ಜಿಬೌಟಿ ಕರಾವಳಿಯಲ್ಲಿ ದುರಂತ: ಜನದಟ್ಟಣೆಯಿಂದ ತುಂಬಿದ್ದ ಹಡಗು ಮಗುಚಿ 15 ಮಕ್ಕಳು ಸೇರಿದಂತೆ 139 ಮಂದಿ ಸಾವು, 84 ಜನ ನಾಪತ್ತೆ | boat capsizes

ಯೆಮೆನ್‌ನತ್ತ 300ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಜಿಬೌಟಿ ಕರಾವಳಿಯಲ್ಲಿ ಮಗುಚಿ ಬಿದ್ದ ಪರಿಣಾಮ, 15 ಮಕ್ಕಳು ಸೇರಿದಂತೆ ಕನಿಷ್ಠ 139 ಮಂದಿ ಮೃತಪಟ್ಟಿದ್ದು, 84 ಜನ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಏಜೆನ್ಸಿ ತಿಳಿಸಿದೆ ಎಂದು ವರದಿಯಾಗಿದೆ.
ಜಿಬೌಟಿ ಕರಾವಳಿಯಲ್ಲಿ ದುರಂತ: ಜನದಟ್ಟಣೆಯಿಂದ ತುಂಬಿದ್ದ ಹಡಗು ಮಗುಚಿ 15 ಮಕ್ಕಳು ಸೇರಿದಂತೆ 139 ಮಂದಿ ಸಾವು, 84 ಜನ ನಾಪತ್ತೆ | boat capsizes
Published on: 

Boat capsizes: ಯೆಮೆನ್‌ನತ್ತ 300ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಜಿಬೌಟಿ ಕರಾವಳಿಯಲ್ಲಿ ಮಗುಚಿ ಬಿದ್ದ ಪರಿಣಾಮ, 15 ಮಕ್ಕಳು ಸೇರಿದಂತೆ ಕನಿಷ್ಠ 139 ಮಂದಿ ಮೃತಪಟ್ಟಿದ್ದು, 84 ಜನ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಏಜೆನ್ಸಿ ತಿಳಿಸಿದೆ ಎಂದು ವರದಿಯಾಗಿದೆ.

ಅಂತರರಾಷ್ಟ್ರೀಯ ವಲಸೆ ಏಜೆನ್ಸಿ ಪ್ರಕಾರ, ಅಕ್ಟೋಬರ್ 8-9ರ ರಾತ್ರಿ ಏಡನ್ ಕೊಲ್ಲಿಯಲ್ಲಿರುವ ಜಿಬೌಟಿಯ ಪೂರ್ವ ಕರಾವಳಿಯ ಗುಹೆರೆ ಬಳಿ ಈ ಘಟನೆ ನಡೆದಿದೆ. ಹಡಗು ಮುಳುಗುವಾಗ ಅದರಲ್ಲಿ 305 ಮಂದಿ ಪ್ರಯಾಣಿಸುತ್ತಿದ್ದರು ಮತ್ತು ಅವರಲ್ಲಿ ಬಹುಪಾಲು ಜನರು ಇಥಿಯೋಪಿಯನ್ನರಾಗಿದ್ದರು. 84 ಜನ ಬದುಕುಳಿದಿದ್ದಾರೆ ಎಂದು ತಿಳಿಸಿದೆ.

ಆರಂಭದಲ್ಲಿ 109 ಸಾವುಗಳು ಮತ್ತು 116 ಜನರು ಕಾಣೆಯಾಗಿದ್ದಾರೆ ಎಂದು ಏಜೆನ್ಸಿ ವರದಿ ಮಾಡಿತ್ತು. ಆದರೆ ಹೆಚ್ಚಿನ ಶವಗಳು ಪತ್ತೆಯಾದ ಬಳಿಕ ಸಾವಿನ ಸಂಖ್ಯೆ 139ಕ್ಕೆ ಏರಿಕೆಯಾಗಿದ್ದು, 84 ಜನ ಕಾಣೆಯಾಗಿದ್ದಾರೆ ಎಂದು ಹೇಳಿದೆ.

Also Read
ಎಸ್​ಐಆರ್ ಅಕ್ರಮ: ದೆಹಲಿಯಲ್ಲಿಂದು ಮತ್ತೆ ಇಂಡಿಯಾ ಬ್ಲಾಕ್​ ಬೃಹತ್ ಪ್ರತಿಭಟನೆ; ಸುಪ್ರೀಂಕೋರ್ಟ್​ಗೆ ಮೆರವಣಿಗೆ, ಭೇಟಿಗೆ ನಿರಾಕರಿಸಿದ ಸಿಜೆಐ| INDIA Bloc
ಜಿಬೌಟಿ ಕರಾವಳಿಯಲ್ಲಿ ದುರಂತ: ಜನದಟ್ಟಣೆಯಿಂದ ತುಂಬಿದ್ದ ಹಡಗು ಮಗುಚಿ 15 ಮಕ್ಕಳು ಸೇರಿದಂತೆ 139 ಮಂದಿ ಸಾವು, 84 ಜನ ನಾಪತ್ತೆ | boat capsizes

ಈ ಕುರಿತು ಮಾಹಿತಿ ನೀಡಿರುವ ಬೌಟಿಯಲ್ಲಿರುವ ಐಒಎಂನ ಕಾರ್ಯಾಚರಣೆಯ ಮುಖ್ಯಸ್ಥ ಅಲೆಕ್ಸಾಂಡ್ರೆ ಕೊಯ್ಸಾಕ್, ದೃಢಪಟ್ಟಿರುವ ಮೃತರ ಸಂಖ್ಯೆಯು ಜಿಬೌಟಿಯಲ್ಲಿ ಅಧಿಕಾರಿಗಳಿಂದ ಅಂತ್ಯಸಂಸ್ಕಾರಕ್ಕೊಳಗಾದವರನ್ನು ಮಾತ್ರ ಒಳಗೊಂಡಿದೆ, ಹೆಚ್ಚುವರಿ ಶವಗಳು ಸಿಕ್ಕಂತೆ ಈ ಸಂಖ್ಯೆ ಏರಿಕೆಯಾಗಬಹುದು ಎಂದು ಹೇಳಿದ್ದಾರೆ.

ಇನ್ನೂ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾ ಮುಂದುವರೆದಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net