ಇಂಟರ್ನೆಟ್ ಬಳಕೆ ಮಕ್ಕಳ ಮೂಲಭೂತ ಹಕ್ಕು: ನಿಷೇಧವಲ್ಲ, ಸುರಕ್ಷತೆ ಮುಖ್ಯ: ಸುಪ್ರೀಂ ಕೋರ್ಟ್​ ಮಹತ್ವದ ಆದೇಶ! Supreme Court

ಇಂಟರ್ನೆಟ್ ಬಳಕೆ ಮಕ್ಕಳ ಸಂವಿಧಾನಬದ್ಧ ಮೂಲಭೂತ ಹಕ್ಕು ಎಂದ ಸುಪ್ರೀಂ ಕೋರ್ಟ್. ಸಂಪೂರ್ಣ ನಿಷೇಧದ ಬದಲು 'ಕಿಡ್ಸ್ ಮೋಡ್' ಹಾಗೂ ಬಲವಾದ ಸುರಕ್ಷತಾ ನಿಯಮಗಳನ್ನು ರೂಪಿಸಲು ಕೇಂದ್ರಕ್ಕೆ ಖಡಕ್ ಆದೇಶ.
Representative image
ಸಾಂದರ್ಭಿಕ ಚಿತ್ರ
Published on: 

ನವದೆಹಲಿ: "ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಇಂಟರ್ನೆಟ್ ಬ್ಯಾನ್ ಮಾಡಿ" ಎಂಬ ಕೂಗುಗಳ ನಡುವೆ ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಕ್ರಾಂತಿಕಾರಕ ಹಾಗೂ ಮಹತ್ವದ ತೀರ್ಪೊಂದು ಹೊರಬಿದ್ದಿದೆ. ಇಂಟರ್ನೆಟ್ ಪ್ರವೇಶ ಮತ್ತು ಬಳಕೆ ಪ್ರತಿಯೊಬ್ಬ ನಾಗರಿಕನಂತೆ ಮಕ್ಕಳಿಗೂ ಸಂವಿಧಾನಬದ್ಧ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮಕ್ಕಳ ಸುರಕ್ಷತೆಯ ನೆಪವೊಡ್ಡಿ ಅವರನ್ನು ಇಂಟರ್ನೆಟ್ ಲೋಕದಿಂದ ಸಂಪೂರ್ಣವಾಗಿ ದೂರವಿಡಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಖಡಕ್​ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಮತ್ತು 19(1)(ಎ) ವಿಧಿ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಅಡಿಯಲ್ಲಿ ಮಕ್ಕಳು ಕೂಡ ಈ ಹಕ್ಕನ್ನು ಸಮಾನವಾಗಿ ಅನುಭವಿಸಲು ಅರ್ಹರು ಎಂದು ಸ್ಪಷ್ಟಪಡಿಸಿದೆ.

ಸುರಕ್ಷತೆ ಮತ್ತು ಸ್ವಾತಂತ್ರ್ಯ ಎರಡೂ ಮುಖ್ಯ!

ಆನ್‌ಲೈನ್‌ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯಗಳ ನಡುವೆ ಸಮತೋಲನ ಇರಬೇಕು ಎಂದಿರುವ ಪೀಠ, ನಮ್ಮ ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯಗಳು ಒಂದಕ್ಕೊಂದು ವಿರುದ್ಧವಾದವುಗಳಲ್ಲ. ನಮ್ಮ ಮಕ್ಕಳಿಗೆ ಇವೆರಡನ್ನೂ ಹೊಂದುವ ಸಂಪೂರ್ಣ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ.

ಮಕ್ಕಳಿಗೆ ಇಂಟರ್ನೆಟ್ ಸಂಪೂರ್ಣವಾಗಿ ನಿರಾಕರಿಸುವುದು, ಅವರಿಗೆ ಯೋಚಿಸುವ ಶಕ್ತಿಯೇ ಇಲ್ಲ ಅಥವಾ ವ್ಯಕ್ತಪಡಿಸಲು ವಾಕ್ ಸ್ವಾತಂತ್ರ್ಯವೇ ಇಲ್ಲ ಎಂದು ಹೇಳುವಷ್ಟೇ ಬಾಲಿಶ ಹಾಗೂ ಅಸಂಬದ್ಧ ಎಂದು ನ್ಯಾಯಾಲಯ ಛಾಟಿ ಬೀಸಿದೆ. ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ನಿಂದನೆಯಂತಹ ಹಾನಿಕಾರಕ ಕಂಟೆಂಟ್‌ಗಳನ್ನು ಪತ್ತೆಹಚ್ಚಿ ಡಿಲೀಟ್ ಮಾಡುವ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೆ ತರುವಂತೆ ಆದೇಶಿಸಿದೆ.

ಇಂಟರ್ನೆಟ್ ಕಲಿಕೆಯ ಬಹುದೊಡ್ಡ ವೇದಿಕೆ!

ಇಂಟರ್ನೆಟ್ ಎನ್ನುವುದು ಕೇವಲ ಮನರಂಜನೆಯ ಸಾಧನವಲ್ಲ, ಅದು ವಿಚಾರಗಳ, ಜ್ಞಾನ ಮತ್ತು ಸೃಜನಶೀಲತೆಯ ಮಹಾಸಾಗರ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಹಳ್ಳಿಗಳಲ್ಲಿರುವ ಅದೆಷ್ಟೋ ಮಕ್ಕಳಿಗೆ ಇಂಟರ್ನೆಟ್ ಒಂದೇ ಕಲಿಕೆ ಹಾಗೂ ಮಾಹಿತಿಯ ಪ್ರಮುಖ ಆಸರೆಯಾಗಿದೆ.

ಹಾಗೆಯೇ ವಿಶೇಷ ಚೇತನವುಳ್ಳ ಮಕ್ಕಳಿಗೆ ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಮತ್ತು ಹೊಸ ಸ್ನೇಹಿತರನ್ನು ಕಂಡುಕೊಳ್ಳಲು ಆನ್‌ಲೈನ್ ವೇದಿಕೆಗಳು ಹೊಸ ದಾರಿಯನ್ನು ತೆರೆದುಕೊಡುತ್ತವೆ ಎಂದು ಪೀಠ ವಿವರಿಸಿದೆ.

ಸೋಷಿಯಲ್ ಮೀಡಿಯಾ ಕಂಪನಿಗಳು ಮತ್ತು ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳು ಕೆಟ್ಟ ಕಂಟೆಂಟ್‌ಗಳನ್ನು ತಡೆಯುವಲ್ಲಿ ವಿಫಲವಾಗಿವೆ ಎಂಬ ಕಾರಣಕ್ಕೆ, ಸಂತ್ರಸ್ತರಾಗುವ ಮಕ್ಕಳನ್ನೇ ಇಂಟರ್ನೆಟ್‌ನಿಂದ ದೂರವಿಡುವುದು ಎಷ್ಟರಮಟ್ಟಿಗೆ ಸರಿ? ಇದು ಸಮಸ್ಯೆಯ ಮೂಲವನ್ನು ಬಿಟ್ಟು ಸಂತ್ರಸ್ತರನ್ನೇ ತಪ್ಪಿತಸ್ಥರನ್ನಾಗಿ ನೋಡಿದಂತಾಗುತ್ತದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

Also Read
ಕಾವ್ಯಾ-ಅನಿರುದ್ಧ್ ಮದುವೆ ಫಿಕ್ಸ್​! ಗ್ರೀಸ್​​ನಲ್ಲಿ ಸಪ್ತಪದಿ, ನ. 21 ಕ್ಕೆ ಅದ್ಧೂರಿ ರಿಸೆಪ್ಷನ್; ಅಧಿಕೃತ ಘೋಷಣೆ ಮಾಡಿದ ಸಿಎಂ ರೇವಂತ್ ರೆಡ್ಡಿ! Kavya Anirudh Wedding
Representative image

ಬ್ಯಾನ್ ಮಾಡಿದರೆ ಮಕ್ಕಳು ಡಾರ್ಕ್ ವೆಬ್ ಕಡೆ ಹೋಗ್ತಾರೆ!

ಮಕ್ಕಳ ಮೇಲೆ ಇಂಟರ್ನೆಟ್ ಬ್ಯಾನ್ ಹೇರಿದರೆ ಆಗುವ ಅನಾಹುತಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಗಂಭೀರ ಎಚ್ಚರಿಕೆ ನೀಡಿದೆ. ಕಠಿಣ ನಿಷೇಧ ಹೇರಿದರೆ ಮಕ್ಕಳು ಇಂಟರ್ನೆಟ್ ಬಳಸುವುದನ್ನು ನಿಲ್ಲಿಸುವುದಿಲ್ಲ. ಬದಲಾಗಿ, ಕಣ್ಣುತಪ್ಪಿಸಿ ನಿಯಂತ್ರಣವೇ ಇಲ್ಲದ ಅಪಾಯಕಾರಿ ವೆಬ್‌ಸೈಟ್‌ಗಳು ಅಥವಾ ಅಜ್ಞಾತ ವೇದಿಕೆಗಳ ಕಡೆಗೆ ಮುಖ ಮಾಡುತ್ತಾರೆ. ಇದು ಅವರನ್ನು ಮತ್ತಷ್ಟು ಅಪಾಯಕ್ಕೆ ತಳ್ಳುತ್ತದೆ. ಅಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ತಮಗೆ ಬೆದರಿಕೆ ಅಥವಾ ಕಿರುಕುಳ ಎದುರಾದರೆ, ಪೋಷಕರು ಬೈಯುತ್ತಾರೆ ಎಂಬ ಭಯದಿಂದ ಮಕ್ಕಳು ಅದನ್ನು ಹಂಚಿಕೊಳ್ಳುವುದೇ ಇಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ಸೂಚಿಸಿದ 'ಕಿಡ್ಸ್ ಮೋಡ್' ಪರಿಹಾರಗಳೇನು?

ಸಂಪೂರ್ಣ ನಿಷೇಧವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಮಕ್ಕಳ ರಕ್ಷಣೆಗೆ ವಯಸ್ಸಿಗೆ ತಕ್ಕ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕಿಡ್ಸ್ ಮೋಡ್: ಮಕ್ಕಳ ಅಕೌಂಟ್‌ಗಳಿಗೆ ಪ್ರತ್ಯೇಕ ಕಿಡ್ಸ್ ಮೋಡ್ ಪರಿಚಯಿಸುವುದು.

ಖಾಸಗಿತನಕ್ಕೆ ಆದ್ಯತೆ: ಮಕ್ಕಳ ಖಾತೆಗಳು ಡಿಫಾಲ್ಟ್ ಆಗಿ ಪ್ರೈವೇಟ್ (ಖಾಸಗಿ) ಆಗಿರಬೇಕು. ಅಪರಿಚಿತರು ಅವರಿಗೆ ನೇರವಾಗಿ ಮೆಸೇಜ್ ಮಾಡುವುದನ್ನು ತಡೆಯುವುದು.

Also Read
ಲಂಡನ್‌ನಿಂದ ಧ್ರುವ್ ರಾಠೀ ಹೊಸ ಬಾಂಬ್: ಕೇಂದ್ರದ ವಿರುದ್ಧ 'ವೋಟ್ ಚೋರಿ' ಸಮರ; ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಧರಣಿಗೆ ಕರೆ! Dhruv Rathee
Representative image

ಕಂಟೆಂಟ್ ನಿಯಂತ್ರಣ: ಮಕ್ಕಳಿಗೆ ತೋರಿಸುವ ಜಾಹೀರಾತುಗಳು ಮತ್ತು ವಿಷಯಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರುವುದು.

ಪೋಷಕರ ಮೇಲ್ವಿಚಾರಣೆ: ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವಾಗ ಪೋಷಕರ ಒಪ್ಪಿಗೆ ಮತ್ತು ಮಾರ್ಗದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು.

ಅಂತಯೇ, ವಯಸ್ಕರ ವೆಬ್‌ಸೈಟ್‌ಗಳು ಸೇರಿದಂತೆ ಮಕ್ಕಳಿಗೆ ಹಾನಿಯುಂಟುಮಾಡುವ ಸೈಟ್‌ಗಳನ್ನು ನಿರ್ಬಂಧಿಸಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ, ಮಕ್ಕಳ ಲೈಂಗಿಕ ದೌರ್ಜನ್ಯದ ಕಂಟೆಂಟ್‌ಗಳನ್ನು ಆನ್‌ಲೈನ್‌ನಿಂದ ತಕ್ಷಣವೇ ಕಿತ್ತುಹಾಕಲು ರಾಷ್ಟ್ರೀಯ ಸಮಗ್ರ ಡೇಟಾಬೇಸ್ ರಚಿಸುವಂತೆ ಆದೇಶಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net