ದಶಕಗಳ ಹೋರಾಟ ಅಂತ್ಯ: ಎನ್‌ಡಿಎ ಪಾಳಯ ಸೇರಿದ ಬೆನ್ನಲ್ಲೇ ಯೂಸುಫ್ ಪಠಾಣ್‌ಗೆ ಗುಜರಾತ್ ಸರ್ಕಾರದಿಂದ ದೊಡ್ಡ ಉಡುಗೊರೆ! | Yusuf Pathan

ಕೋಲ್ಕತ್ತಾ: ಮಾಜಿ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾಣ್ (Yusuf Pathan) ಪಕ್ಷ ಬದಲಾಯಿಸಿದ ಕೆಲವೇ ತಿಂಗಳುಗಳಲ್ಲಿ ಅವರಿಗೆ ಗುಜರಾತ್ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಕ್ಕಿದ್ದು, 2012ರಿಂದಲೂ ಕಾನೂನು ಮತ್ತು ಆಡಳಿತಾತ್ಮಕ ತೊಡಕುಗಳಲ್ಲಿ ಸಿಲುಕಿದ್ದ ವಡೋದರಾದಲ್ಲಿರುವ ಸುಮಾರು 1,000 ಚದರ ಮೀಟರ್ ವಿಸ್ತೀರ್ಣದ ಭೂಮಿಯನ್ನು ಅವರಿಗೆ ಅಧಿಕೃತವಾಗಿ ನೀಡಲು ನಿರ್ಧರಿಸಲಾಗಿದೆ.
ದಶಕಗಳ ಹೋರಾಟ ಅಂತ್ಯ: ಎನ್‌ಡಿಎ ಪಾಳಯ ಸೇರಿದ ಬೆನ್ನಲ್ಲೇ ಯೂಸುಫ್ ಪಠಾಣ್‌ಗೆ ಗುಜರಾತ್ ಸರ್ಕಾರದಿಂದ ದೊಡ್ಡ ಉಡುಗೊರೆ! | Yusuf Pathan
Published on: 

ಈ ವಿವಾದಿತ ಭೂಮಿಯು ವಡೋದರಾದ ತಾಂಡಲ್ಜಾ ಪ್ರದೇಶದಲ್ಲಿರುವ ಪಠಾಣ್ ಅವರ ಮನೆಯ ಪಕ್ಕದಲ್ಲೇ ಇದೆ. ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿರುವ ತಮಗೆ ಭದ್ರತೆಯ ಕಾರಣಕ್ಕಾಗಿ ಈ ಜಮೀನು ಬೇಕೆಂದು ಯೂಸುಫ್ ಪಠಾಣ್ 2012ರಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಮನೆಯಲ್ಲಿ ಯೂಸುಫ್ ಮತ್ತು ಇರ್ಫಾನ್ ಪಠಾಣ್ ತಮ್ಮ ಕುಟುಂಬ ಹಾಗೂ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:ನಿತೀಶ್ ಶ್ರೇಷ್ಠ ನಾಯಕ ಅನ್ನೋದ್ರಲ್ಲಿ ಎರಡನೇ ಮಾತಿಲ್ಲ, ಆದ್ರೆ....ಪಲ್ಟು ರಾಮ್​ ಬಗ್ಗೆ ಮೆಚ್ಚುಗೆಯ ಜೊತೆ ಚುಚ್ಚು ಮಾತಾಡಿದ ಪಿಕೆ! | Prashant Kishor

ಹೊಸ ಒಪ್ಪಂದವೇನು..?

ದಶಕಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ, ರಾಜ್ಯ ಸರ್ಕಾರವು ಈ ಭೂ ವಿವಾದವನ್ನು ಬಗೆಹರಿಸಲು ಹೊಸ ಚೌಕಟ್ಟನ್ನು ಸಿದ್ಧಪಡಿಸಿದೆ. ಸರ್ಕಾರದ ಮೂಲಗಳ ಪ್ರಕಾರ, ಯೂಸುಫ್ ಪಠಾಣ್‌ಗೆ ಜಮೀನಿನ ಅರ್ಧದಷ್ಟು ಭಾಗವನ್ನು ಸರ್ಕಾರದಿಂದ ಉಡುಗೊರೆಯಾಗಿ ನೀಡಲಾಗುತ್ತಿದ್ದು, ಉಳಿದ ಅರ್ಧ ಭಾಗಕ್ಕೆ ಇಂತಿಷ್ಟು ಹಣ ಪಾವತಿಸಲಿದ್ದಾರೆ.

ಗುಜರಾತನ್ನು ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗಾಗಿ ರೂಪಿಸಲಾದ ವಿಶೇಷ ಕಲ್ಯಾಣ ನೀತಿಗಳಡಿ ಭೂಮಿಯ ಅರ್ಧದಷ್ಟು ಮೌಲ್ಯವನ್ನು ಸರಿದೂಗಿಸಲಾಗುತ್ತಿದೆ. ಅಂದರೆ ಪಠಾಣ್ ಅರ್ಧ ಭೂಮಿಯನ್ನು ಉಚಿತವಾಗಿ ಪಡೆಯಲಿದ್ದಾರೆ. ಉಳಿದ ಶೇ. 50ರಷ್ಟು ಭಾಗದ ಮೌಲ್ಯ ಅಂದಾಜು 10 ಕೋಟಿ ರೂಪಾಯಿಗಳಾಗಿದ್ದು, ಅದನ್ನು ಅವರು ಪಾವತಿಸಲಿದ್ದಾರೆ.

ಕಾನೂನು ಹೋರಾಟ ಹೇಗಿತ್ತು ಗೊತ್ತಾ..?

2012ರಲ್ಲಿ ಕಾವಲು ಭದ್ರತೆಯ ಕಾರಣ ನೀಡಿ 99 ವರ್ಷಗಳ ಗುತ್ತಿಗೆಗೆ ಪಠಾಣ್ ಅರ್ಜಿ ಸಲ್ಲಿಸಿದ್ದರು. ಆದರೆ ಸಾರ್ವಜನಿಕ ಆಸ್ತಿಗಳು ಮುಕ್ತ ಹರಾಜಿನ ಮೂಲಕವೇ ವರ್ಗಾವಣೆಯಾಗಬೇಕು ಎಂದು ಉನ್ನತ ಪ್ರಾಧಿಕಾರಗಳು ಈ ಹಿಂದೆ ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದವು.

ಕುತೂಹಲಕಾರಿ ಸಂಗತಿ ಎಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಿಂದ ಪಠಾಣ್ ಗೆದ್ದ ಬೆನ್ನಲ್ಲೇ, ಬಿಜೆಪಿಯು ಅಧಿಕಾರದಲ್ಲಿರುವ ವಡೋದರಾ ಮಹಾನಗರ ಪಾಲಿಕೆಯು ಒತ್ತುವರಿ ತೆರವುಗೊಳಿಸುವಂತೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಪಠಾಣ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ಎಚ್ಚರಿಕೆಗಳು ಬಂದ ಹಿನ್ನೆಲೆಯಲ್ಲಿ, ಪಠಾಣ್​ ಪರ ವಕೀಲರು ಹೈಕೋರ್ಟ್‌ನಲ್ಲಿದ್ದ ಮೇಲ್ಮನವಿಯನ್ನು ಬೇಷರತ್ತಾಗಿ ವಾಪಸ್ ಪಡೆದರು.

Also Read
ರಾವಣನ ಪೋಸ್ಟರ್​​ನಲ್ಲಿ ರಾಹುಲ್, ಅಖಿಲೇಶ್!...ಆ ಹತ್ತು ತಲೆಗಳಲ್ಲಿ ಇರುವ ವಿದೇಶಿಗರು ಯಾರು ಗೊತ್ತಾ...? | Anti-India Ravana Poster
ದಶಕಗಳ ಹೋರಾಟ ಅಂತ್ಯ: ಎನ್‌ಡಿಎ ಪಾಳಯ ಸೇರಿದ ಬೆನ್ನಲ್ಲೇ ಯೂಸುಫ್ ಪಠಾಣ್‌ಗೆ ಗುಜರಾತ್ ಸರ್ಕಾರದಿಂದ ದೊಡ್ಡ ಉಡುಗೊರೆ! | Yusuf Pathan

ಅಧಿಕಾರಿಗಳು ಇದು ಕೇವಲ ಕ್ರೀಡಾ ಕ್ಷೇತ್ರದ ಐತಿಹಾಸಿಕ ಕೊಡುಗೆಯನ್ನು ಗೌರವಿಸುವ ನಿರ್ಧಾರ ಎನ್ನುತ್ತಿದ್ದರೂ, ರಾಜಕೀಯ ವಿಶ್ಲೇಷಕರು ಮಾತ್ರ ಇದು ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಪ್ರಭಾವ ಎಂದು ಅಭಿಪ್ರಾಯಪಟ್ಟಿದ್ದಾರೆ. ಯೂಸುಫ್ ಪಠಾಣ್ ಮಾರ್ಚ್ 2012ರಲ್ಲಿ ಭಾರತ ಪರ ತಮ್ಮ ಕೊನೆಯ ಏಕದಿನ ಮತ್ತು ಟಿ20 ಪಂದ್ಯ ಆಡಿದ್ದರು. ಅವರು 2011ರಿಂದ 2017ರವರೆಗೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದರು.

ಕಳೆದ ಏಪ್ರಿಲ್​-ಮೇನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬರ್ಹಾಂಪುರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಗೆದ್ದಿದ್ದ ಯೂಸುಫ್ ಪಠಾಣ್ ಸೇರಿದಂತೆ 20 ಸಂಸದರು ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಂಡಾಯವೆದ್ದು, ಎನ್‌ಸಿಪಿಐ ಎಂಬ ಸಣ್ಣ ಪಕ್ಷದ ಜತೆ ವಿಲೀನಗೊಂಡು ಸಂಸತ್ತಿನಲ್ಲಿ ಎನ್‌ಡಿಎ ಪಾಳಯಕ್ಕೆ ಬೆಂಬಲ ನೀಡಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net