ಬಂದಿದ್ದು ಸುಪ್ರೀಂಕೋರ್ಟ್ ಜಡ್ಜ್ ಅಂದುಕೊಂಡು ಅಸಾದುದ್ದೀನ್ ಓವೈಸಿಗೆ ಸಲ್ಯೂಟ್ ಹೊಡೆದ ಪೊಲೀಸರು! ಗಾರ್ಡ್ ಆಫ್ ಆನರ್ ವೇಳೆ ಎಡವಟ್ಟು | Guard of Honour

ಉತ್ತರ ಪ್ರದೇಶದ ಸಹರಾನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ(ನ. 21) ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸ್ ಸಿಬ್ಬಂದಿ ತಪ್ಪಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಗೌರವ ರಕ್ಷೆ ನೀಡಿದ ಅಸಾಮಾನ್ಯ ಘಟನೆ ನಡೆದಿದೆ.
ಬಂದಿದ್ದು ಸುಪ್ರೀಂಕೋರ್ಟ್ ಜಡ್ಜ್ ಅಂದುಕೊಂಡು ಅಸಾದುದ್ದೀನ್ ಓವೈಸಿಗೆ ಸಲ್ಯೂಟ್ ಹೊಡೆದ ಪೊಲೀಸರು! ಗಾರ್ಡ್ ಆಫ್ ಆನರ್ ವೇಳೆ ಎಡವಟ್ಟು | Guard of Honour
Published on: 

ಲಖನೌ: ಉತ್ತರ ಪ್ರದೇಶದ ಸಹರಾನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ(ನ. 21) ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸ್ ಸಿಬ್ಬಂದಿ ತಪ್ಪಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಗೌರವ ವಂದನೆ ನೀಡಿದ ಅಸಾಮಾನ್ಯ ಘಟನೆ ನಡೆದಿದೆ.

ಅಸಾದುದ್ದೀನ್ ಓವೈಸಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಸರ್ಕ್ಯೂಟ್ ಹೌಸ್‌ಗೆ ಆಗಮಿಸುತ್ತಿದ್ದಂತೆ, ಅಲ್ಲಿ ನಿಂತಿದ್ದ ಪೊಲೀಸರು ಅವರಿಗೆ ಸೆಲ್ಯೂಟ್ ಮಾಡಲು ಪ್ರಾರಂಭಿಸಿದ್ದಾರೆ. ಪೊಲೀಸ್ ಸಿಬ್ಬಂದಿ ತಮಗೆ ಸೆಲ್ಯೂಟ್ ನೀಡುತ್ತಿರುವುದನ್ನು ನೋಡಿದ ಓವೈಸಿ ಅಲ್ಲಿಯೇ ನಿಂತು ಸೆಲ್ಯೂಟ್ ಸ್ವೀಕರಿಸಿದ್ದಾರೆ. ಆದರೆ, ಈ ಗೌರವ ವಂದನೆ ವಾಸ್ತವವಾಗಿ ಸರ್ಕ್ಯೂಟ್ ಹೌಸ್‌ಗೆ ಭೇಟಿ ನೀಡಬೇಕಿದ್ದ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ನೀಡಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.

ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸರ್ಕ್ಯೂಟ್ ಹೌಸ್ ಭೇಟಿ ನೀಡಿದ್ದು, ಅಲ್ಲಿ ಒಂದು ಕೋಣೆಯಲ್ಲಿ ಕುಳಿತು ಕಾಯುತ್ತಿದ್ದರು ಎನ್ನಲಾಗಿದೆ. ಸುಮಾರು 20 ನಿಮಿಷಗಳ ನಂತರ, ಓವೈಸಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಅಲ್ಲಿಗೆ ಆಗಮಿಸಿದ್ದಾರೆ.

Also Read
ತಾಜ್​ ಮಹಲ್ ನೋಡಲು ಪಾಕ್ ಸಚಿವ ಮುಸಾದಿಕ್ ಮಲಿಕ್ ನಿಯೋಗಕ್ಕೆ ಅನುಮತಿ: ನಿಜಾಮುದ್ದೀನ್ ದರ್ಗಾಕ್ಕೆ ನೋ ಎಂದ ಕೇಂದ್ರ | Musadik Malik
ಬಂದಿದ್ದು ಸುಪ್ರೀಂಕೋರ್ಟ್ ಜಡ್ಜ್ ಅಂದುಕೊಂಡು ಅಸಾದುದ್ದೀನ್ ಓವೈಸಿಗೆ ಸಲ್ಯೂಟ್ ಹೊಡೆದ ಪೊಲೀಸರು! ಗಾರ್ಡ್ ಆಫ್ ಆನರ್ ವೇಳೆ ಎಡವಟ್ಟು | Guard of Honour

ಓವೈಸಿ ಅವರೊಂದಿಗೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಬಂದಿದ್ದು ಸರ್ಕ್ಯೂಟ್ ಹೌಸ್‌ನಲ್ಲಿ ಗೌರವ ವಂದನೆಗಾಗಿ ನಿಯೋಜಿಸಲಾದ ಪೊಲೀಸರಲ್ಲಿ ಗೊಂದಲ ಉಂಟಾಗಿದ್ದು, ಅವರ ಆಗಮನವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಆಗಮನ ಎಂದು ತಪ್ಪಾಗಿ ಭಾವಿಸಿ, ನ್ಯಾಯಾಧೀಶರಿಗಾಗಿ ಕೊಡಬೇಕಿದ್ದ ಗೌರವ ವಂದನೆಯನ್ನು ಎಐಎಂಐಎಂ ಮುಖ್ಯಸ್ಥರಿಗೆ ನೀಡಿದ್ದಾರೆ.

ಏತನ್ಮಧ್ಯೆ, ಓವೈಸಿ ಮತ್ತು ಚಂದ್ರಶೇಖರ್ ಸರ್ಕ್ಯೂಟ್ ಹೌಸ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಪತ್ರಿಕಾಗೋಷ್ಠಿಯನ್ನು ಹಠಾತ್ತನೆ ರದ್ದುಪಡಿಸಲಾಯಿತು. ಬಳಿಕ ಇಬ್ಬರೂ ನಾಯಕರು ಸರ್ಕ್ಯೂಟ್ ಹೌಸ್‌ನಿಂದ ಹೊರಟು ನೇರವಾಗಿ ಕಲೆಕ್ಟರೇಟ್‌ಗೆ ತೆರಳಿ, ಅಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಭೇಟಿಯಾಗಿದ್ದಾರೆ. ಮುಂದಿನ ಯುಪಿ ಚುನಾವಣೆಗಾಗಿ ಓವೈಸಿ ಮತ್ತು ಚಂದ್ರಶೇಖರ್ ಅವರ ಪಕ್ಷಗಳು ಮೂರನೇ ಮೈತ್ರಿಕೂಟವನ್ನು ರಚಿಸಿವೆ (ಏಜೆನ್ಸೀಸ್).