ಲಂಡನ್‌ನಿಂದ ಧ್ರುವ್ ರಾಠೀ ಹೊಸ ಬಾಂಬ್: ಕೇಂದ್ರದ ವಿರುದ್ಧ 'ವೋಟ್ ಚೋರಿ' ಸಮರ; ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಧರಣಿಗೆ ಕರೆ! Dhruv Rathee

ಯೂಟ್ಯೂಬರ್ ಧ್ರುವ್ ರಾಠೀ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ 'ವೋಟ್ ಚೋರಿ' ಆರೋಪಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇತ್ತ ದೆಹಲಿ ಸಾಕೇತ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ; ಪೂರ್ಣ ವಿವರ ಇಲ್ಲಿದೆ.
YouTuber Dhruv Rathee has called for a protest in front of the Gandhi statue in London's Parliament Square.
ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಗೆ ಕರೆ ನೀಡಿರುವ ಯೂಟ್ಯೂಬರ್ ಧ್ರುವ್ ರಾಠೀ.
Published on: 

ನವದೆಹಲಿ: ವಿವಾದಿತ ಯೂಟ್ಯೂಬರ್ ಧ್ರುವ್ ರಾಠೀ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಭಾರತದಲ್ಲಿ ರಾಜಕೀಯ ಕಾವು ಹೆಚ್ಚುತ್ತಿದ್ದ ಬೆನ್ನಲ್ಲೇ ಲಂಡನ್‌ಗೆ ಹಾರಿರುವ ಅವರು, ಅಲ್ಲಿಂದಲೇ ಕೇಂದ್ರ ಸರ್ಕಾರದ ವಿರುದ್ಧ ಹೊಸ ಸಮರ ಸಾರಿದ್ದಾರೆ. ಭಾರತದಲ್ಲಿ 'ಮತ ಕಳ್ಳತನ' (Vote Chori) ನಡೆದಿದೆ ಎಂದು ಆರೋಪಿಸಿರುವ ರಾಠೀ, ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಲಂಡನ್‌ನಿಂದ ಧ್ರುವ್ ರಾಠೀ ಹೇಳಿದ್ದೇನು?

ಶುಕ್ರವಾರ (ಅ.16) ತಡರಾತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಧ್ರುವ್ ರಾಠೀ, ತಾವು ಲಂಡನ್ ತಲುಪಿರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ ಬ್ರಿಟನ್‌ನಲ್ಲಿರುವ ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರಿಗೆ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ನಾನು ಇದೀಗ ಲಂಡನ್ ತಲುಪಿದ್ದೇನೆ. 'ಮತ ಕಳ್ಳ' ಮತ್ತು 'ಪ್ರಜಾಪ್ರಭುತ್ವದ ಹಂತಕ'ನ ಅಸಲಿ ಮುಖವನ್ನು ಜಗತ್ತಿಗೆ ತೋರಿಸುವ ಸಮಯ ಬಂದಿದೆ. ನೀವೇನಾದರೂ ಲಂಡನ್‌ನಲ್ಲಿದ್ದರೆ, ಶನಿವಾರ ಮಧ್ಯಾಹ್ನ 12 ಗಂಟೆಗೆ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಮುಂದೆ ಬನ್ನಿ, ಪ್ರತಿಭಟನೆಯಲ್ಲಿ ಭಾಗವಹಿಸಿ," ಎಂದು ಅವರು ಬರೆದುಕೊಂಡಿದ್ದಾರೆ.

ದೆಹಲಿ ಡ್ರಾಮಾ ಬಳಿಕ ಲಂಡನ್​​ಗೆ ಪರಾರಿ!

ಕಳೆದ ವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ (CJP) ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಗೂ ಮುನ್ನ, ಗುರುಗ್ರಾಮ್‌ನ ತಮ್ಮ ನಿವಾಸದಲ್ಲಿದ್ದ ಧ್ರುವ್ ರಾಠೀ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಶನಿವಾರ ತಡರಾತ್ರಿ ಬಿಡುಗಡೆಯಾದ ಬಳಿಕ ಕಿಡಿಕಾರಿದ್ದ ರಾಠೀ, ಪೊಲೀಸರು ನನ್ನನ್ನು ಕಸ್ಟಡಿಗೆ ತೆಗೆದುಕೊಂಡಿರಲಿಲ್ಲ, ಬದಲಾಗಿ ಅಪಹರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆ ಮತ್ತು 'ಫಾರ್ಮ್ 6' ನಿಯಮಗಳಲ್ಲಿ ತರಲಾದ ಬದಲಾವಣೆಗಳ ವಿರುದ್ಧ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಈ ಸಿಜೆಪಿ ಪ್ರತಿಭಟನೆ ನಡೆದಿತ್ತು. ಅಲ್ಲಿಂದ ಬಿಡುಗಡೆಯಾದ ಬೆನ್ನಲ್ಲೇ ರಾಠೀ ಈಗ ಲಂಡನ್ ತಲುಪಿ ಹೋರಾಟ ಮುಂದುವರಿಸಿದ್ದಾರೆ.

Also Read
ವರದಿಗೆ ಹೋಗುವಾಗ ಈ ತಪ್ಪುಗಳನ್ನು ಮಾಡ್ಲೇಬೇಡಿ! ಫೀಲ್ಡ್ ರಿಪೋರ್ಟರ್‌ಗಳ ಸೇಫ್ಟಿಗೆ ಪ್ರೆಸ್​​ ಕೌಂನ್ಸಿಲ್​​ ಹೊಸ ರೂಲ್ಸ್! Field Reporting
YouTuber Dhruv Rathee has called for a protest in front of the Gandhi statue in London's Parliament Square.

ಇತ್ತ ಶ್ರೀರಾಮ, ಸೀತಾಮಾತೆ ವಿವಾದ

ಇತ್ತ ಭಾರತದಲ್ಲಿ ರಾಠೀ ವಿರುದ್ಧ ಕಾನೂನು ಸಂಕಷ್ಟ ಬಿಗಿಯಾಗಿದೆ. ಭಗವಾನ್ ಶ್ರೀರಾಮ ಮತ್ತು ಮಾತಾ ಸೀತೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಸುಪ್ರೀಂ ಕೋರ್ಟ್‌ನ ವಕೀಲರಾದ (AoR) ಅಮಿತಾ ಸಚ್​ದೇವ ಈ ಅರ್ಜಿ ಸಲ್ಲಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಿಡಿಯೋಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ಹಾಗೂ ಪರಿಹಾರ ನೀಡುವಂತೆ ಕೋರಿದ್ದಾರೆ. ಈ ವಿವಾದಿತ ವಿಷಯದ ಕುರಿತು ಕೇಂದ್ರ ಸರ್ಕಾರದ 'ಕುಂದುಕೊರತೆ ಮೇಲ್ಮನವಿ ಸಮಿತಿ' (GAC) ನಿರ್ದೇಶನದಂತೆ ಭಾರತದಲ್ಲಿ ಈ ವಿಡಿಯೋ ಯೂಟ್ಯೂಬ್‌ನಲ್ಲಿ ಮೊದಲೇ ನಿರ್ಬಂಧಕ್ಕೊಳಗಾಗಿದೆ. ಈ ಮಹತ್ವದ ಅರ್ಜಿಯ ವಿಚಾರಣೆಯನ್ನು ಸಾಕೇತ್ ನ್ಯಾಯಾಲಯ ನವೆಂಬರ್ 5ಕ್ಕೆ ಮುಂದೂಡಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net