ಸಿಎಂ ಸುವೇಂದು ಅಧಿಕಾರಿಗೆ ಅಲ್ಲಾಹ್ ಬೇಗ ಟಿಕೆಟ್ ಕಾಯ್ದಿರಿಸಲಿ ಎಂದ ಹುಮಾಯೂನ್ ಕಬೀರ್; ವಿವಾದವಾಗ್ತಿದ್ದಂತೆ ವಿಷಾದ | Humayun Kabir

ಪಶ್ಚಿಮ ಬಂಗಾಳದಲ್ಲಿ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆ ಕಣ ರಂಗೇರಿದ್ದು, ಎಜೆಯುಪಿ ಸಂಸ್ಥಾಪಕ ಮತ್ತು ಶಾಸಕ ಹುಮಾಯೂನ್ ಕಬೀರ್ ಅವರು, ಸಿಎಂ ಸುವೇಂದು ಅಧಿಕಾರಿ ಶೀಘ್ರವೇ ನಿರ್ಗಮಿಸಲಿ, ಅಲ್ಲಾಹ್ ಬೇಗನೇ ಅವರ ಟಿಕೆಟ್ ಕಾಯ್ದಿರಿಸಲಿ ಎಂದು ಕೋರುವುದಾಗಿ ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.
 Humayun Kabir
ಸಿಎಂ ಸುವೇಂದು ಅಧಿಕಾರಿ ಮತ್ತು ಹುಮಾಯೂನ್ ಕಬೀರ್
Published on: 

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆ ಕಣ ರಂಗೇರಿದ್ದು, ಎಜೆಯುಪಿ ಸಂಸ್ಥಾಪಕ ಮತ್ತು ಶಾಸಕ ಹುಮಾಯೂನ್ ಕಬೀರ್ ಅವರು, ಸಿಎಂ ಸುವೇಂದು ಅಧಿಕಾರಿ ಶೀಘ್ರವೇ ನಿರ್ಗಮಿಸಲಿ, ಅಲ್ಲಾಹ್ ಬೇಗನೇ ಅವರ ಟಿಕೆಟ್ ಕಾಯ್ದಿರಿಸಲಿ ಎಂದು ಕೋರುವುದಾಗಿ ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.

ರೆಜಿನಗರ ಉಪಚುನಾವಣೆ ಸಂಬಂಧ ಮುರ್ಷಿದಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಬೀರ್, ಅಧಿಕಾರಕ್ಕೆ ಬಂದ ಬಳಿಕ ಅಧಿಕಾರಿ ಅಹಂಕಾರಿಯಾಗಿದ್ದಾರೆ. ಅವರ ಅಧಿಕಾರವಧಿಯಲ್ಲಿ ಅಲ್ಪಸಂಖ್ಯಾತರನ್ನು ಕಿರುಕುಳಕ್ಕೊಳಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮತ್ತು ಸುವೇಂದು ಅಧಿಕಾರಿ ಮುಖ್ಯಮಂತ್ರಿ ಹುದ್ದೆ ತೊರೆದು ಮಾಜಿ ಮುಖ್ಯಮಂತ್ರಿಯಾಗಬೇಕೆಂದು ಬಯಸುವುದಾಗಿ ಹೇಳಿದ್ದಾರೆ.

Also Read
ದಕ್ಷಿಣ ಆಫ್ರಿಕಾದಲ್ಲಿ ಜೋಹಾನ್ಸ್ ಬರ್ಗ್ ಸೇರಿ ಎರಡು ನಗರಗಳಲ್ಲಿ ಸಾಮೂಹಿಕ ಗುಂಡಿನ ದಾಳಿ; 27 ಸಾವು, 26 ಮಂದಿಗೆ ಗಂಭೀರ ಗಾಯ | South Africa
 Humayun Kabir

ಅಷ್ಟೇ ಅಲ್ಲದೇ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಹಾಗೂ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರ ಸಾವುಗಳನ್ನು ಉಲ್ಲೇಖಿಸಿ, ಅಧಿಕಾರಿ ಆದಷ್ಟು ಬೇಗ ಈ ಲೋಕವನ್ನು ತೊರೆಯಲಿ ಎಂದು ನಾನು ಸರ್ವಶಕ್ತನ ಬಳಿ ಪ್ರಾರ್ಥಿಸುತ್ತೇನೆ. ಆಗ ಅವನ ಅಹಂಕಾರಕ್ಕೆ ಅಂತ್ಯ ಸಿಗುತ್ತದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ಕಿಡಿ

ಹುಮಾಯೂನ್ ಕಬೀರ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಮತ್ತು ಆರೋಗ್ಯ ಸಚಿವ ಶಾರ್ಧ್ವತ್ ಮುಖೋಪಾಧ್ಯಾಯ, ಯಾರಾದರೂ ಇಷ್ಟು ನಿರ್ಲಜ್ಜೆಯಿಂದ ಮಾತನಾಡಬಲ್ಲರು ಎಂದು ನನಗೆ ಊಹಿಸಲೂ ಸಾಧ್ಯವಾಗಲಿಲ್ಲ. ಅವರಿಗೆ ಸುವೇಂದು ಅಧಿಕಾರಿ ಇಷ್ಟವಿಲ್ಲದಿರಬಹುದು ಅಥವಾ ಅವರ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಇನ್ನೊಬ್ಬರ ಸಾವನ್ನು ಬಯಸಲು ಸಾಧ್ಯವೇ? ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

Also Read
ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ; ಸಿಎಂ ದೇವೇಂದ್ರ ಫಡ್ನವೀಸ್ ಆಕ್ರೋಶ | Devendra Fadnavis
 Humayun Kabir

ಅಧಿಕಾರಿ ಅವರನ್ನು ಯಾರಾದರೂ ಕೃಪೆ ತೋರಿ ಮುಖ್ಯಮಂತ್ರಿ ಮಾಡಿದ್ದಲ್ಲ, ಜನರೇ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಹುಮಾಯೂನ್ ಕಬೀರ್ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶಾಪ ಹಾಕಿದ ಮಾತ್ರಕ್ಕೆ ಹಸು ಸಾಯುವುದಿಲ್ಲ ಎಂದಿದ್ದಾರೆ.

ವಿಷಾದ ವ್ಯಕ್ತಪಡಿಸಿದ ಹುಮಾಯೂನ್ ಕಬೀರ್

ಸಿಎಂ ಅಧಿಕಾರಿ ಸಾವು ಬಯಸುವ ಹೇಳಿಕೆ ವಿವಾದವಾಗುತ್ತಿದ್ದಂತೆ ವಿಶಾದ ವ್ಯಕ್ತಪಡಿಸಿರುವ ಹುಮಾಯೂನ್ ಕಬೀರ್, ತಾವು ಮುಖ್ಯಮಂತ್ರಿಯವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಮತ್ತು ಪೊಲೀಸ್ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಆ ಹೇಳಿಕೆಗಳನ್ನು ನೀಡಿದ್ದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರು ದೀರ್ಘಕಾಲ ಬಾಳಲಿ, ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿ. ಮತ್ತು ಸುವೇಂದು ಅಧಿಕಾರಿ ಅವರು ಅಂತಿಮವಾಗಿ ಪ್ರಧಾನಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ.

2026ರ ವಿಧಾನಸಭಾ ಚುನಾವಣೆಯಲ್ಲಿ ರೆಜಿನಗರ ಮತ್ತು ನೌಡಾ ಎರಡರಲ್ಲೂ ಗೆದ್ದಿದ್ದ ಹುಮಾಯೂನ್ ಕಬೀರ್, ನೌಡಾವನ್ನು ಉಳಿಸಿಕೊಂಡು ರೆಜಿನಗರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಅಕ್ಟೋಬರ್ 6ರಂದು ರೆಜಿನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net