More

    ಕಿವೀಸ್ ಎದುರು ಹೋರಾಡಿ ಸೋತ ಸ್ಕಾಟ್ಲೆಂಡ್, ಭಾರತದ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತೇ?

    ದುಬೈ: ಆರಂಭಿಕ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ (93ರನ್, 56 ಎಸೆತ, 6 ಬೌಂಡರಿ, 7 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆ ನೆರವಿನಿಂದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 16 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿತು. ಇದರೊಂದಿಗೆ ಸತತ ಎರಡನೇ ಗೆಲುವು ದಾಖಲಿಸಿದ ಕಿವೀಸ್ ತಂಡ ಸೆಮೀಸ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಮತ್ತೊಂದೆಡೆ, ಗೆಲುವಿಗಾಗಿ ಕೆಚ್ಚೆದೆಯ ಹೋರಾಟ ತೋರಿದ ಸ್ಕಾಟ್ಲೆಂಡ್ ನಿರ್ವಹಣೆ ಗಮನಸೆಳೆಯಿತು. ನ್ಯೂಜಿಲೆಂಡ್ ತಂಡ ಸತತ 2 ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಭಾರತದ ಸೆಮೀಸ್ ಹಾದಿ ಮತ್ತಷ್ಟು ಕಠಿಣಗೊಂಡಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಪ್ಟಿಲ್ ಅಬ್ಬರದ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 172 ರನ್ ಪೇರಿಸಿತು. ಬಳಿಕ ಮೈಕಲ್ ಲೀಸ್ಕ್ (42*ರನ್, 20 ಎಸೆತ, 3 ಬೌಂಡರಿ, 3 ಸಿಕ್ಸರ್) ಸೇರಿದಂತೆ ಇನ್ನಿತರ ಬ್ಯಾಟರ್‌ಗಳ ಪ್ರತಿಹೋರಾಟದ ನಡುವೆಯೂ ಸ್ಕಾಟ್ಲೆಂಡ್ ತಂಡ 5 ವಿಕೆಟ್‌ಗೆ 156 ರನ್‌ಗಳಿಸಲಷ್ಟೇ ಶಕ್ತವಾಯಿತು. ಟ್ರೆಂಟ್ ಬೌಲ್ಟ್ ಹಾಗೂ ಇಶ್ ಸೋಧಿ ತಲಾ 2 ವಿಕೆಟ್ ಕಬಳಿಸಿದರು.

    ನ್ಯೂಜಿಲೆಂಡ್: 5 ವಿಕೆಟ್‌ಗೆ 172 (ಮಾರ್ಟಿನ್ ಗುಪ್ಟಿಲ್ 93, ಗ್ಲೆನ್ ಫಿಲಿಪ್ಸ್ 33, ಬ್ರ್ಯಾಡ್ ವೀಲ್ 40ಕ್ಕೆ 2), ಸ್ಕಾಟ್ಲೆಂಡ್: 5 ವಿಕೆಟ್‌ಗೆ 156 (ಮೈಕಲ್ ಲೀಸ್ಕ್ 42, ಮ್ಯಾಥ್ಯೂವ್ ಕ್ರಾಸ್ 27, ಜಾರ್ಜ್ ಮುನ್ಸೆ 22, ಟ್ರೆಂಟ್ ಬೌಲ್ಟ್ 29ಕ್ಕೆ 2, ಇಶ್ ಸೋಧಿ 42ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts