ಲೆಹರಾ ದೋ ತಿರಂಗಾ ಯಾತ್ರೆಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸರ ವಶಕ್ಕೆ! | Abhijeet Dipke Detained

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲೆಹರಾ ದೋ ತಿರಂಗಾ ರಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಶುಕ್ರವಾರ ದೆಹಲಿ ಪೊಲೀಸರು ವಶಕ್ಕೆ (Abhijeet Dipke Detained) ಪಡೆದಿದ್ದಾರೆ. ರಾಲಿಯು ಆರಂಭವಾಗಲು ಕೆಲವೇ ನಿಮಿಷಗಳು ಬಾಕಿ ಇರುವಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಅಭಿಜಿತ್ ದೀಪ್ಕೆ ಪೊಲೀಸರ ವಶಕ್ಕೆ!
ಅಭಿಜಿತ್ ದೀಪ್ಕೆ ಪೊಲೀಸರ ವಶಕ್ಕೆ!
Published on: 

ಕಳೆದ ಒಂದು ವಾರದಲ್ಲಿ ಅಭಿಜಿತ್ ದೀಪ್ಕೆಯನ್ನು ವಶಕ್ಕೆ ಪಡೆದಿರುವ ಎರಡನೇ ನಿದರ್ಶನ ಇದಾಗಿದ್ದು, ಮುಂಬೈನಿಂದ ದೆಹಲಿಗೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ:ಮೊದಲು ನ್ಯಾಯಾಂಗವನ್ನು ಟೀಕಿಸೋದು, ಆಮೇಲೆ ನಮ್ಮ ಬಳಿಗೆ ಬರೋದು!...ನಿಖಿಲ್ ವಾಗ್ಲೆ ಮತ್ತು ರಾವುತ್‌ಗೆ ಸುಪ್ರೀಂ ನೋಟಿಸ್! | Contempt Of Court

ನೇಹಾ ಬೋರಾ ಬಂಧನ

ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಕಾನಾಟ್ ಪ್ಲೇಸ್‌ಗೆ ತೆರಳುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ​ಮುಖ್ಯಸ್ಥೆ ನೇಹಾ ಬೋರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆಗಳ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಶುಕ್ರವಾರದ ಪ್ರಸ್ತಾವಿತ ರಾಲಿಯ ಮುಂಚಿತವಾಗಿ, ದೆಹಲಿ ಪೊಲೀಸ್ ಸಿಬ್ಬಂದಿ ಅಭಿಜಿತ್ ದೀಪ್ಕೆ ಅವರ ನಿವಾಸಕ್ಕೆ ಭೇಟಿ ನೀಡಿ, ಮಾರ್ಚ್ ನಡೆಸದಂತೆ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದರು. ರಾಜಧಾನಿಯಲ್ಲಿ ಪ್ರತಿಭಟನೆಗಳ ಮೇಲಿನ ನಿರ್ಬಂಧಗಳ ವಿರುದ್ಧದ ತಿಕ್ಕಾಟದ ನಡುವೆಯೇ ದೀಪ್ಕೆ ಲೆಹರಾ ದೋ ತಿರಂಗಾ ರಾಲಿಯನ್ನು ಘೋಷಿಸಿದ್ದರು. ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳವಲ್ಲ ಎಂದು ಡಿನೋಟಿಫೈ ಮಾಡಿರುವುದು ಹಾಗೂ ಚುನಾವಣಾ ಆಯೋಗದ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಈ ಯಾತ್ರೆಯನ್ನು ಆಯೋಜಿಸಲಾಗಿತ್ತು.

Also Read
ಲೆಹರಾ ದೋ ತಿರಂಗಾ ಯಾತ್ರೆಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸರ ವಶಕ್ಕೆ! | Abhijeet Dipke Detained
ಅಭಿಜಿತ್ ದೀಪ್ಕೆ ಪೊಲೀಸರ ವಶಕ್ಕೆ!

ಅಕ್ಟೋಬರ್ 13 ರಂದು ರಾಷ್ಟ್ರಧ್ವಜವನ್ನು ಹಾರಿಸುತ್ತಾ ಜಂತರ್ ಮಂತರ್ ಪ್ರವೇಶಿಸಿದ್ದ ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾರನ್ನು ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿರಂಗಾ ಯಾತ್ರೆಗೆ ಇದೇ ಕಾರಣ ಎನ್ನಲಾಗಿದೆ. ಜಂತರ್​ ಮಂತರ್​ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಆದೇಶಿಸಿದ ಬಳಿಕ ಹೋರಾಟಕ್ಕೆ ಮುಂದಾಗಿದ್ದ ಈ ಸಿಜೆಪಿ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net