ಡಿವೋರ್ಸ್​​ ಬಳಿಕ ಅತ್ತ ಚಾಹಲ್ ಬಿಜೆಪಿ ಸೇರಿದ್ರೆ ಇತ್ತ ಮಾಜಿ ಪತ್ನಿ ಧನಶ್ರೀ ವರ್ಮಾರಿಂದ ಹೊಸ ಇನ್ನಿಂಗ್ಸ್​ ಶುರು! Dhanashree Verma

ಚಾಹಲ್ ರಾಜಕೀಯದತ್ತ ಮುಖ ಮಾಡಿದ್ದರೆ, ಅತ್ತ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ತಮ್ಮ ಸಿನಿಮಾ ಕರಿಯರ್‌ನಲ್ಲಿ ದೊಡ್ಡ ಹೆಜ್ಜೆಯಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ನೃತ್ಯದ ಮೂಲಕ ಖ್ಯಾತಿ ಗಳಿಸಿದ್ದ ಧನಶ್ರೀ, ಇದೀಗ ತೆಲುಗಿನ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಚಿತ್ರ 'ಹೇ ಕಣ್ಣಮ್ಮ' (Hey Kannamma) ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
Dhanashree Verma
ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹಾಗೂ ಡ್ಯಾನ್ಸರ್​ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಧನಶ್ರೀ ವರ್ಮಾ
Published on: 

ಮುಂಬೈ: ವಿಚ್ಛೇದನದ ಬಳಿಕ ವೈಯಕ್ತಿಕ ಜೀವನದ ಏಳುಬೀಳುಗಳನ್ನು ಬದಿಗಿಟ್ಟು, ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹಾಗೂ ಡ್ಯಾನ್ಸರ್​ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಧನಶ್ರೀ ವರ್ಮಾ ( Dhanashree Verma ) ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿ ಸುದ್ದಿಯಾಗಿದ್ದಾರೆ. ಒಂದೆಡೆ ಚಾಹಲ್ ರಾಜಕೀಯ ಅಂಗಳಕ್ಕೆ ಕಾಲಿಟ್ಟು ಬಿಜೆಪಿಯ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿದ್ದರೆ, ಮತ್ತೊಂದೆಡೆ ಧನಶ್ರೀ ವರ್ಮಾ ತೆಲುಗು ಚಿತ್ರರಂಗದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕ್ರಿಕೆಟ್ ಮೈದಾನದ ಜತೆಗೆ ಇದೀಗ ರಾಜಕೀಯ ಅಂಗಳದಲ್ಲೂ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿರುವ ಚಾಹಲ್ ಅವರಿಗೆ ಪಕ್ಷದ ಸಂಘಟನೆಯಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ, ಚಾಹಲ್ ಅವರನ್ನು ಬಿಜೆಪಿಯ 'ರಾಷ್ಟ್ರೀಯ ಒಬಿಸಿ ಮೋರ್ಚಾ' ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ (Special Invitee) ನೇಮಕ ಮಾಡಲಾಗಿದೆ.

Also Read
ಯಜುವೇಂದ್ರ ಚಾಹಲ್​ ಮಾಜಿ ಪತ್ನಿಯ ಮಾದಕ ಫೋಟೋ ವೈರಲ್! Dhanashree Verma ​
Dhanashree Verma

ಚಾಹಲ್ ರಾಜಕೀಯದತ್ತ ಮುಖ ಮಾಡಿದ್ದರೆ, ಅತ್ತ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ತಮ್ಮ ಸಿನಿಮಾ ಕರಿಯರ್‌ನಲ್ಲಿ ದೊಡ್ಡ ಹೆಜ್ಜೆಯಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ನೃತ್ಯದ ಮೂಲಕ ಖ್ಯಾತಿ ಗಳಿಸಿದ್ದ ಧನಶ್ರೀ, ಇದೀಗ ತೆಲುಗಿನ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಚಿತ್ರ 'ಹೇ ಕಣ್ಣಮ್ಮ' (Hey Kannamma) ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ದಿಲ್ ರಾಜು ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಯಶವಂತ್ ಮಾಸ್ಟರ್ ಜತೆಗೆ ಧನಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

ತಮ್ಮ ಚೊಚ್ಚಲ ಸಿನಿಮಾದ ಟ್ರೇಲರ್ ಬಿಡುಗಡೆಯ ಸಂಭ್ರಮದಲ್ಲಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಿನ್ನೆಯ ದಿನ ತಮಗೆ ಅತ್ಯಂತ ವಿನಮ್ರ ಹಾಗೂ ಸುಂದರವಾದ ಭಾವುಕ ಕ್ಷಣವಾಗಿತ್ತು ಎಂದು ಬರೆದುಕೊಂಡಿರುವ ಅವರು, ಟ್ರೇಲರ್‌ಗೆ ಸಿಕ್ಕಿರುವ ಪ್ರೀತಿ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ಈ ಪಯಣವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದಿದ್ದಾರೆ. ಈ ಸಿನಿಮಾ ಇಡೀ ತಂಡದ ಶ್ರಮ, ಉತ್ಸಾಹ ಮತ್ತು ಈ ಕನಸನ್ನು ನನಸಾಗಿಸಲು ಜೊತೆಯಾದ ಪ್ರತಿಯೊಬ್ಬರ ಸಂಭ್ರಮವಾಗಿದೆ ಎಂದು ಧನಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

Also Read
ವೈಭವ್​ IPL​ ಹರಾಜಿಗೆ ಎಂಟ್ರಿ ಕೊಟ್ರೆ ಇಷ್ಟೊಂದು ಹಣ ಸಿಗುತ್ತಾ!? ಸ್ಫೋಟಕ ಭವಿಷ್ಯ ನುಡಿದ ಆಕಾಶ್​ ಚೋಪ್ರಾ! Vaibhav Suryavanshi
Dhanashree Verma

ಇದೇ ವೇಳೆ ತಮಗೆ ಪ್ರೀತಿ ತೋರಿದ ತೆಲುಗು ಮಾಧ್ಯಮ ಹಾಗೂ ಚಿತ್ರರಂಗಕ್ಕೆ ಧನಶ್ರೀ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 'ಹೇ ಕಣ್ಣಮ್ಮ' ಚಿತ್ರ ತಮಗೆ ಅತ್ಯಂತ ವಿಶೇಷವಾಗಿದ್ದು, ತುಂಬಿದ ಹೃದಯದ ನೆನಪುಗಳು ಮತ್ತು ಭಾವನೆಗಳೊಂದಿಗೆ ತಾವು ಮುಂದೆ ಸಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ, ವಿಚ್ಛೇದನದ ನಂತರ ಚಾಹಲ್ ಮತ್ತು ಧನಶ್ರೀ ಇಬ್ಬರೂ ಹಳೆಯದನ್ನು ಮರೆತು ತಮ್ಮದೇ ಆದ ಕ್ಷೇತ್ರಗಳಲ್ಲಿ ಹೊಸ ಸಾಧನೆ ಮಾಡುವತ್ತ ಸಂಪೂರ್ಣ ಗಮನ ಹರಿಸಿದ್ದಾರೆ, (ಏಜೆನ್ಸೀಸ್​).