More

    FACT CHECK |ನಿದ್ರಿಸುತ್ತಿದ್ದ ಶವಾಗಾರದ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ತಿಳಿದು ಜೀವಂತ ಸಂಸ್ಕಾರ ಮಾಡಿದ ಘಟನೆ ನಿಜವೇ

    ನ್ಯೂಯಾರ್ಕ್​: ನಿರಂತರ ಕೆಲಸದಿಂದ ದಣಿದಿದ್ದ ಶವಾಗಾರದ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ನಿದ್ರಿಸುತ್ತಿದ್ದ ವೇಳೆ ಆತ ಕರೊನಾದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸಿ ಜೀವಂತವಾಗಿ ಸುಡಲಾಗಿದೆ ಎನ್ನುವ ವಿಡಿಯೋ ವೈರಲ್​ ಆಗಿತ್ತು.

    ನ್ಯೂಯಾರ್ಕ್​ ನಗರದ ಶವಾಗಾರದಲ್ಲಿ ಕೆಲಸ ಮಾಡುತ್ತಿರುವ ಮೈಕೆಲ್​ ಜೋನ್ಸ್​ ಎಂಬಾತನನ್ನು ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಭಾವಿಸಿ ಅವರನ್ನು ಜೀವಂತವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಮಾಹಿತಿಯನ್ನು ಅಪ್​ಲೋಡ್​ ಮಾಡಲಾಗಿದೆ.

    ಮೊದಲಿಗೆ ಇದನ್ನು ವೀಕ್ಲಿ ಇನ್‌ಕ್ವೈರರ್​ ವೆಬ್​ಸೈಟ್​ ಪ್ರಕಟಿಸಿತು. ನಂತರ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಲವು ಮಂದಿ ಅಪ್​ಲೋಡ್​ ಮಾಡಿದ್ದಾರೆ. ಹೀಗಾಗಿ ಇದು ವೈರಲ್​ ಆಗಿದೆ.

    ಆದರೆ ಈ ಸುದ್ದಿ ಸುಳ್ಳು ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಪತ್ತೆ ಮಾಡಿದೆ. ಶವಾಗಾರದ ಸಿಬ್ಬಂದಿಗೆ ಸತತ 16 ಗಂಟೆಗಳ ಕೆಲಸ ವಹಿಸಿರುವ ಹಿನ್ನೆಲೆಯಲ್ಲಿ ವೀಕ್ಲಿ ಇನ್‌ಕ್ವೈರರ್​ ವೆಬ್​ಸೈಟ್​ ಸರ್ಕಾರವನ್ನು ವಿಡಂಬನೆ ಮಾಡಲು ಈ ರೀತಿ ಪ್ರಕಟಿಸಿದೆ. ಓದುಗರು ಇದನ್ನು ನಿಜ ಎಂದು ನಂಬಿ ವೈರಲ್​ ಮಾಡಿದ್ದಾರೆ ಎಂದು ಪತ್ತೆ ಮಾಡಿದೆ.

    ಅಮೆರಿಕಾದ ನ್ಯೂಯಾರ್ಕ್​ನಲ್ಲಿ ಅಧಿಕ ಮಂದಿಗೆ ಕರೊನಾ ಸೋಂಕು ಹರಡಿದ್ದು, ಸಾವು ಸಂಭವಿಸುತ್ತಿವೆ. ಶವಾಗಾರದಲ್ಲಿ ಸಂಸ್ಕಾರಕ್ಕೆ ಹೆಚ್ಚು ಶವಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೆಲಸಗಾರರ ಅವಧಿಯನ್ನು 16 ಗಂಟೆಗಳಿಗೆ ಏರಿಕೆ ಮಾಡಿದೆ. ಇದರಿಂದ ಕೆಲಸಗಾರರು ನಿದ್ರೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಕೆಲಸದ ನಡುವೆಯೇ ಸಿಬ್ಬಂದಿ ಸ್ಟ್ರೆಚರ್​ನಲ್ಲಿ ಮಲಗಿರುವ ಪೋಟೋ ಹಾಕಿ ವಿಡಂಬನಾತ್ಮಕ ಲೇಖನ ಬರೆದಿದೆ. ಹೀಗಾಗಿ ವೈರಲ್​ ಆಗಿರುವ ಸುದ್ದಿ ಸುಳ್ಳು ಎಂದು ಪತ್ತೆಯಾಗಿದೆ. (ಏಜೆನ್ಸೀಸ್​)

    ಅಗತ್ಯ ಸೇವೆ ಪಟ್ಟಿಯಲ್ಲಿ ಸುದ್ದಿ ಮಾಧ್ಯಮ ಸೇರಲಿ ಎಂದ ಯುನೆಸ್ಕೊ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts