ದಕ್ಷಿಣ ಆಫ್ರಿಕಾದಲ್ಲಿ ಜೋಹಾನ್ಸ್ ಬರ್ಗ್ ಸೇರಿ ಎರಡು ನಗರಗಳಲ್ಲಿ ಸಾಮೂಹಿಕ ಗುಂಡಿನ ದಾಳಿ; 27 ಸಾವು, 26 ಮಂದಿಗೆ ಗಂಭೀರ ಗಾಯ | South Africa

ದಕ್ಷಿಣ ಆಫ್ರಿಕಾದಲ್ಲಿ ಜೋಹಾನ್ಸ್ ಬರ್ಗ್ ಸೇರಿ ಎರಡು ನಗರಗಳಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 27 ಜನ ಮೃತಪಟ್ಟಿದ್ದಾರೆ. ಮತ್ತು 26 ಮಂದಿ ಗಾಯಗೊಂಡಿದ್ದಾರೆ ಎಂದು ಭಾನುವಾರ(ಸೆ. 27) ವರದಿಯಾಗಿದೆ. ಗುಂಡಿನ ದಾಳಿಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಜೋಹಾನ್ಸ್ ಬರ್ಗ್ ಸೇರಿ ಎರಡು ನಗರಗಳಲ್ಲಿ ಸಾಮೂಹಿಕ ಗುಂಡಿನ ದಾಳಿ; 27 ಸಾವು, 26 ಮಂದಿಗೆ ಗಂಭೀರ ಗಾಯ | South Africa
Published on: 

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಜೋಹಾನ್ಸ್ ಬರ್ಗ್ ಸೇರಿ ಎರಡು ನಗರಗಳಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 27 ಜನ ಮೃತಪಟ್ಟಿದ್ದಾರೆ. ಮತ್ತು 26 ಮಂದಿ ಗಾಯಗೊಂಡಿದ್ದಾರೆ ಎಂದು ಭಾನುವಾರ(ಸೆ. 27) ವರದಿಯಾಗಿದೆ. ಗುಂಡಿನ ದಾಳಿಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್ ಸಮೀಪ ಈ ದಾಳಿಗಳು ನಡೆದಿವೆ. ಜೋಹಾನ್ಸ್ ಬರ್ಗ್ ಬಳಿಯ ವೆಡೆಲಾದಲ್ಲಿ ಹೋಟೆಲ್​ನಲ್ಲಿ ಸಮಾರಂಭ ನಡೆಯುವಾಗ ಬಂದೂಕುಧಾರಿಗಳು ದಾಳಿ ಮಾಡಿ, ಗುಂಡಿನ ಸುರಿಮಳೆ ಸುರಿಸಿದ್ದಾರೆ. ಅಲ್ಲಿ 17 ಜನ ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ.

ಕೇಪ್ ಟೌನ್ ಬಳಿಯ ಲ್ವಾಂಡಲ್​ನಲ್ಲಿ ನಡೆದ ದಾಳಿಯಲ್ಲಿ 10 ಮಂದಿ ಅಸುನೀಗಿದ್ದು, 11 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

Also Read
ರಾಜ್ಯದಲ್ಲಿ ಮತಪಟ್ಟಿಯಿಂದ 27 ಲಕ್ಷ ಹೆಸರು ಡಿಲೀಟ್ ಆಗಲು ಮಮತಾ ಬ್ಯಾನರ್ಜಿಯವರೇ ಕಾರಣ; ಸಿಎಂ ಸುವೇಂದು ಅಧಿಕಾರಿ | Suvendu Adhikari
ದಕ್ಷಿಣ ಆಫ್ರಿಕಾದಲ್ಲಿ ಜೋಹಾನ್ಸ್ ಬರ್ಗ್ ಸೇರಿ ಎರಡು ನಗರಗಳಲ್ಲಿ ಸಾಮೂಹಿಕ ಗುಂಡಿನ ದಾಳಿ; 27 ಸಾವು, 26 ಮಂದಿಗೆ ಗಂಭೀರ ಗಾಯ | South Africa

ರಾಯಿಟರ್ಸ್ ವರದಿ ಪ್ರಕಾರ, ಮೊದಲ ದಾಳಿ ಶನಿವಾರ(ಸೆ. 26) ರಾತ್ರಿ 9:30ರ ಸುಮಾರಿಗೆ ಜೋಹಾನ್ಸ್‌ಬರ್ಗ್‌ನ ನೈಋತ್ಯದಲ್ಲಿರುವ ಗೌಟೆಂಗ್‌ನ ವೆಸ್ಟ್ ರಾಂಡ್ ಜಿಲ್ಲೆಯ ವೆಡೆಲಾ ಟೌನ್‌ಶಿಪ್‌ನಲ್ಲಿರುವ ಒಂದು ಹೋಟೆಲಿನಲ್ಲಿ ನಡೆದಿದೆ. ಕೆ-47 ರೈಫಲ್‌ಗಳು ಮತ್ತು ಪಿಸ್ತೂಲ್‌ ಸಮೇತ ಹೋಟೆಲ್​ಗೆ ನುಗ್ಗಿದ 8 ಶಂಕಿತರು, ಗ್ರಾಹಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಫೋನ್​ಗಳನ್ನು ದೋಚಿಕೊಂಡು ಎರಡು ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಇಲ್ಲಿ 13 ಪುರುಷರು ಮತ್ತು ನಾಲ್ವರು ಮಹಿಳೆಯರು ಬಲಿಯಾಗಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ.

ಇನ್ನೊಂದು ದಾಳಿ ಪಶ್ಚಿಮ ಕೇಪ್‌ನ ಕೇಪ್ ಟೌನ್ ಬಳಿಯ ಲ್ವಾಂಡಲ್ ಟೌನ್‌ಶಿಪ್‌ನಲ್ಲಿ ಭಾನುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ನಡೆದಿದೆ. ಲ್ವಾಂಡಲ್‌ನ ಅಂಗಡಿಯೊಂದರ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ್ದು, 10 ಜನ ಸಾವನ್ನಪ್ಪಿ, 11 ಮಂದಿ ಗಾಯಗೊಂಡಿದ್ದಾರೆ. ಎರಡು ಘಟನೆಗಳ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಂಕಿತ ಆರೋಪಿಗಳಿಗೆ ಶೋಧ ನಡೆಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net