ಮಚ್ಚಾರ್​​​ನ ಕೊಂದು, ಇಂಜಿನ್ ಬಂದ್ ಮಾಡಿ ಸೌದಿ ಮರುಭೂಮಿಯಲ್ಲಿ ವಿಮಾನ ಪತನಗೊಳಿಸಲು ಯತ್ನಿಸಿದ್ದನಂತೆ ಕೋ-ಪೈಲಟ್! | flydubai co-pilot

flydubai co-pilot: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ಒಮಾನ್ ಮೂಲದ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ, ಟೆಲ್ ಅವೀವ್‌ನಲ್ಲಿ ತನ್ನ ದಾಳಿ ಯೋಜನೆ ವಿಫಲಗೊಂಡ ಬಳಿಕ ವಿಮಾನದ ಇಂಜಿನ್‌ಗಳನ್ನು ಬಂದ್ ಮಾಡಿ, ಸೌದಿ ಮರುಭೂಮಿಯಲ್ಲಿ ಬೋಯಿಂಗ್ 737 ವಿಮಾನವನ್ನು ಪತನಗೊಳಿಸಲು ಸಂಚು ರೂಪಿಸಿದ್ದಿರಬಹುದು ಎಂದು ಇಟಾಲಿಯನ್ ಪತ್ರಿಕೆ ಕೊರಿಯೆಲ್ಲೆ ಡೆಲ್ಲಾ ಸೆರಾ ತನಿಖೆಯನ್ನು ಉಲ್ಲೇಖಿಸಿ ವೈನೆಟ್ ನ್ಯೂಸ್ ವರದಿ ಮಾಡಿದೆ.
ಸೌದಿ ಮರುಭೂಮಿಯಲ್ಲಿ ವಿಮಾನ ಪತನಗೊಳಿಸಲು ಯತ್ನಿಸಿದ್ದನಂತೆ ಕೋ-ಪೈಲಟ್
ಸೌದಿ ಮರುಭೂಮಿಯಲ್ಲಿ ವಿಮಾನ ಪತನಗೊಳಿಸಲು ಯತ್ನಿಸಿದ್ದನಂತೆ ಕೋ-ಪೈಲಟ್
Published on: 

flydubai co-pilot: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ಒಮಾನ್ ಮೂಲದ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ, ಟೆಲ್ ಅವೀವ್‌ನಲ್ಲಿ ತನ್ನ ದಾಳಿ ಯೋಜನೆ ವಿಫಲಗೊಂಡ ಬಳಿಕ ವಿಮಾನದ ಇಂಜಿನ್‌ಗಳನ್ನು ಬಂದ್ ಮಾಡಿ, ಸೌದಿ ಮರುಭೂಮಿಯಲ್ಲಿ ಬೋಯಿಂಗ್ 737 ವಿಮಾನವನ್ನು ಪತನಗೊಳಿಸಲು ಸಂಚು ರೂಪಿಸಿದ್ದಿರಬಹುದು ಎಂದು ಇಟಾಲಿಯನ್ ಪತ್ರಿಕೆ ಕೊರಿಯೆಲ್ಲೆ ಡೆಲ್ಲಾ ಸೆರಾ ತನಿಖೆಯನ್ನು ಉಲ್ಲೇಖಿಸಿ ವೈನೆಟ್ ನ್ಯೂಸ್ ವರದಿ ಮಾಡಿದೆ.

ಸಹ-ಪೈಲಟ್ ಕೊಡಲಿಯಿಂದ (ಎಮರ್ಜೆನ್ಸಿ ಆಕ್ಸ್) ಕ್ಯಾಪ್ಟನ್ ಮಚ್ಚಾರ್ ಅವರ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಮಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದನು. ಆದರೆ, ಗಾಯಗೊಂಡಿದ್ದರೂ ಸಹ ಕ್ಯಾಪ್ಟನ್ ಅವರು ಕಾಕ್‌‌ಪಿಟ್ ಬಾಗಿಲು ತೆರೆಯಲು ಸಹಾಯ ಮಾಡುವ ಸ್ವಿಚ್ ಅನ್ನು ಆನ್ ಮಾಡಿದರು. ಇದರಿಂದಾಗಿ ಪ್ರಯಾಣಿಕರು ಒಳಗೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಯಿತು.

ಕೊರಿಯೆಲ್ಲೆ ಡೆಲ್ಲಾ ಸೆರಾ ವರದಿಯ ಪ್ರಕಾರ, ಸಹ-ಪೈಲಟ್ ವಿಮಾನದ ಆಟೋಮ್ಯಾಟಿಕ್ ಪೈಲಟ್ ಸಿಸ್ಟಮ್ ಅನ್ನು ಬಂದ್ ಮಾಡಿ, ವಿಮಾನವನ್ನು ಏಕಾಏಕಿ ಕೆಳಮುಖವಾಗಿ ಧುಮುಕುವಂತೆ (ಡೈವ್ ಮಾಡಲು) ಯತ್ನಿಸಿದನು. ಈ ಸಂದರ್ಭದಲ್ಲಿ, ವಿಮಾನವು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಬರೋಬ್ಬರಿ 16,000 ಅಡಿಗಳಷ್ಟು ಕೆಳಗೆ ಕುಸಿದಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕೊಡಲಿಯಿಂದ ದಾಳಿಗೊಳಗಾದಾಗಲೂ ಹನುಮಾನ್ ಚಾಲೀಸಾ ಪಠಿಸಿದ್ದ ಸ್ಮಿತ್ ಮಚ್ಚಾರ್​: ಕಷ್ಟಕಾಲದಲ್ಲಿ ನಮಗೆ ಬಜರಂಗಬಲಿಯೇ ನೆನಪಾಗೋದೇಕೆ..? | Machchhar Recited Hanuman Chalisa

ವಿಮಾನದ ಇಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತ..?

ಕೊರಿಯೆಲ್ಲೆ ಡೆಲ್ಲಾ ಸೆರಾ ತನಿಖೆಯು ಹಿಂದೆ ವರದಿಯಾಗದ ಒಂದು ಸಾಧ್ಯತೆಯನ್ನು ಸಹ ಹುಟ್ಟುಹಾಕಿದೆ, ಅದೆನೆಂದರೆ ಸಹ-ಪೈಲಟ್ ವಿಮಾನದ ಇಂಜಿನ್‌ಗಳಿಗೆ ಇಂಧನ ಪೂರೈಕೆಯನ್ನು ಕಡಿತಗೊಳಿಸಿರಬಹುದು. ವಿಮಾನದೊಳಗೆ ರೆಕಾರ್ಡ್ ಮಾಡಲಾದ ವಿಡಿಯೋಗಳನ್ನು ಪರಿಶೀಲಿಸಿದ ಇಬ್ಬರು ಬೋಯಿಂಗ್ 737 ಕ್ಯಾಪ್ಟನ್‌ಗಳು, ವಿಮಾನ ಹಾರಾಟದ ಸಮಯದಲ್ಲಿ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ತುರ್ತು ದೀಪಗಳು ಹಠಾತ್ ಆನ್ ಆಗಿರುವುದನ್ನು ಗಮನಿಸಿದ ನಂತರ ಈ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ವೈನೆಟ್ ನ್ಯೂಸ್ ವರದಿ ಮಾಡಿದೆ.

ವಿಮಾನದ ತುರ್ತು ದೀಪಗಳನ್ನು (ಎಮರ್ಜೆನ್ಸಿ ಲೈಟ್ಸ್) ಸಾಮಾನ್ಯವಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯುವಾಗ (ಎವ್ಯಾಕ್ಯೂಷನ್) ಅಥವಾ ವಿಮಾನವು ನೆಲದ ಮೇಲಿರುವಾಗ ಮಾತ್ರ ಬಳಸಲಾಗುತ್ತದೆ. ವಿಮಾನವು ಗಾಳಿಯಲ್ಲಿ ಹಾರಾಡುತ್ತಿರುವಾಗ ಈ ದೀಪಗಳನ್ನು ಎಂದಿಗೂ ಆನ್ ಮಾಡುವುದಿಲ್ಲ. ಬೋಯಿಂಗ್ 737 ವಿಮಾನವು ತನ್ನ ಮುಖ್ಯ ವಿದ್ಯುತ್ ಸರಬರಾಜನ್ನು ಕಳೆದುಕೊಂಡು ಬ್ಯಾಟರಿ ವಿದ್ಯುತ್‌ಗೆ ಬದಲಾಯಿಸಿದಾಗ ತುರ್ತು ದೀಪಗಳು ಆನ್ ಆಗಬಹುದು ಎಂದು ಇಬ್ಬರು ಕ್ಯಾಪ್ಟನ್‌ಗಳು ಕೊರಿಯೆಲ್ಲೆ ಡೆಲ್ಲಾ ಸೆರಾ ಅವರಿಗೆ ತಿಳಿಸಿದ್ದಾರೆ. ವಿಮಾನದ ಜನರೇಟರ್‌ಗಳು ಅಥವಾ ಇಂಜಿನ್‌ಗಳು ಸ್ಥಗಿತಗೊಂಡಾಗ ಇದು ಸಂಭವಿಸಬಹುದು.

ಸಹ-ಪೈಲಟ್ ಇಂಜಿನ್‌ಗಳಿಗೆ ಇಂಧನ ಹೋಗುವುದನ್ನು ತಡೆಯಲು ಅದರ ಸ್ವಿಚ್‌ಗಳನ್ನು ರನ್ ಸ್ಥಾನದಿಂದ ಕಟ್‌ಆಫ್ ಮೋಡ್‌ಗೆ ಬದಲಾಯಿಸಿದ್ದರೇ ಎಂಬುದನ್ನು ತನಿಖಾಧಿಕಾರಿಗಳು ಈಗ ಪರಿಶೀಲಿಸಬೇಕಾಗಿದೆ ಎಂದು ವರದಿ ತಿಳಿಸಿದೆ. ಕೊರಿಯೆಲ್ಲೆ ಡೆಲ್ಲಾ ಸೆರಾ ಪತ್ರಿಕೆಯು ಪ್ರಯಾಣಿಕರ ಹೇಳಿಕೆಗಳು, ಸಿಬ್ಬಂದಿ ನೀಡಿದ ವರದಿಗಳು, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ವಿವಿಧ ಪ್ಲಾಟ್‌ಫಾರ್ಮ್‌ಗಳ ಡೇಟಾವನ್ನು ಆಧರಿಸಿ ಈ ತನಿಖೆ ನಡೆಸಿದೆ. ಅಲ್ಲದೆ, ಬೋಯಿಂಗ್ 737 ವಿಮಾನದ ಕ್ಯಾಪ್ಟನ್‌ಗಳು ಕೂಡ ಹಾರಾಟದ ಸಮಯದ ವಿಡಿಯೋಗಳನ್ನು ವಿಶ್ಲೇಷಿಸಿ ಮಾಹಿತಿ ನೀಡಿದ್ದಾರೆ.

Also Read
ಯಾವ ಎರಡನೇ ಪೌರತ್ವವೂ ಇಲ್ಲ, ಆದ್ರೂ ಇಸ್ರೇಲ್ ಗಡಿಗೆ ಹಾರಿದ ಒಮಾನ್ ಕೋ ಪೈಲಟ್ ಹಿನ್ನೆಲೆ ಬಗ್ಗೆ ಕಾಡುತ್ತಿವೆ ಅಚ್ಚರಿಯ ಪ್ರಶ್ನೆಗಳು! | Israel Security
ಸೌದಿ ಮರುಭೂಮಿಯಲ್ಲಿ ವಿಮಾನ ಪತನಗೊಳಿಸಲು ಯತ್ನಿಸಿದ್ದನಂತೆ ಕೋ-ಪೈಲಟ್

ಹೀಗಿತ್ತೇ ಸಂಚು...?

ಸಹ-ಪೈಲಟ್ ರಹಸ್ಯವಾಗಿ ಕ್ಯಾಪ್ಟನ್ ಅನ್ನು ಕೊಂದು, ವಿಮಾನವನ್ನು ಅಪಹರಿಸಿ, ಇಸ್ರೇಲ್‌ನ ಮುಖ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ ಬೆನ್ ಗುರಿಯನ್ ಏರ್‌ಪೋರ್ಟ್‌ಗೆ ವಿಮಾನವನ್ನು ನೇರವಾಗಿ ಡಿಕ್ಕಿ ಹೊಡೆಸುವ ಮೂಲಕ 9/11 ಶೈಲಿಯ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದನು. ಸದ್ಯ ಯುಎಇಯಲ್ಲಿ ಬಂಧನದಲ್ಲಿರುವ ಹಮ್ಮಮಿ, ಕ್ಯಾಪ್ಟನ್ ಅನ್ನು ಅಶಕ್ತಗೊಳಿಸಿದ ಬಳಿಕ ವಿಮಾನವನ್ನು ಸಾಮಾನ್ಯ ರೀತಿಯಲ್ಲಿಯೇ ಹಾರಿಸಿಕೊಂಡು ಬಂದು, ಎಲ್ಲಾ ಅನುಮತಿಗಳನ್ನು ಪಡೆದು ನಂತರ ವಿಮಾನ ನಿಲ್ದಾಣದ ಕಟ್ಟಡಕ್ಕೆ ಅಥವಾ ಅಲ್ಲಿ ನಿಲ್ಲಿಸಿರುವ ಇ A ವಿಮಾನಕ್ಕೆ ಡಿಕ್ಕಿ ಹೊಡೆಸುವುದು ತನ್ನ ಪ್ಲಾನ್ ಆಗಿತ್ತು ಎಂದು ತನಿಖಾಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ. ಕೊನೆಯ ಕ್ಷಣದವರೆಗೆ ಯಾರೂ ಅನುಮಾನಪಡದಂತೆ ಮತ್ತು ಸೈರನ್ ಮೊಳಗಿಸಿ ತಡೆಯದಂತೆ ಆತ ಈ ಯೋಜನೆ ಹಾಕಿಕೊಂಡಿದ್ದನು ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿಯಲ್ಲಿ ತಿಳಿದುಬಂದಿದೆ.

ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಸೌದಿ ಅರೇಬಿಯಾ ಅಧಿಕಾರಿಗಳ ವಿಚಾರಣೆ ವೇಳೆ ಹಮ್ಮಮಿ ತಾನು ಇಸ್ರೇಲ್‌ನಲ್ಲಿ ವಿಮಾನವನ್ನು ಪತನಗೊಳಿಸಲು ಬಯಸಿದ್ದೆ ಮತ್ತು ತನಗೆ ಸಾವಿಗೆ ಯಾವುದೇ ಭಯವಿಲ್ಲ ಎಂದು ಬಾಯ್ದಿಟ್ಟಿದ್ದಾನೆ. ಒಮಾನ್ ದೇಶದವನಾದ ಈ ಹಮ್ಮಮಿ ತನ್ನ ಜೀವನದ ಹೆಚ್ಚಿನ ಭಾಗವನ್ನು ತಾಯಿಯ ತವರುಹೊಸರಾದ ಸಿರಿಯಾದಲ್ಲಿ ಕಳೆದಿದ್ದನು. ಅಲ್ಲಿ ಆತನಿಗೆ ಉಗ್ರವಾದಿ ಸಿದ್ಧಾಂತಗಳು ಮೈಗೂಡಿದ್ದವು. 2024ರಲ್ಲಿ ಒಮಾನ್ ಏರ್‌ನಲ್ಲಿ ಕೆಲಸ ಮಾಡುವಾಗಲೂ ಆತನ ಬಳಿ ಉಗ್ರವಾದಿ ಸಾಮಗ್ರಿಗಳು ಸಿಕ್ಕಿದ್ದವು. ಈ ಆತನ ಉಗ್ರ ವಿಚಾರಗಳ ಕಾರಣದಿಂದಲೇ ಸ್ವದೇಶದಲ್ಲಿ ಆತನಿಗೆ ವಿಮಾನ ಹಾರಾಟ ನಡೆಸುವುದನ್ನು ನಿಷೇಧಿಸಲಾಗಿತ್ತು ಎಂದು ತಿಳಿದುಬಂದಿದೆ.

ಯುಎಇಯ ಅಧಿಕೃತ ಸುದ್ದಿ ಸಂಸ್ಥೆಯಾದ ಡಬ್ಲ್ಯುಎಎಂ (WAM) ಕೂಡ, ಒಮಾನ್ ಸಹ-ಪೈಲಟ್ ಭಯೋತ್ಪಾದನಾ ಕೃತ್ಯವೆಸಗಲು ಯತ್ನಿಸಿದ್ದಾನೆ ಮತ್ತು ಕಾಕ್‌ಪಿಟ್‌ನಲ್ಲಿ ಕೊಡಲಿಯಿಂದ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿ ವಿಮಾನವನ್ನು ತನ್ನ ವಶಕ್ಕೆ ಪಡೆಯಲು ಸಂಚು ಹೂಡಿದ್ದ ಎಂದು ಖಚಿತಪಡಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net