More

    ಮತ್ತೊಮ್ಮೆ ಕನ್ನಡಿಗ ರಾಹುಲ್​-ಶ್ರೇಯಸ್​ ಜುಗಲ್​ಬಂದಿ: 2ನೇ ಟಿ20 ಪಂದ್ಯದಲ್ಲೂ ಕಿವೀಸ್​ ವಿರುದ್ಧ ಭರ್ಜರಿ ಸಾಧಿಸಿದ ಭಾರತ

    ಆಕ್ಲೆಂಡ್​: ಇಲ್ಲಿನ ಈಡನ್​ ಪಾರ್ಕ್​ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಕನ್ನಡಿಗ ಕೆ.ಎಲ್​.ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಪ್ರವಾಸಿ ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2-0 ಅಂತರದಿಂದ ಮುನ್ನೆಡೆ ಸಾಧಿಸುವ ಮೂಲಕ ಸರಣಿ ಗೆಲುವಿನ ಕಡೆ ದಾಪುಗಾಲು ಇಡುತ್ತಿದೆ.

    ಕಿವೀಸ್​ ಪಡೆ ನೀಡಿದ 133 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್​ ಶರ್ಮಾ(8) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ಇದರ ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ವಿರಾಟ್​ ಕೊಹ್ಲಿ (11) ರನ್​ ಗಳಿಸಿ ಬಂದಷ್ಟೇ ವೇಗವಾಗಿ ಪೆವಲಿಯನ್​ ಮರಳಿದರು. ಟೀಮ್​ ಇಂಡಿಯಾ 39 ರನ್​ಗೆ ಪ್ರಮುಖ 2 ವಿಕೆಟ್​ ಕಳೆದುಕೊಂಡು ಸ್ವಲ್ಪ ಹಿನ್ನೆಡೆ ಅನುಭವಿಸಿತ್ತು.

    ಆದರೆ, ಆರಂಭಿಕನಾಗಿ ಕಣಕ್ಕಿಳಿದ ಕೆ.ಎಲ್​. ರಾಹುಲ್​ ಕಿವೀಸ್​ ಬೌಲರ್​ಗಳನ್ನು ಕೊನೆಯವರೆಗೂ ಕಾಡಿದರು. ರಾಹುಲ್​ಗೆ ಸಾಥ್​ ನೀಡಿದ ಶ್ರೇಯಸ್​ ಅಯ್ಯರ್​ ಮೊದಲ ಟಿ20 ಪಂದ್ಯದಂತೆ ಉತ್ತಮ ಜತೆಯಾಟವಾಡಿದರು. ಜಯದ ಹೊಸ್ತಿಲಲ್ಲಿ 44 ರನ್​ ಗಳಿಸಿದ್ದ ಅಯ್ಯರ್​ ಔಟಾಗುವ ಮೂಲಕ ಅರ್ಧಶತಕದಿಂದ ವಂಚಿತರಾದರು.

    ಇತ್ತ ಕೊನೆವರೆಗೂ ಸ್ಫೋಟಕ ಆಟವಾಡಿದ ರಾಹುಲ್​ ಅಂತಿಮವಾಗಿ 50 ಎಸೆತದಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 57 ರನ್​ ಗಳಿಸಿದರೇ, ಶಿವಂ ದುಬೆ 8 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಅಂತಿಮವಾಗಿ ಟೀಮ್​ ಇಂಡಿಯಾ 17.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 135 ರನ್​ ಕಲೆಹಾಕುವ ಮೂಲಕ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ, 2-0 ಅಂತರದಿಂದ ಸರಣಿ ಮುನ್ನೆಡೆ ಕಾಯ್ದುಕೊಂಡಿದೆ.

    ಕಿವೀಸ್​ ಪರ ಟೀಮ್​ ಸೌಥಿ ಎರಡು ವಿಕೆಟ್​ ಪಡೆದರೆ, ಇಸ್​ ಸೊಧಿ ಒಂದು ವಿಕೆಟ್​ಗೆ ತೃಪ್ತಿಪಟ್ಟರು. ಉಳಿದಂತೆ ಯಾವೊಬ್ಬ ಬೌಲರ್​ ಭಾರತೀಯ ಆಟಗಾರರನ್ನು ಎದುರಿಸುವಲ್ಲಿ ವಿಫಲರಾದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts