ಮಗನ ಜೊತೆ ಎಸ್‌ಎಸ್‌ಎಲ್‌ಸಿ ಪಾಸಾದ ತಾಯಿ: ವೈರಲ್​ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ ಮಹಾಪೂರ! Viral Video

ಜೊತೆಯಲ್ಲಿ ಎಸ್ಎಸ್​​ಎಲ್​ಸಿ ಪರೀಕ್ಷೆ ಪಾಸಾದ ತಾಯಿ-ಮಗ
ಜೊತೆಯಲ್ಲಿ ಎಸ್ಎಸ್​​ಎಲ್​ಸಿ ಪರೀಕ್ಷೆ ಪಾಸಾದ ತಾಯಿ-ಮಗ
Published on
ವೈರಲ್​: ಕಲಿಯೋದಕ್ಕೆ ವಯಸ್ಸಿನ ಹಂಗಿಲ್ಲ, ಕನಸು ಕಾಣೋದಕ್ಕೆ ಬಡತನ ಅಡ್ಡಿಯಿಲ್ಲ ಎಂಬ ಮಾತನ್ನು ನಾವು ಕೇಳಿರುತ್ತೆವೆ. ಆದರೆ, ಇತ್ತಿಚೇಗೆ ಆಂಧ್ರಪ್ರದೇಶದಲ್ಲಿ ನಡೆದ ಘಟನೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಮಗನ ಜೊತೆಗೂಡಿ 10ನೇ ತರಗತಿ ಪರೀಕ್ಷೆ ಬರೆದ ತಾಯಿಯೊಬ್ಬರು, ಮಗನಷ್ಟೇ ಸಂಭ್ರಮದಿಂದ ಉತ್ತೀರ್ಣರಾಗುವ ಮೂಲಕ ಇಡೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ (Viral Video) ಆಗಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಕೊಲೆ: ಮದ್ಯಕ್ಕೆ ನೀರು ಬೆರೆಸಲು ನಿರಾಕರಣೆ; ಬಾಲಕನನ್ನು ಗುಂಡಿಕ್ಕಿ ಕೊಂದ ಪಾಪಿಗಳು..Boy killed

ಯಾರೀ ಅಮ್ಮ-ಮಗ?

ಈ ಸುಂದರ ಕಥೆಯ ನಾಯಕರು ಆಂಧ್ರಪ್ರದೇಶದ ಪಾಲಕೊಲ್ಲು ನಿವಾಸಿಗಳಾದ ಲಕ್ಷ್ಮಿ ಲಹರಿ ಮತ್ತು ಅವರ ಪ್ರೀತಿಯ ಮಗ ವಿಜಯ್. ಲಕ್ಷ್ಮಿ ಅವರು ಬಾಲ್ಯದಲ್ಲಿ ಓದಿನಲ್ಲಿ ಬಹಳ ಆಸಕ್ತಿ ಹೊಂದಿದ್ದರಾದರೂ, ವಿಧಿಯಾಟ ಬೇರೆಯೇ ಇತ್ತು. ಕೇವಲ 6ನೇ ತರಗತಿ ಓದುತ್ತಿರುವಾಗಲೇ ಮದುವೆಯಾದ ಹಿನ್ನಲೆ ಸಂಸಾರ, ಮಕ್ಕಳು, ಜವಾಬ್ದಾರಿಗಳ ಮಧ್ಯೆ ತನ್ನ ಓದಿನ ಕನಸನ್ನು ಅವರು ಮೂಲೆಗೆ ತಳ್ಳಿದ್ದರು.
ಆದರೆ, ಮನೆಯ ದೀಪವಾಗಿ ಬಂದ ಮಗ ವಿಜಯ್, ತಾಯಿಯ ಕಣ್ಣಲ್ಲಿದ್ದ ಆ ಹಳೆಯ ಕನಸನ್ನು ಗುರುತಿಸಿದ್ದ. ಅವನು 10ನೇ ತರಗತಿಗೆ ಬಂದಾಗ, ಅಮ್ಮಾ, ನೀನು ಯಾಕೆ ನನ್ನ ಜೊತೆ ಪರೀಕ್ಷೆ ಬರೆಯಬಾರದು? ಎಂದು ಕೇಳಿದ ಆ ಒಂದು ಮಾತು ಲಕ್ಷ್ಮಿ ಅವರ ಬದುಕನ್ನೇ ಬದಲಿಸಿತು.

ಜೊತೆಯಾಗಿ ಓದಿದರು, ಜೊತೆಯಾಗಿ ಗೆದ್ದರು!

ಮಗನ ಪ್ರೋತ್ಸಾಹದಿಂದ ಧೈರ್ಯ ತಂದುಕೊಂಡ ಲಕ್ಷ್ಮಿ, ಹತ್ತನೇ ತರಗತಿಗೆ ಪ್ರವೇಶ ಪಡೆದರು. ಮನೆಯ ಕೆಲಸ ಮುಗಿಸಿ, ಮಗನ ಜೊತೆ ಕುಳಿತು ಪಾಠ ಕೇಳುತ್ತಿದ್ದರು. ಮಗ ತಾಯಿಗೆ ಗುರುವಾಗಿ, ಗೆಳೆಯನಾಗಿ ಸಾಥ್ ನೀಡಿದ. ಫಲಿತಾಂಶ ಬಂದ ದಿನ ಅವರಿಬ್ಬರ ಮುಖದಲ್ಲಿದ್ದ ಆ ನಗುವಿಗೆ ಬೆಲೆಕಟ್ಟಲು ಸಾಧ್ಯವಿರಲಿಲ್ಲ.

ಫಲಿತಾಂಶ ಹೀಗಿದೆ

ಇತ್ತೀಚೆಗೆ ಪ್ರಕಟವಾದ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ತಾಯಿ ಲಕ್ಷ್ಮೀ 600ಕ್ಕೆ 360 ಅಂಕಗಳನ್ನು ಪಡೆಯುವ ಮೂಲಕ ಗೌರವಯುತವಾಗಿ ಪಾಸ್ ಆಗಿದ್ದಾರೆ. ಇತ್ತ ಮಗ ವಿಜಯ್​ 600 ಕ್ಕೆ 562 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ. ಪರೀಕ್ಷೆಯಲ್ಲಿ ಪಾಸ್ ಆಗಿದ್ದನ್ನು ತಿಳಿದ ತಕ್ಷಣ ಅಮ್ಮ-ಮಗ ಒಬ್ಬರನ್ನೊಬ್ಬರು ಅಪ್ಪಿಕೊಂಡು ಆನಂದಬಾಷ್ಪ ಸುರಿಸುತ್ತಿರುವ ವೀಡಿಯೊ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ನೆಟ್ಟಿಗರ ಮನಗೆದ್ದ ವಿಡಿಯೋ!

ಈ ವಿಡಿಯೋ ನೋಡಿದ ಲಕ್ಷಾಂತರ ಜನರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ.
ಒಬ್ಬ ಬಳಕೆದಾರರು, ಕಲಿಯೋದಕ್ಕೆ ಮನಸ್ಸಿದ್ದರೆ ಸಾಕು, ವಯಸ್ಸು ಬರಿ ನಂಬರ್ ಅಷ್ಟೇ ಎಂದು ಬರೆದಿದ್ದಾರೆ. ಮತ್ತೊಬ್ಬರು, ತನ್ನ ಕನಸನ್ನು ಬಲಿ ಕೊಟ್ಟ ತಾಯಿಗೆ, ಮಗ ಕೊಟ್ಟ ದೊಡ್ಡ ಉಡುಗೊರೆ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net