More

    ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ನ.4ಕ್ಕೆ ಬಿಡುಗಡೆ: ಈ ಚಿತ್ರಕ್ಕಿದೆ ಸೆಲೆಬ್ರಿಟಿಗಳ ಸಾಥ್​

    ಬೆಂಗಳೂರು: ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತನ್ನ ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ಕಂಬ್ಳಿಹುಳ ಸಿನಿಮಾ ನವೆಂಬರ್​ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

    ಈಗಾಗಲೇ ಹಾಡುಗಳಿಂದಲೇ ಕಂಬ್ಳಿಹುಳ ಸಿನಿಮಾ ಜನರ ಹೃದಯವನ್ನು ಮುಟ್ಟಿದೆ. ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಅವರ ಸುಮಧುರ ಕಂಠದಿಂದ ಮೂಡಿಬಂದಿರುವ “ಜಾರಿ ಬಿದ್ದರೂ ಯಾಕೀ ನಗು” ಹಾಡು ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಇದರ ಜೊತೆಗೆ ಅರ್ಫಾಜ್ ಉಳ್ಳಾಲ್​ ಹಾಡಿರುವ ಅಮ್ಮನ ಸೆಂಟಿಮೆಂಟ್​ ಇರುವ ಲಾಲಾ ಲಾಲಿ ಹಾಡು ಕೂಡ ಜನರಿಗೆ ಇಷ್ಟವಾಗಿದೆ. ಎರಡು ಹಾಡು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ.

    ಸೆಲಿಬ್ರೆಟಿಗಳ ಸಾಥ್​
    ಕಂಬ್ಳಿಹುಳ ಸಿನಿಮಾಗೆ ನಟ ಶ್ರೀಮುರಳಿ, ನಿರ್ದೇಶಕ ಸಿಂಪಲ್​ ಸುನಿ, ನಟ ಪೃಥ್ವಿ ಅಂಬರ್​ ಸೇರಿದಂತೆ ಅನೇಕ ಸೆಲಿಬ್ರೆಟಿಗಳು ಸಾಥ್​ ನೀಡಿದ್ದು, ನವೆಂಬರ್​ 4ಕ್ಕೆ ಬಿಡುಗಡೆಯಾಗುವ ಈ ಸಿನಿಮಾವನ್ನು ತಪ್ಪದೇ ಚಿತ್ರಮಂದಿರದಲ್ಲಿ ವೀಕ್ಷಿಸಿ, ಹೊಸ ಪ್ರತಿಭೆಗಳನ್ನು ಪ್ರೊತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ, ಗೆಲುವಿಗೆ ಹಾರೈಸಿದ್ದಾರೆ.

    ನವೀರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರಗಳಲ್ಲಿ ಚಿತ್ರೀಕರಣಗೊಂಡಿದೆ. ಕನ್ನಡಕ್ಕೊಂದು ಹೊಸತನದ ಹಾಗೂ ವಿಭಿನ್ನ ಸಿನಿಮಾ ಆಗುವುದರಲ್ಲಿ ಸಂಶಯವೇ ಇಲ್ಲ. ಮಲಯಾಳಿ ಕುಟ್ಟಿ ಪಾತ್ರದಲ್ಲಿ ನಟಿಸಿರುವ ಅಶ್ವಿತಾ ಆರ್ ಹೆಗಡೆ ಹಾಗೂ ಅಂಜನ್ ನಾಗೇಂದ್ರ ರಂಗಭೂಮಿ ಕಲಾವಿದರಾಗಿದ್ದು, ಪ್ರೇಮಿಗಳಾಗಿ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ಕೊಪ್ಪ ತಾಲೂಕಿನ ಕಮ್ಮರಡಿಯ ಸಮೀಪದ ಕುಡಿನಲ್ಲಿ ಗ್ರಾಮದ ಪ್ರತಿಭೆ ನವನ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನವನ್ ಶ್ರೀನಿವಾಸ್ ಚಿತ್ರರಂಗಕ್ಕೆ ಹೊಸಬರಾದರೂ, ಈಗಾಗಲೇ ಕಿರು ಚಿತ್ರಗಳ ಮೂಲಕ ಪರಿಚಿತರಾಗಿದ್ದಾರೆ. ಜೋಡಿ ಕುದುರೆ, ಗೋಣಿ ಚೀಲ ಕಿರುಚಿತ್ರಗಳನ್ನು ನವನ್​ ಶ್ರೀನಿವಾಸ್​ ನಿರ್ದೇಶನ ಮಾಡಿದ್ದಾರೆ.

    ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ನ.4ಕ್ಕೆ ಬಿಡುಗಡೆ: ಈ ಚಿತ್ರಕ್ಕಿದೆ ಸೆಲೆಬ್ರಿಟಿಗಳ ಸಾಥ್​

    ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಂಬ್ಳಿಹುಳ ಸಿನಿಮಾ ಮೂಡಿಬಂದಿದೆ. ಈ ಚಿತ್ರಕ್ಕೆ ಸತೀಶ್ ರಾಜೇಂದ್ರ ಛಾಯಾಗ್ರಾಹಕರಾಗಿದ್ದು, ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನಕಾರರಾಗಿದ್ದಾರೆ. ಚಿತ್ರಕ್ಕೆ ಶಿವಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಜಾರಿ ಬಿದ್ದರೂ ಯಾಕೀ ನಗು… ಕಂಬ್ಳಿಹುಳ ಸಿನಿಮಾದ ಮೊದಲ ವಿಡಿಯೋ ಸಾಂಗ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts