LIVE: ಜಲಪೂರೈಕೆ ಯೋಜನೆ- ಮಣಿಪುರದ ಮಹಿಳೆಯರಿಗೆ ರಕ್ಷಾಬಂಧನದ ಉಡುಗೊರೆ- ಪ್ರಧಾನಿ

PM Modi
Published on

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಣಿಪುರ ವಾಟರ್ ಸಪ್ಲೈ ಪ್ರಾಜೆಕ್ಟ್​ ಗೆ ಶಂಕುಸ್ಥಾಪನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಣಿಪುರದ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿಗಳು, ಶಾಸಕರು, ಸಂಸದರು ಈ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದ ನೇರ ಪ್ರಸಾರದ ವಿಡಿಯೋ ಮೇಲಿದೆ.

ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಶುದ್ಧ ಮತ್ತು ಸುರಕ್ಷಿತವಾದ ಕುಡಿಯುವ ನೀರನ್ನು ಬೇಕಾದಷ್ಟು ಪ್ರಮಾಣದಲ್ಲಿ ಪೂರೈಸುವ ಭಾರತ ಸರ್ಕಾರದ ಜಲ ಜೀವನ್ ಮಿಷನ್​ ಯೋಜನೆ ಪ್ರಕಾರ, ಈ ಯೋಜನೆಯನ್ನು ರೂಪಿಸಲಾಗುತ್ತಿದೆ.ಜಲ ಜೀವನ್ ಮಿಷನ್ ಎಂಬುದು ಸಮುದಾಯ ಕೇಂದ್ರಿತ ಯೋಜನೆಯಾಗಿದ್ದು, ಇದರಲ್ಲಿ ಜನರಿಗೆ ಮಾಹಿತಿ ಒದಗಿಸುವುದು, ತಿಳಿವಳಿಕೆ ಮೂಡಿಸುವುದು ಮತ್ತು ಸಂವಹನಗಳ ಮೂಲಕ ಅವರನ್ನು ಜಾಗೃತರನ್ನಾಗಿಸುವುದು ಕೂಡ ಈ ಯೋಜನೆಯ ಉದ್ದೇಶ. ನೀರಿಗಾಗಿ ಜನ ಆಂದೋಲವನ್ನು ರೂಪಿಸುವ ಉದ್ದೇಶ ಸರ್ಕಾರದ್ದು.

ಮಣಿಪುರದ 1,185 ವಸತಿ ಪ್ರದೇಶಗಳ 1,42, 749 ಮನೆಗಳಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಪೂರೈಸುವುದಕ್ಕಾಗಿ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಮೂಲಕ ಹಣಕಾಸಿನ ನೆರವನ್ನು ಮಣಿಪುರಕ್ಕೆ ನೀಡುತ್ತಿದೆ. ಮಣಿಪುರ ಸರ್ಕಾರವೂ ಹೆಚ್ಚುವರಿಯಾಗಿ ಹಣಕಾಸಿನ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಇನ್ನುಳಿದಿರುವ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನು ಮಾಡಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net