

ಮುಂಬೈ: ಈದ್ ಮಿಲಾದ್ ರಜೆಯನ್ನು ಮುಂಬೈನಲ್ಲಿ ಸೆಪ್ಟೆಂಬರ್ 16 ಕ್ಕೆ ಬದಲಾಗಿ ಸೆಪ್ಟೆಂಬರ್ 18 ಕ್ಕೆ ಮರು ನಿಗದಿಪಡಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಶುಕ್ರವಾರ ರಜೆ ಬದಲಾವಣೆಯನ್ನು ಪ್ರಕಟಿಸಿದೆ.
ಮುಂಬೈನಲ್ಲಿ ಗಣೇಶ ಹಬ್ಬ 4-5ದಿನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಬ್ಬದ ಕೊನೆಯ ದಿನವಾದ ಅನಂತ ಚತುರ್ದಶಿ ಸೆಪ್ಟೆಂಬರ್ 17ಕ್ಕೆ ಇದ್ದು, ಸೆ.16ರಂದು ಸಹ ಗಣೇಶ ವಿಸರ್ಜನೆ ಮೆರವಣಿಗೆಗಳು ನಡೆಯುತ್ತವೆ. ಇನ್ನು ಸೆ.17ರಂದು ದೊಡ್ಡ ಪ್ರಮಾಣದ ಗಣಪತಿ ವಿಸರ್ಜನಾ ಮೆರವಣಿಗೆಗಳು ನಡೆಯಲಿವೆ. ಈ ಕಾರಣದಿಂದಾಗಿ ಮುಸ್ಲಿಮರ ಈದ್-ಇ-ಮಿಲಾದ್ ಮೆರವಣಿಗೆಗಳನ್ನು ಸೆ.18 ಕ್ಕೆ ಬದಲಾಯಿಸಲು ಸರ್ಕಾರ ನಿರ್ಧರಿಸಿ ಆದೇಶಿಸಿದೆ.
ಇನ್ನು ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲಿನ ಜಿಲ್ಲಾಧಿಕಾರಿಗಳು ಸ್ಥಳೀಯ ಸಂದರ್ಭಗಳಿಗೆ ಅನುಗುಣವಾಗಿ ಇದೇ ರೀತಿಯ ಹೊಂದಾಣಿಕೆಗಳನ್ನು ಮಾಡಬಹುದು ಎಂದು ಸರ್ಕಾರ ತಿಳಿಸಿದೆ. ಪ್ರವಾದಿ ಮುಹಮ್ಮದ್ ಜನ್ಮದಿನವನ್ನು ಈದ್ ಮಿಲಾದ್ ಆಗಿ ಆಚರಿಸಲಾಗುತ್ತದೆ.