More

    ಮೋಡ ವಾತಾವರಣಕ್ಕೆ ಕಂಗೆಟ್ಟ ರೈತರು

    ಸೊರಬ: ‘ನಿವಾರ್’ ಚಂಡಮಾರá-ತದ ಪರಿಣಾಮ ಅಲ್ಲಲ್ಲಿ ತುಂತುರು ಮಳೆ ಜಿನುಗá-ತ್ತಿದ್ದು ಕಟಾವಿಗೆ ಬಂದ ಬೆಳೆಗಳು ಒದ್ದೆಯಾಗಿ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗá-ತ್ತಾ ಎಂದು ರೈತರು ಆತಂಕ ಪಡುತ್ತಿದ್ದಾರೆ.

    ರೈತರು ಕಾರ್ತಿಕ ಮಾಸದಲ್ಲಿ ಬೆಳೆಗಳ ಕಟಾವಿಗೆ ಮುಂದಾಗುತ್ತಾರೆ. ಅದಕ್ಕೆ ತಕ್ಕ ವಾತಾವರಣ ಕೂಡ ಪ್ರಕೃತಿಯಲ್ಲಿ ಕಂಡು ಬರá-ತ್ತದೆ. ಆದರೆ ಈ ಬಾರಿ ಮಳೆ ಈ ಸಮಯದಲ್ಲಿಯೂ ಆಗಾಗ್ಗೆ ಸುರಿಯá-ತ್ತಿರá-ವುದರಿಂದ ರೈತರು ನಿರಾತಂಕವಾಗಿ ಬೆಳೆ ತಗೆಯಲು ಆಗುತ್ತಿಲ್ಲ.

    ಈಗ ಎಲ್ಲಡೆ ಭತ್ತ, ಜೋಳ ಹಾಗೂ ಅಡಕೆ ಕೊಯ್ಲು ಸಾಗಿದೆ. ಅಡಕೆ ತೆಗೆದರೆ ಬಿಸಿಲಿಲ್ಲದೆ ಸುಲಿದ ಅಡಕೆ ಬೂಸ್ಟ್ ಬರá-ತ್ತಿದೆ. ಜೋಳ ಕಟಾವು ಮಾಡಿ ಕುಂಡಿಗೆಯನ್ನು ರಾಶಿ ಹಾಕಲಾಗಿದೆ. ಈ ಹಂತದಲ್ಲಿ ಬೆಳೆ ಒಕ್ಕಲು ಮಾಡಿದರೆ ಕಡಿಮೆ ಬೆಲೆಗೆ ದಲ್ಲಾಳಿಗಳು ಕೇಳುತ್ತಾರೆ. ಭತ್ತದ ಪೈರು ಎಲ್ಲೆಡೆ ಕೆಂಪಾಗಿ ಸಾವಿರಾರು ಎಕರೆ ಕೊಯ್ಲಿಗೆ ಬಂದಿದ್ದು ಕೆಲವರು ಯಂತ್ರಗಳ ಮೂಲಕ ಈಗಾಗಲೇ ಒಕ್ಕಲು ಮಾಡಿ ಹುಲ್ಲು ಒಣಗಲು ಬಿಟ್ಟಿದ್ದಾರೆ. ಆ ಹುಲ್ಲು ಕೂಡ ಮಳೆಗೆ ಸಿಲá-ಕá-ವ ಸಾಧ್ಯತೆ ಇದೆ.

    ಅಕಾಲಿಕ ಮಳೆ, ಮೋಡಗಳಿಂದ ನಿರಾತಂಕವಾಗಿ ಬೆಳೆ ತೆಗೆಯಲು ಆಗುತಿಲ್ಲ. ತುಂತುರು ಮಳೆಯಿಂದ ಬೆಳೆಗಳು ಹಾಳಾಗá-ತ್ತಿವೆ. ಆಲ್ಲದೆ ಸೂಕ್ತ ಬೆಲೆಯೂ ಇಲ್ಲದಂತಾಗಿದೆ ಎನ್ನುತ್ತಾರೆ ಭೈರೇಕೊಪ್ಪದ ರೈತ ಸಣ್ಣಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts