More

    ‘ನೀರೋ’ನಂಥ ಆರೋಗ್ಯ ಸಚಿವನಿಗೆ ಹಿಂಬಡ್ತಿ ನೀಡಿದ ನ್ಯೂಜಿಲೆಂಡ್​ ಪ್ರಧಾನಿ, ಲಾಕ್​ಡೌನ್​ ಇದ್ದರೂ ಸಮುದ್ರತಟದಲ್ಲಿ ವಿಹರಿಸಿದ್ದಕ್ಕೆ ಶಿಕ್ಷೆ

    ವೆಲ್ಲಿಂಗ್ಟನ್​: ವಿಶ್ವದಾದ್ಯಂತ ಹರಡಿರುವ ಕರೊನಾ ಪಿಡುಗು ನಿರ್ಮೂಲನೆಗೆ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಲಾಕ್​ಡೌನ್​ ಘೋಷಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಿರುವಾಗ ರೋಮ್​ ಹೊತ್ತಿ ಉರಿವಾಗ ನೀರೋ ಪಿಟೀಲು ನುಡಿಸಿದ ರೀತಿಯಲ್ಲಿ ವರ್ತಿಸಿ ನ್ಯೂಜಿಲೆಂಡ್​ ಆರೋಗ್ಯ ಸಚಿವ ಭಾರಿ ಟೀಕೆಗೆ ಒಳಗಾಗಿದ್ದಾರೆ.

    ಎಲ್ಲರೂ ಮನೆಯೊಳಗೆ ಇದ್ದು, ಕರೊನಾ ವೈರಸ್​ ಸೋಂಕು ಹರಡದಂತೆ ತಡೆಯಲು ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತಲೇ ನ್ಯೂಜಿಲೆಂಡ್​ ಆರೋಗ್ಯ ಸಚಿವ ಡೇವಿಡ್​ ಕ್ಲಾರ್ಕ್​ ತಮ್ಮ ಕುಟುಂಬ ಸದಸ್ಯರೊಂದಿಗೆ 20 ಕಿ.ಮೀ. ದೂರದವರೆಗೆ ಸಮುದ್ರ ತಟದಲ್ಲಿ ವಿಹಾರ ಕೈಗೊಂಡಿದ್ದರು. ಈ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿತ್ತು.

    ಇದು ಗಮನಕ್ಕೆ ಬರುತ್ತಲೇ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​ ತಕ್ಷಣವೇ ಡೇವಿಡ್​ ಕ್ಲಾರ್ಕ್​ ಅವರಿಗೆ ಕೊಡಲಾಗಿದ್ದ ವಿತ್ತ ಖಾತೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಜತೆಗೆ, ಅವರಿಗೆ ಕೊಡಲಾಗಿದ್ದ ಕ್ಯಾಬಿನೆಟ್​ ದರ್ಜೆಯ ಸ್ಥಾನಮಾನ ರದ್ದುಗೊಳಿಸಿ, ಕೇವಲ ಕೋವಿಡ್​ 19 ಸೋಂಕು ಹರಡದಂತೆ ತಡೆಗಟ್ಟುವ ಕೆಲಸಗಳಿಗೆ ಮಾತ್ರವೇ ಸೀಮಿತಗೊಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡೇವಿಡ್​ ಕ್ಲಾರ್ಕ್​, ನಾನು ಮೂರ್ಖನಂತೆ ವರ್ತಿಸಿದ್ದೇನೆ. ಲಾಕ್​ಡೌನ್​ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದೇನೆ. ಮನೆಯೊಳಗೆ ಇರುವಂತೆ ಜನರಿಗೆ ತಿಳಿಹೇಳಬೇಕಾದ ನಾನೇ ಆ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದ ಮೂರ್ಖತನದ ಪರಮಾವಧಿ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ.

    ರೋಗಿಗಾಗಿ ಮನಮಿಡಿದು 540ಕಿ.ಮೀ ಪ್ರಯಾಣ ಮಾಡಿದ ವೈದ್ಯ: ಜಾಲತಾಣದಲ್ಲಿ ಭಾರಿ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts