

ಮುಂಬೈ: ಭಾರತೀಯ ಚಿತ್ರೋದ್ಯಮದಲ್ಲಿ ಯಾವ ಚಿತ್ರರಂಗಕ್ಕೆ ಬಂದರೂ ನಷ್ಟವಿಲ್ಲ. ಒಳ್ಳೆಯ ಕಥಾಹಂದರ, ನೋಡುಗರಿಗೆ ಹಿತವೆನ್ನಿಸುವ ಚಿತ್ರಗಳ ಮುಖೇನ ಪ್ರೇಕ್ಷಕರ ಮುಂದೆ ಹಾಜರಾಗುವುದು ಮೊದಲ ಸವಾಲು. ಆ ಸವಾಲನ್ನು ಗೆದ್ದು, ನೋಡುಗರ ಮೆಚ್ಚುಗೆ, ಪ್ರಶಂಸೆಗೆ ಪಾತ್ರರಾದರೆ, ಖಂಡಿತ ಗೆಲುವು ಶತಸಿದ್ಧ. ಈ ಸಾಲಿಗೆ ಇಂದು ಅನೇಕ ಯುವ ನಟ-ನಟಿಯರು ಸೇರ್ಪಡೆಗೊಂಡಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು, ಅದ್ಭುತ ಯಶಸ್ಸನ್ನು ಕಂಡವರು, ಕೇವಲ ಚಿತ್ರೋದ್ಯಮದಲ್ಲಿ ಮುಂದುವರಿಯುವುದು ಮಾತ್ರವಲ್ಲ, ಇಂದಿಗೂ ತಮ್ಮ ಮೊದಲ ಪಾತ್ರದಿಂದಲೇ (Hot Beauty) ಗುರುತಿಸಿಕೊಳ್ಳುತ್ತಾರೆ.
ಆ ಪಟ್ಟಿಯಲ್ಲಿ ಬಾಲಿವುಡ್ನ ಈ ಹಾಟ್ ಬೆಡಗಿ ಕೂಡ ಇದ್ದಾರೆ. ಅಂದು ಭಾರತದ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಪಡೆದ ಈಕೆ, ತನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡು, ಬಹಳ ಸರಳ ಅಭಿನಯ, ಡೈಲಾಗ್ಗಳಿಂದಲೇ ಸಿನಿಪ್ರಿಯರ ಹೃದಯ ಗೆದ್ದರು. ಆ ನಟಿ ಬೇರಾರು ಅಲ್ಲ ಇಂದು ನೋಡುಗರ ಹುಬ್ಬೇರಿಸುವಂತಹ ಹಾಟ್ ಬೆಡಗಿ ದಿಶಾ ಪಟಾನಿ. ಎಂ.ಎಸ್. ಧೋನಿ ಅವರ ಪ್ರೇಯಸಿ ಪ್ರಿಯಾಂಕಾ ಪಾತ್ರವನ್ನು ನಿಭಾಯಿಸಿದ ದಿಶಾ, ಮುದ್ದು ಮಾತುಗಳಿಂದಲೇ ಚಿತ್ರರಸಿಕರ ಗಮನಸೆಳೆದಿದ್ದರು.
ಈ ಚಿತ್ರದ ಬಳಿಕ ಹಲವಾರು ನಟರೊಂದಿಗೆ ಅಭಿನಯಿಸಿದ ದಿಶಾ, ಕಾಣಿಸಿಕೊಂಡಿದ್ದೆಲ್ಲ ಹಾಟ್ ಆಗಿಯೇ. 'ಎಂ.ಎಸ್. ಧೋನಿ ದಿ ಅನ್ಟೋಲ್ಡ್ ಸ್ಟೋರಿ' ಚಿತ್ರವನ್ನು ಹೊರತುಪಡಿಸಿದರೆ, ಬಹುತೇಕ ಚಿತ್ರಗಳಲ್ಲಿ ಅವರ ಲುಕ್ಗಳು ಬಹಳ ಹಾಟ್ ಆಗಿರುವುದನ್ನು ಸಿನಿಪ್ರೇಕ್ಷಕರು ನೋಡಿದ್ದಾರೆ. ಸದ್ಯ ಬಾಲಿವುಡ್ ಅಂಗಳದ ಹಾಟ್ ನಟಿ ಎಂದೇ ಕರೆಸಿಕೊಳ್ಳುವ ದಿಶಾ ಪಟಾನಿ, ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ನಟಿಸಿರುವ 'ಕಂಗುವ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರಕ್ಕೆ ಆಕೆ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
'ಕಂಗುವ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಇದೀಗ ತಮಿಳು ಚಿತ್ರರಂಗದಕ್ಕೆ ಪದಾರ್ಪಣೆ ಮಾಡಿರುವ ದಿಶಾ, ಈ ಹಿಂದೆ ನಿರ್ದೇಶಕ ಸುಂದರ್ ಸಿ ಅವರ 'ಸಂಗಮಿತ್ರ' ಚಿತ್ರದ ಮುಖಾಂತರ ಕಾಲಿವುಡ್ಗೆ ಎಂಟ್ರಿ ಕೊಡಬೇಕಿತ್ತು. ಆದರೆ, ಈ ಸಿನಿಮಾ ರಿಲೀಸ್ ದಿನಾಂಕದಿಂದ ಸದ್ಯ ದೂರ ಉಳಿದ ಹಿನ್ನಲೆ ಕಂಗುವ ಮೊದಲು ಬಿಡುಗಡೆ ಕಂಡಿದೆ. ಪ್ರಸ್ತುತ ಬಾಲಿವುಡ್ನಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಸಾಗುತ್ತಿರುವ ದಿಶಾ, ಮುಂಬರುವ 'ಮಲಂಗ್ 2' ಚಿತ್ರದ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ,(ಏಜೆನ್ಸೀಸ್).