ಆರು ತಿಂಗಳಲ್ಲೇ ಬಂಗಾಳದಲ್ಲಿ ಯುಸಿಸಿ ಜಾರಿ, ಲವ್ ಜಿಹಾದ್ ವಿರುದ್ಧವೂ ಕಠಿಣ ಕಾನೂನು: ಪರಂಪರೆಯ ಮೇಲೆ ದಾಳಿಯಾದ್ರೆ ಸುಮ್ಮನಿರಲ್ಲ: ಸುವೇಂದು ಅಧಿಕಾರಿ | Suvendu Adhikari

ಕೋಲ್ಕತ್ತಾ: ಗುಜರಾತ್ ಮತ್ತು ಉತ್ತರಾಖಂಡ ರಾಜ್ಯಗಳ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ಸಮಾನ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೆ ತರುವುದಾಗಿ ಭಾನುವಾರ (ಅ.4) ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಘೋಷಿಸಿದ್ದಾರೆ.
ಸಿಎಂ ಸುವೇಂದು ಅಧಿಕಾರಿ
ಸಿಎಂ ಸುವೇಂದು ಅಧಿಕಾರಿ
Published on: 

ಕೋಲ್ಕತ್ತಾ: ಗುಜರಾತ್ ಮತ್ತು ಉತ್ತರಾಖಂಡ ರಾಜ್ಯಗಳ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ಸಮಾನ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೆ ತರುವುದಾಗಿ ಭಾನುವಾರ (ಅ.4) ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಘೋಷಿಸಿದ್ದಾರೆ. ಇದಷ್ಟೆ ಅಲ್ಲದೆ, ರಾಜ್ಯದಲ್ಲಿ ಮುಂದಿನ ಆರು ತಿಂಗಳೊಳಗೆ ಲವ್ ಜಿಹಾದ್ ಮತ್ತು ಭೂ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಜೊತೆಗೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದಾಗಿಯೂ ಭರವಸೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸುವೇಂದು, ನಾವು ಸಮಾನ ನಾಗರಿಕ ಸಂಹಿತೆಯ ನಂತರ ಲವ್ ಜಿಹಾದ್, ಭೂ ಜಿಹಾದ್ ಮತ್ತು ಮತಾಂತರಗಳ ವಿರುದ್ಧ ಕಠಿಣ ಕಾನೂನುಗಳನ್ನು ತರಲಿದ್ದೇವೆ. ನಮಗೆ ಆರು ತಿಂಗಳ ಕಾಲಾವಕಾಶ ನೀಡಿ ಎಂದು ಹೇಳಿದರು

ಈ ವರ್ಷದ ಪ್ರಾರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಯುಸಿಸಿ ಜಾರಿಗೆ ತರುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈಗ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರವು ಯುಸಿಸಿ ಕರಡನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ಕೂಡ ರಚಿಸಿದ್ದು, ಅದರ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೊಡಲಿಯಿಂದ ದಾಳಿಗೊಳಗಾದಾಗಲೂ ಹನುಮಾನ್ ಚಾಲೀಸಾ ಪಠಿಸಿದ್ದ ಸ್ಮಿತ್ ಮಚ್ಚಾರ್​: ಕಷ್ಟಕಾಲದಲ್ಲಿ ನಮಗೆ ಬಜರಂಗಬಲಿಯೇ ನೆನಪಾಗೋದೇಕೆ..? | Machchhar Recited Hanuman Chalisa

ಪಶ್ಚಿಮ ಬಂಗಾಳದಲ್ಲಿ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ಸಮುದಾಯಗಳ ನಾಗರಿಕ ಕಾನೂನುಗಳನ್ನು ಯುಸಿಸಿ ಪ್ರಮಾಣೀಕರಿಸಲಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಟಿಎಂಸಿ ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ

ಮುಂದುವರೆದು ಮಾತನಾಡಿದ ಸುವೇಂದು ಅಧಿಕಾರಿ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಟಿಎಂಸಿ ಈ ಹಿಂದೆ ಜನರ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿತ್ತು ಮತ್ತು ಬಂಗಾಳಿಗಳು ಮತ್ತು ಬಂಗಾಳೇತರರ ನಡುವೆ ಮಮತಾ ಸರ್ಕಾರವು ಬಿರುಕು ಮೂಡಿಸಿದೆ ಎಂದು ಹೇಳಿದರು.

Also Read
ಕಾಲು ಗಾಯದ ನಾಟಕವಾಡಿ ಅಧಿಕಾರಕ್ಕೇರಿದ್ದರಾ ಮಮತಾ ಬ್ಯಾನರ್ಜಿ..? ಇದರ ಬಗ್ಗೆ ತನಿಖೆ ನಡೆಸಿಯೇ ಸಿದ್ಧ ಅಂದ್ರು ಸಿಎಂ ಸುವೇಂದು! | Mamata Banerjee Leg Injury
ಸಿಎಂ ಸುವೇಂದು ಅಧಿಕಾರಿ

ನಮ್ಮ ಸರ್ಕಾರ ಬಂದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ದಾಳಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಮತ್ತು ರಾಜ್ಯದಲ್ಲಿ ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತಾ, ಭಯೋತ್ಪಾದಕರು ಜನರ ಗುರುತನ್ನು ಆಧರಿಸಿ ಹತ್ಯೆ ಮಾಡಿದಾಗ ಕೆಲವರು ಮೌನವಾಗಿದ್ದರು ಎಂದು ಪರೋಕ್ಷವಾಗಿ ಟಿಎಂಸಿ ಸರ್ಕಾರದ ವಿರುದ್ಧ ಮುಗಿಬಿದ್ದರು.

ಸರ್ಕಾರವು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವ ನಂಬಿಕೆಯನ್ನು ನಮ್ಮ ಮೇಲಿಟ್ಟು ರಾಜ್ಯದ ಜನರು ನಿರಾಳವಾಗಿರಬಹುದು, ಭಾರತೀಯ ಸಂಸ್ಕೃತಿ, ಸನಾತನ ಪರಂಪರೆಗಳು, ದೇವಾಲಯಗಳು ಮತ್ತು ಮಠಗಳ ಮೇಲೆ ಹಾಗೂ ಆಧ್ಯಾತ್ಮಿಕ ದಿಗ್ಗಜರಾದ ವಿವೇಕಾನಂದರು ಮತ್ತು ಮಹಾಪ್ರಭು ಶ್ರೀ ಚೈತನ್ಯರು ಪ್ರತಿಪಾದಿಸಿದ ನಮ್ಮ ಪರಂಪರೆಯ ಮೇಲೆ ಯಾವುದೇ ದಾಳಿಯನ್ನು ಬಿಜೆಪಿ ಸರ್ಕಾರ ಸಹಿಸುವುದಿಲ್ಲ ಎಂದರು.

ರಾಮಜನ್ಮಭೂಮಿ ಚಳುವಳಿಯನ್ನು ಸ್ಮರಿಸಿಕೊಂಡ ಸುವೇಂದು ಅಧಿಕಾರಿ, ತಾವು ಕೂಡ ಆ ಹೋರಾಟದ ಭಾಗವಾಗಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡರು. ಆಗ ಲಾಲ್ ಕೃಷ್ಣ ಅಡ್ವಾಣಿ ಅವರು ಕೈಗೊಂಡಿದ್ದ ರಥಯಾತ್ರೆಯ ಮಾರ್ಗದಲ್ಲಿ ಈ ಪ್ರದೇಶವಿರಲಿಲ್ಲವಾದ್ದರಿಂದ, ಇಲ್ಲಿ ಶಿಲೆಗಳನ್ನು ಹೊತ್ತ ಪ್ರತ್ಯೇಕ ರಥವನ್ನು ಸಿದ್ಧಪಡಿಸಲಾಗಿತ್ತು. ಅಂದು ಹಿಂದೂ ಕುಟುಂಬದ ಮಗನಾಗಿ ನಾನು ಸ್ವಯಂಸೇವಕನಾಗಿ ಕೆಲಸ ಮಾಡಿದ್ದೆ ಎಂದು ಅವರು ನೆನಪಿಸಿಕೊಂಡರು.(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net