ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಸೈಬರಾಬಾದ್ ಪೊಲೀಸ್ ಕಮಿಷನರ್, ಮೇಡ್ಚಲ್ ಡಿಸಿಪಿಗೆ ಜೈಲು ಶಿಕ್ಷೆ! Telangana High Court

ಭೂ ವಿವಾದದ ಪ್ರಕರಣವೊಂದರಲ್ಲಿ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದ ಗಂಭೀರ ಆರೋಪದ ಮೇಲೆ, ಸೈಬರಾಬಾದ್ ಪೊಲೀಸ್ ಕಮಿಷನರ್ ರಮೇಶ್ ರೆಡ್ಡಿ ಮತ್ತು ಮೇಡ್ಚಲ್ ಡಿಸಿಪಿ ಕೋಟಿರೆಡ್ಡಿ ಅವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೆಲಂಗಾಣ ಹೈಕೋರ್ಟ್ ಸಂಚಲನಾತ್ಮಕ ತೀರ್ಪು ನೀಡಿದೆ.
Telangana High Court
ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಸೈಬರಾಬಾದ್ ಪೊಲೀಸ್ ಕಮಿಷನರ್, ಮೇಡ್ಚಲ್ ಡಿಸಿಪಿಗೆ ಜೈಲು ಶಿಕ್ಷೆ!
Published on: 

ಹೈದರಾಬಾದ್​: ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸಿದರೆ ಎಷ್ಟೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಾದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತೆಲಂಗಾಣ ಹೈಕೋರ್ಟ್ ( Telangana High Court ) ಮತ್ತೊಮ್ಮೆ ಸಾಬೀತುಪಡಿಸಿದೆ.

ಭೂ ವಿವಾದದ ಪ್ರಕರಣವೊಂದರಲ್ಲಿ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದ ಗಂಭೀರ ಆರೋಪದ ಮೇಲೆ, ಸೈಬರಾಬಾದ್ ಪೊಲೀಸ್ ಕಮಿಷನರ್ ರಮೇಶ್ ರೆಡ್ಡಿ ಮತ್ತು ಮೇಡ್ಚಲ್ ಡಿಸಿಪಿ ಕೋಟಿರೆಡ್ಡಿ ಅವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೆಲಂಗಾಣ ಹೈಕೋರ್ಟ್ ಸಂಚಲನಾತ್ಮಕ ತೀರ್ಪು ನೀಡಿದೆ.

Also Read
ಡಿವೋರ್ಸ್​​ ಬಳಿಕ ಅತ್ತ ಚಾಹಲ್ ಬಿಜೆಪಿ ಸೇರಿದ್ರೆ ಇತ್ತ ಮಾಜಿ ಪತ್ನಿ ಧನಶ್ರೀ ವರ್ಮಾರಿಂದ ಹೊಸ ಇನ್ನಿಂಗ್ಸ್​ ಶುರು! Dhanashree Verma
Telangana High Court

ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಹೈಕೋರ್ಟ್ ಈ ಹಿಂದೆ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೆ, ಈ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಂಗ ನಿಂದನೆ ಮತ್ತು ಕೋರ್ಟ್​ ಆದೇಶಗಳ ಉಲ್ಲಂಘನೆಗಾಗಿ ಸೈಬರಾಬಾದ್ ಕಮಿಷನರ್ ರಮೇಶ್ ರೆಡ್ಡಿ ಮತ್ತು ಮೇಡ್ಚಲ್ ಡಿಸಿಪಿ ಕೋಟಿರೆಡ್ಡಿ ಅವರಿಗೆ ತಲಾ ಎರಡು ವಾರಗಳ ಜೈಲು ಶಿಕ್ಷೆ ಹಾಗೂ ತಲಾ 2,000 ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಈ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಇಬ್ಬರೂ ಅಧಿಕಾರಿಗಳು ಹೆಚ್ಚುವರಿಯಾಗಿ ಇನ್ನೂ ಒಂದು ವಾರದ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಎಚ್ಚರಿಸಿದೆ.

ಆದಾಗ್ಯೂ, ಈ ಶಿಕ್ಷೆಯ ತಕ್ಷಣದ ಜಾರಿಗೆ ಹೈಕೋರ್ಟ್ ಒಂದು ವಾರಗಳ ಕಾಲ ತಾತ್ಕಾಲಿಕ ತಡೆಯಾಜ್ಞೆ (ಸಸ್ಪೆನ್ಷನ್) ನೀಡುವ ಮೂಲಕ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಒಂದು ವಾರದ ಒಳಗಾಗಿ ಉನ್ನತ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಅಧಿಕಾರಿಗಳಿಗೆ ಕಾಲಾವಕಾಶ ನೀಡಲಾಗಿದೆ.

Also Read
ವೈಭವ್​ IPL​ ಹರಾಜಿಗೆ ಎಂಟ್ರಿ ಕೊಟ್ರೆ ಇಷ್ಟೊಂದು ಹಣ ಸಿಗುತ್ತಾ!? ಸ್ಫೋಟಕ ಭವಿಷ್ಯ ನುಡಿದ ಆಕಾಶ್​ ಚೋಪ್ರಾ! Vaibhav Suryavanshi
Telangana High Court

ಒಂದು ವೇಳೆ ನಿಗದಿತ ಒಂದು ವಾರದ ಗಡುವಿನೊಳಗೆ ಮೇಲಿನ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಪಡೆಯಲು ಸಾಧ್ಯವಾಗದಿದ್ದರೆ, ಇಬ್ಬರೂ ಅಧಿಕಾರಿಗಳು ತಕ್ಷಣವೇ ಹೈಕೋರ್ಟ್ ರಿಜಿಸ್ಟ್ರಾರ್ ಮುಂದೆ ಶರಣಾಗಿ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾಯಪೀಠ ಕಟ್ಟುನಿಟ್ಟಿನ ಆದೇಶ ನೀಡಿದೆ.

ಉನ್ನತ ಸ್ಥಾನದಲ್ಲಿರುವ ಇಬ್ಬರು ಐಪಿಎಸ್ (IPS) ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿರುವ ಈ ಬೆಳವಣಿಗೆ ತೆಲಂಗಾಣ ಪೊಲೀಸ್ ಇಲಾಖೆ ಮತ್ತು ಆಡಳಿತ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಸರ್ಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ತೀರ್ಪು ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).