ಬಿಜೆಪಿಗೆ ಸೇರ್ಪಡೆಯಾದ ಕ್ರಿಕೆಟಿಗ ಯುಜುವೇಂದ್ರ ಚಾಹಲ್: ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಸಮಿತಿಯಲ್ಲಿ ಸ್ಥಾನ | Yuzvendra Chahal

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಕ್ರೀಡೆಯ ಜೊತೆ ರಾಜಕೀಯ ರಂಗ ಪ್ರವೇಶಿಸಿದ್ದು, ಇಂದು(ನ. 21) ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಅವರನ್ನು ಇತರ ಹಿಂದುಳಿದ ವರ್ಗಗಳ(ಒಬಿಸಿ) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಿದೆ.
ಬಿಜೆಪಿಗೆ ಸೇರ್ಪಡೆಯಾದ ಕ್ರಿಕೆಟಿಗ ಯುಜುವೇಂದ್ರ ಚಾಹಲ್: ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಸಮಿತಿಯಲ್ಲಿ ಸ್ಥಾನ | Yuzvendra Chahal
Published on: 

ನವದೆಹಲಿ: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಕ್ರೀಡೆಯ ಜೊತೆ ರಾಜಕೀಯ ರಂಗ ಪ್ರವೇಶಿಸಿದ್ದು, ಇಂದು(ನ. 21) ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಅವರನ್ನು ಇತರ ಹಿಂದುಳಿದ ವರ್ಗಗಳ(ಒಬಿಸಿ) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಿದೆ.

ಬಿಜೆಪಿ ಪಕ್ಷವು ವಿವಿಧ ರಾಜ್ಯಗಳಿಂದ ಏಳು ರಾಷ್ಟ್ರೀಯ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 37 ಸದಸ್ಯರ ಹೆಸರನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ ಈ ನೇಮಕಾತಿಗಳನ್ನು ಮಾಡಲಾಗಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಲೆಗ್-ಸ್ಪಿನ್ನರ್ ಚಾಹಲ್ ಇದಕ್ಕೂ ಮುನ್ನ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭಾ ಸಂಸದರಾದ ಅಮರ್ ಪಾಲ್ ಮೌರ್ಯ ಅವರನ್ನು ಭೇಟಿಯಾಗಿದ್ದರು. ಇಂದು ಬಿಜೆಪಿ ಒಬಿಸಿ ಮೋರ್ಚಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿ ವಿಭಾಗದ ಅಡಿಯಲ್ಲಿ ಚಾಹಲ್ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಒಡಿಶಾದ ಪ್ರೊಫೆಸರ್ ಅದ್ವೈತ್ ಚರಣ್ ಗಣನಾಯಕ್, ಉತ್ತರ ಪ್ರದೇಶದ ವಕೀಲೆ ಸೀಮಾ ಸಮೃದ್ಧಿ ಕುಶ್ವಾಹ ಇತರ ಇಬ್ಬರು ವಿಶೇಷ ಆಹ್ವಾನಿತ ಸದಸ್ಯರಾಗಿದ್ದಾರೆ.

Also Read
ಕೌಶಲ್ಯವಿದ್ರೆ ಎಐ ಯುಗದಲ್ಲೂ ಉದ್ಯೋಗಕ್ಕೆ ಯಾವುದೇ ಅಪಾಯವಿಲ್ಲ: ಪ್ರಧಾನಿ ಮೋದಿ | PM Modi
ಬಿಜೆಪಿಗೆ ಸೇರ್ಪಡೆಯಾದ ಕ್ರಿಕೆಟಿಗ ಯುಜುವೇಂದ್ರ ಚಾಹಲ್: ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಸಮಿತಿಯಲ್ಲಿ ಸ್ಥಾನ | Yuzvendra Chahal

ಇನ್ನೂ ಅಸ್ಸಾಂನ ಜೋಗೆನ್ ಮೋಹನ್, ಒಡಿಶಾದ ಮಮತಾ ಮೊಹಂತ, ಉತ್ತರ ಪ್ರದೇಶದ ಸಂಗಮ್ ಲಾಲ್ ಗುಪ್ತಾ, ಮಹಾರಾಷ್ಟ್ರದ ಬಬನ್‌ರಾವ್ ರಾವ್ ಚೌಧರಿ, ದೆಹಲಿಯ ಸತ್ ಪ್ರಕಾಶ್ ರಾಣಾ, ಬಿಹಾರದ ಅರ್ಜುನ್ ಸಾಹ್ನಿ ಮತ್ತು ಉತ್ತರ ಪ್ರದೇಶದ ಸಂಗೀತಾ ಬಲವಂತ್ ಬಿಂದ್ ಅವರನ್ನು ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ದೆಹಲಿಯಿಂದ ಗಜೇಂದ್ರ ಯಾದವ್, ಕರ್ನಾಟಕದಿಂದ ಪ್ರಮೋದ್ ಮಧ್ವರಾಜ್ ಮತ್ತು ಛತ್ತೀಸ್‌ಗಢದಿಂದ ಲಲಿತ್ ಚಂದ್ರಕರ್ ಅವರನ್ನು ನೇಮಿಸಲಾಗಿದೆ.

ಯಜುವೇಂದ್ರ ಚಾಹಲ್ ಯಾರು?

1990ರಲ್ಲಿ ಜನಿಸಿದ ಚಾಹಲ್ ಒಬ್ಬ ಭಾರತೀಯ ಕ್ರಿಕೆಟ್ ತಂಡದ ಲೆಗ್-ಸ್ಪಿನ್ನರ್, 2016ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್‌ಗಳನ್ನು ಮತ್ತು 80 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ 25 ರನ್‌ ನೀಡಿ ಆರು ವಿಕೆಟ್‌ ಪಡೆದಿದ್ದರು.

Also Read
ಬಂದಿದ್ದು ಸುಪ್ರೀಂಕೋರ್ಟ್ ಜಡ್ಜ್ ಅಂದುಕೊಂಡು ಅಸಾದುದ್ದೀನ್ ಓವೈಸಿಗೆ ಸಲ್ಯೂಟ್ ಹೊಡೆದ ಪೊಲೀಸರು! ಗಾರ್ಡ್ ಆಫ್ ಆನರ್ ವೇಳೆ ಎಡವಟ್ಟು | Guard of Honour
ಬಿಜೆಪಿಗೆ ಸೇರ್ಪಡೆಯಾದ ಕ್ರಿಕೆಟಿಗ ಯುಜುವೇಂದ್ರ ಚಾಹಲ್: ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಸಮಿತಿಯಲ್ಲಿ ಸ್ಥಾನ | Yuzvendra Chahal

ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ 2019ರ ಏಕದಿನ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳನ್ನು ಆಡಿ 12 ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೆ, 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.

ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಚಾಹಲ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ. 2023ರಲ್ಲಿ ಡ್ವೇನ್ ಬ್ರಾವೊ ಅವರನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ (ಏಜೆನ್ಸೀಸ್).