

ನವದೆಹಲಿ: ಉತ್ತರ ಪ್ರದೇಶದ ಬೆನ್ನಲ್ಲೇ ಹಿಮಾಚಲ ಪ್ರದೇಶದ Himachal Pradesh ಕಾಂಗ್ರೆಸ್ ಸರ್ಕಾರ ಅಲ್ಲಿನ ಢಾಬಾಗಳು, ರೆಸ್ಟೋರೆಂಟ್ಗಳು ಸೇರಿದಂತೆ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಲ್ಲಿ ಅವುಗಳ ಮಾಲೀಕರು, ವ್ಯವಸ್ಥಾಪಕರ ಹಾಗೂ ಸಿಬ್ಬಂದಿ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಹೇಳಿದೆ.
ಪಾರದರ್ಶಕತೆ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಜಾರಿ ಮಾಡುತ್ತಿರುವುದಾಗಿ ಹೇಳಿದೆ. ಬುಧವಾರದಿಂದ ರಾಜ್ಯಾದ್ಯಂತ ಎಲ್ಲ ಆಹಾರ ಸಂಸ್ಥೆಗಳಲ್ಲಿ ಮಾಲೀಕರು ಮತ್ತು ವ್ಯವಸ್ಥಾಪಕರು ಮತ್ತು ವ್ಯವಸ್ಥಾಪಕರ ಹೆಸರು, ವಿಳಾಸಗಳನ್ನು ಪ್ರದರ್ಶಿಸಬೇಕು ಎಂದು ಆದೇಶಿಸಲಾಗಿದೆ.
ಈ ಕುರಿತು ಟ್ಟೀಟ್ ಮಾಡಿರುವ ರಾಜ್ಯ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್, "ಹಿಮಾಚಲ ಪ್ರದೇಶದಲ್ಲಿರುವ ಢಾಬಾಗಳು, ರೆಸ್ಟೋರೆಂಟ್ಗಳು ಸೇರಿದಂತೆ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಲ್ಲಿ ಅವುಗಳ ಮಾಲೀಕರು, ವ್ಯವಸ್ಥಾಪಕರ ಹಾಗೂ ಸಿಬ್ಬಂದಿ ಹೆಸರುಗಳಿರುವ ಗುರುತಿನ ಚೀಟಿಯನ್ನು ಪ್ರದರ್ಶಿಸುತ್ತವೆ. ಇದರಿಂದ ಜನರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಢಾಬಾ, ರೆಸ್ಟೋರೆಂಟ್ಗಳಲ್ಲಿ ಆಹಾರ ಪದಾರ್ಥಗಳು ಹಾಗು ಹಣ್ಣಿನ ಜ್ಯೂಸ್ನಲ್ಲಿ ಮೂತ್ರ ಸೇರಿಸಲಾಗುತ್ತಿದೆ. ಅವುಗಳ ಮೇಲೆ ಉಗುಳಲಾಗುತ್ತಿದೆ ಎಂಬ ವ್ಯಾಪಕ ಆರೋಪಗಳ ಕೇಳಿ ಬಂದ ಬೆನ್ನಲ್ಲೇ ಸರ್ಕಾರ ಈ ನಿರ್ದೇಶನ ನೀಡಿದೆ ಎನ್ನಲಾಗುತ್ತಿದೆ.