ರಾಹುಲ್ ಗಾಂಧಿ, ನಮಗೆ ನಿಮ್ಮ ಪಾಠಗಳ ಅಗತ್ಯವಿಲ್ಲ. ಡಿಎಂಕೆ ಸಾಕಷ್ಟು ಬಲವಾಗಿದ್ದು, ರಾಜ್ಯ ಮತ್ತು ಅದರ ಜನರ ಸಂಸ್ಕೃತಿ ಹಾಗೂ ಗುರುತನ್ನು ನಾಶಮಾಡುವ ಯಾರನ್ನೇ ಆಗಲಿ ಎಂದಿಗೂ ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ:ಇಂಡಿಗೋದಲ್ಲಿ ಪವರ್ ಬ್ಯಾಂಕ್‌ ಸ್ಫೋಟ!...ವಿಮಾನದಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಪ್ರಾಣಕ್ಕೇ ಅಪಾಯ: ನಿಯಮ ಹೇಳೋದೇನು ಗೊತ್ತಾ..? | IndiGo Flight

ರಾಹುಲ್ ಗಾಂಧಿ ಚೆನ್ನೈ ಪ್ರವಾಸ!

ವಿದ್ಯಾರ್ಥಿಗಳು ಮತ್ತು ಯುವಕರೊಂದಿಗೆ ಸಂವಹನ ನಡೆಸುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಚೆನ್ನೈನಲ್ಲಿ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಪ್ರಜಾಪ್ರಭುತ್ವ, ಅಧಿಕಾರವನ್ನು ಪ್ರಶ್ನಿಸುವ ವಿದ್ಯಾರ್ಥಿಗಳ ಹಕ್ಕು ಹಾಗೂ ತಮಿಳುನಾಡಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಪ್ರಸ್ತಾಪಿಸಿದರು. ತಮಿಳುನಾಡಿನ ಭಾಷೆ, ಇತಿಹಾಸ ಮತ್ತು ಸಂಸ್ಕೃತಿಗೆ ಕುತ್ತು ಬಂದಿದೆ ಎಂದು ಆರೋಪಿಸಿ ನರೇಂದ್ರ ಮೋದಿ ಸರ್ಕಾರದ ವಿರುದ್ಧವೂ ಗಾಂಧಿ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರವು ತಮಿಳು ಭಾಷೆ, ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ದಾಳಿ ಮಾಡುವುದನ್ನು ತಾನು ಎಂದಿಗೂ ಸಹಿಸುವುದಿಲ್ಲ ಮತ್ತು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

Also Read
ಒಂದು ರಾತ್ರಿಯಲ್ಲಿ ಬದಲಾದ ರಾಜಕೀಯ ಲೆಕ್ಕಾಚಾರ: ರಾಹುಲ್ ಗಾಂಧಿ ವಿಚಾರದಲ್ಲಿ ಡಿಎಂಕೆ ಹೊಸ ವರಸೆ! | DMK U-Turn
ಕಾಂಗ್ರೆಸ್ ನಾಯಕನ ವಿರುದ್ಧ ಮುಗಿಬಿದ್ದ ಡಿಎಂಕೆ

ಡಿಎಂಕೆ Vs ಕಾಂಗ್ರೆಸ್​

ಅಣ್ಣಾದೊರೈ ಅವರ ಈ ಇತ್ತೀಚಿನ ಹೇಳಿಕೆಗಳು ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಇತ್ತೀಚೆಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ ಹಾಗೂ ಉದ್ವಿಗ್ನತೆಗೆ ಮತ್ತಷ್ಟು ಪುಷ್ಟಿ ನೀಡಿವೆ. ತಮಿಳುನಾಡಿನಲ್ಲಿ ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿಯೂ ಈ ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ಮತದಾರರ ಹೆಸರುಗಳನ್ನು ತೆಗೆದುಹಾಕುವುದರ ಬಗ್ಗೆ ರಾಹುಲ್ ಗಾಂಧಿ ಅವರ ನಿಲುವೇನು ಎಂದು ಡಿಎಂಕೆ ಪ್ರಶ್ನಿಸಿತ್ತು.

ಡಿಎಂಕೆ ವಕ್ತಾರರು ಈ ಹಿಂದೆ ಮಾತನಾಡಿ, ಇತರ ಕಡೆಗಳಲ್ಲಿ ಚುನಾವಣಾ ಸಂಬಂಧಿತ ಕಳವಳಗಳನ್ನು ವ್ಯಕ್ತಪಡಿಸುತ್ತಿರುವ ರಾಹುಲ್ ಗಾಂಧಿ ಅವರು, ತಮಿಳುನಾಡಿನಲ್ಲಿ ಎಸ್‌ಐಆರ್ ಬೆಳವಣಿಗೆಗಳಿಗೆ ಸಂಬಂಧಿಸಿದ ವಿಷಯಗಳ ಬಂದಾಗೇಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದರು.

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಆರಂಭಿಸುವ ಕಾರ್ಯತಂತ್ರ ರೂಪಿಸಲು ಕಳೆದ ವಾರ ನಡೆದಿದ್ದ ಇಂಡಿಯಾ ಮೈತ್ರಿಕೂಟದ ಸಭೆಗೂ ಡಿಎಂಕೆ ನಾಯಕರು ಹಾಜರಾಗಿರಲಿಲ್ಲ. ಆದರೂ ಈ ವಿಚಾರದಲ್ಲಿ ತಾವು ಹೋರಾಟವನ್ನು ಬೆಂಬಲಿಸುವುದಾಗಿ ಮತ್ತು ವಿಪಕ್ಷ ಮೈತ್ರಿಕೂಟದೊಂದಿಗೆ ನಿಲ್ಲುವುದಾಗಿ ಡಿಎಂಕೆ ಮುಖಂಡರು ಹೇಳಿದ್ದರು. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ದಶಕಗಳಷ್ಟು ಹಳೆಯದಾದ ಡಿಎಂಕೆ-ಕಾಂಗ್ರೆಸ್ ಮೈತ್ರಿ ಕಡಿದುಕೊಂಡು, ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ನೀಡಿತ್ತು. ಇದು ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸಬಂಧ ಹಳಸಲು ಕಾರಣವಾಗಿತ್ತು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net