More

    ರೋಹಿತ್​ ಸ್ಫೋಟಕ ಅರ್ಧಶತಕ: 3ನೇ ಟಿ20 ಪಂದ್ಯದಲ್ಲಿ ಕಿವೀಸ್​ ಪಡೆಗೆ ಸವಾಲಿನ ಗುರಿ ನೀಡಿದ ಭಾರತ

    ಹ್ಯಾಮಿಲ್ಟನ್​: ಇಲ್ಲಿನ ಸೆಡಾನ್​ ಪಾರ್ಕ್​ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತ ರೋಹಿತ್​ ಶರ್ಮ ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್​ ತಂಡಕ್ಕೆ 180ರನ್​ಗಳ ಸವಾಲಿನ ಗುರಿ ನೀಡಿದೆ.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾಗೆ ರೋಹಿತ್​ ಶರ್ಮ ಮತ್ತು ಕನ್ನಡಿಗ ಕೆ.ಎಲ್​.ರಾಹುಲ್​ 89 ರನ್​ಗಳು ಉತ್ತಮ ಜತೆಯಾಟವಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕ ದಾಖಲಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಹುಲ್​ 27 ರನ್​ಗಳಿ ಔಟಾದರು. ಇದಾದ ಕೆಲವೇ ಕ್ಷಣಗಳಲ್ಲಿ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನಿಂದ 65 ರನ್​ ಗಳಿಸಿದ್ದ ರೋಹಿತ್​ ಕೂಡ ಔಟಾದರು. ಇದರ ಬೆನ್ನಲ್ಲೇ ಶಿವಂ ದುಬೆ(3) ಕೂಡ ಪೆವಲಿಯನ್​ ಸೇರಿದರು.

    ತಂಡದ ಮೊತ್ತ 96 ರನ್​ ಆಗಿದ್ದಾಗಲೇ ಟೀಮ್​ ಇಂಡಿಯಾ ಪ್ರಮುಖ 3 ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ಶ್ರೇಯಸ್​ ಅಯ್ಯರ್​(17) ಮತ್ತು ನಾಯಕ ವಿರಾಟ್​ ಕೊಹ್ಲಿ(38) ರನ್​ ಗಳಿಸಿ ತಂಡದ ಮೊತ್ತಕ್ಕೆ ಕೊಂಚ ಚೇತರಿಕೆ ನೀಡಿದರು. ಉಳಿದಂತೆ ಮನೀಶ್​ ಪಾಂಡೆ(14*) ಮತ್ತು ರವೀಂದ್ರ ಜಡೇಜಾ(10*) ಅಜೇಯರಾಗಿ ಉಳಿದರು.

    ಅಂತಿಮವಾಗಿ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 179 ರನ್​ ಕಲೆಹಾಕುವ ಮೂಲಕ ಕಿವೀಸ್​ ಪಡೆಗೆ 180 ರನ್​ಗಳ ಸವಾಲಿನ ಗುರಿಯನ್ನು ನೀಡಿದೆ.

    ಕಿವೀಸ್​ ಪರ ಹಮೀಶ್​ ಬೆನ್ನೆಟ್​​ ಮೂರು ವಿಕೆಟ್​ ಕಬಳಿಸಿ ಮಿಂಚಿದರೆ, ಮಿಚೆಲ್​ ಸ್ಯಾಂಟ್ನರ್​ ಮತ್ತು ಕೊಲಿನ್​ ಡಿ ಗ್ರ್ಯಾಂಡ್​ಹೋಮ್​ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts