More

    ಟಿ20 ವಿಶ್ವಕಪ್​ಗೆ ನ್ಯೂಜಿಲೆಂಡ್​ ತಂಡ ಪ್ರಕಟ; ರಚಿನ್​ ರವೀಂದ್ರ, ಮ್ಯಾಟ್​ ಹೆನ್ರಿಗೆ ಮೊದಲ ಬಾರಿ ಸ್ಥಾನ

    ಆಕ್ಲೆಂಡ್​: ಜೂನ್​ನಲ್ಲಿ ಅಮೆರಿಕ&ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ಪಾಲ್ಗೊಳ್ಳಲಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 20 ತಂಡಗಳ ಪೈಕಿ ನ್ಯೂಜಿಲೆಂಡ್​ ಮೊದಲನೆಯದಾಗಿ 15 ಆಟಗಾರರ ತಂಡವನ್ನು ಅಂತಿಮಗೊಳಿಸಿದೆ. ಬೆಂಗಳೂರು ಮೂಲದ ಆಲ್ರೌಂಡರ್​ ರಚಿನ್​ ರವೀಂದ್ರ ಜತೆಗೆ ವೇಗಿ ಮ್ಯಾಟ್​ ಹೆನ್ರಿ ಮೊದಲ ಬಾರಿಗೆ ಟಿ20 ವಿಶ್ವಕಪ್​ ಆಡುವ ಅವಕಾಶ ಪಡೆದಿದ್ದಾರೆ.

    ಗಾಯದಿಂದಾಗಿ ಐಪಿಎಲ್​ನಿಂದ ಹೊರಗುಳಿದಿರುವ ಎಡಗೈ ಆರಂಭಿಕ ಡೆವೊನ್​ ಕಾನ್​ವೇ ವಿಶ್ವಕಪ್​ನಲ್ಲಿ ಮರಳಿ ಕಣಕ್ಕಿಳಿಯಲಿದ್ದರೆ, ಕೇನ್​ ವಿಲಿಯಮ್ಸನ್​ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ವಿಲಿಯಮ್ಸನ್​ಗೆ ಇದು 6ನೇ ಟಿ20 ವಿಶ್ವಕಪ್​ ಆಗಿರಲಿದೆ. ವೇಗಿ ಟಿಮ್​ ಸೌಥಿ 7ನೇ ಮತ್ತು ಟ್ರೆಂಟ್​ ಬೌಲ್ಟ್​ 5ನೇ ಬಾರಿ ಟಿ20 ವಿಶ್ವಕಪ್​ನಲ್ಲಿ ಆಡಲಿದ್ದಾರೆ. ವೇಗಿಗಳಾದ ಕೈಲ್​ ಜೇಮಿಸನ್​ ಮತ್ತು ಆಡಂ ಮಿಲ್ನೆ ಗಾಯದಿಂದಾಗಿ ವಿಶ್ವಕಪ್​ಗೆ ಅಲಭ್ಯರಾಗಿದ್ದಾರೆ.

    ತಂಡ: ಕೇನ್​ ವಿಲಿಯಮ್ಸನ್​ (ನಾಯಕ), ಫಿನ್​ ಅಲೆನ್​, ಟ್ರೆಂಟ್​ ಬೌಲ್ಟ್​, ಮಿಚೆಲ್​ ಬ್ರೇಸ್​ವೆಲ್​, ಮಾರ್ಕ್​ ಚಾಪ್​ಮನ್​, ಡೆವೊನ್​ ಕಾನ್​ವೇ, ಲಾಕಿ ಗ್ಯುರ್ಸನ್​, ಮ್ಯಾಟ್​ ಹೆನ್ರಿ, ಡೆರಿಲ್​ ಮಿಚೆಲ್​, ಜೇಮ್ಸ್​ ನೀಶಾಮ್​, ಗ್ಲೆನ್​ ಫಿಲಿಪ್ಸ್​, ರಚಿನ್​ ರವೀಂದ್ರ, ಮಿಚೆಲ್​ ಸ್ಯಾಂಟ್ನರ್​, ಇಶ್​ ಸೋಧಿ, ಟಿಮ್​ ಸೌಥಿ.

    1999ರ ಜೆರ್ಸಿ ವಾಪಸ್​
    ಕಿವೀಸ್​ ತಂಡ ಟಿ20 ವಿಶ್ವಕಪ್​ನಲ್ಲಿ ಇಲೆಕ್ಟ್ರಿಕ್​ ಬ್ಲೂ ಮತ್ತು ಸಿಲ್ವರ್​ ಬಣ್ಣದ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇದು 1999ರ ಏಕದಿನ ವಿಶ್ವಕಪ್​ನಿಂದ ಸ್ಫೂರ್ತಿ ಪಡೆದ ಜೆರ್ಸಿ ಆಗಿದೆ.

    ಆರ್ಚರಿ ವಿಶ್ವಕಪ್​ನಲ್ಲಿ ಐತಿಹಾಸಿಕ ಪದಕ ಸಾಧನೆ ಮೆರೆದ ಭಾರತದ ಬಿಲ್ಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts