More

    ಯಾವ ಗುಂಪಿನ ರಕ್ತದವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಅಧಿಕ?; ಇಲ್ಲಿದೆ ನೋಡಿ ಮಾಹಿತಿ…

    ನವದೆಹಲಿ: ಜಗತ್ತಿನಲ್ಲಿ ಇದೀಗ ರೂಪಾಂತರಿ ಕರೊನಾ ಒಮಿಕ್ರಾನ್​ ಪತ್ತೆಯಾಗಿದ್ದು, ಮತ್ತೊಮ್ಮೆ ಕೋವಿಡ್ ಸೋಂಕಿನ ಹಾವಳಿ ಸೃಷ್ಟಿಯಾಗುವ ಆತಂಕ ಕಾಡುತ್ತಿದೆ. ಈ ನಡುವೆ ಅಧ್ಯಯನವೊಂದು ನಡೆದಿದ್ದು, ಯಾವ ರಕ್ತದ ಗುಂಪಿನವರಿಗೆ ಕರೊನಾ ಸೋಂಕು ತಗುಲುವ ಸಾಧ್ಯತೆ ಅಧಿಕವಾಗಿರುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.

    ನವದೆಹಲಿಯ ಸರ್​ ಗಂಗಾರಾಮ್​ ಆಸ್ಪತ್ರೆಯ ಡಿಪಾರ್ಟ್​ಮೆಂಟ್​ ಆಫ್ ರಿಸರ್ಚ್ ಹಾಗೂ ಡಿಪಾರ್ಟ್​ಮೆಂಟ್​ ಆಫ್​ ಬ್ಲಡ್​​ ಟ್ರಾನ್ಸ್​ಫ್ಯೂಷನ್​ ಮೆಡಿಸಿನ್​ ಈ ಅಧ್ಯಯನ ನಡೆಸಿದೆ. ಆ ಪ್ರಕಾರ ಎ, ಬಿ ಮತ್ತು ಆರ್​ಎಚ್​+ ಗ್ರೂಪ್​ ರಕ್ತ ಹೊಂದಿರುವವರು ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

    ಇದನ್ನೂ ಓದಿ: ಭಕ್ತರಿಗೆ ಮರಳಿ ಸಿಕ್ಕಿತು 1.5 ಲಕ್ಷ ರೂ. ಮೌಲ್ಯದ ಚಿನ್ನದ ಸರ; ಮಾದಪ್ಪ ಮೆಚ್ಚುವಂಥ ಪ್ರಾಮಾಣಿಕತೆ‌ ಮೆರೆದ ಸಿಬ್ಬಂದಿ

    ಮತ್ತೊಂದೆಡೆ ಒ, ಎಬಿ ಮತ್ತು ಆರ್​ಎಚ್​- ಗ್ರೂಪ್​ ರಕ್ತ ಹೊಂದಿರುವವರು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಅದಾಗ್ಯೂ ರಕ್ತದ ಗುಂಪಿಗೂ ಮತ್ತು ಕೋವಿಡ್​ ಸೋಂಕಿನ ಗಂಭೀರತೆ ಅಥವಾ ಅದರಿಂದಾಗುವ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನೂ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

    ಈ ಆಸ್ಪತ್ರೆಯಲ್ಲಿ 2020ರ ಏಪ್ರಿಲ್ 8ರಿಂದ ಅಕ್ಟೋಬರ್ 4ರ ವರೆಗೆ ನಡೆಸಿ ಆರ್​ಟಿಪಿಸಿಆರ್​ ಟೆಸ್ಟ್​​ನಲ್ಲಿ ಸೋಂಕು ದೃಢಪಟ್ಟ 2586 ರೋಗಿಗಳ ಅಧ್ಯಯನದ ಮೇರೆಗೆ ಈ ಅಂಶ ಕಂಡುಕೊಳ್ಳಲಾಗಿದೆ. ಈ ಸಮೀಕ್ಷೆಯ ವಿವರ ಫ್ರಾಂಟಿಯರ್ಸ್​​ನ ನವಂಬರ್ ಆವೃತ್ತಿಯ ಸೆಲ್ಯುಲರ್ ಆ್ಯಂಡ್ ಇನ್​ಫೆಕ್ಷನ್​ ಮೈಕ್ರೊಬಯಾಲಜಿ ಜರ್ನಲ್​​ನಲ್ಲಿ ಪ್ರಕಟಗೊಂಡಿದೆ.

    ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ? 

    ಇನ್ನು ಬಿ ರಕ್ತದ ಗುಂಪಿನ ಪುರುಷರು ಅದೇ ರಕ್ತದ ಗುಂಪಿನ ಮಹಿಳೆಯರಿಗಿಂತ ಕೋವಿಡ್​ಗೆ ಒಳಗಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಇನ್ನು ಒ ಮತ್ತು ಆರ್​ಎಚ್​- ರಕ್ತದ ಗುಂಪಿನವರಿಗೆ ಹೋಲಿಸಿದರೆ ಎ ಮತ್ತು ಆರ್​ಎಚ್​+ ರಕ್ತದ ಗುಂಪಿನವರು ಕೋವಿಡ್​ನಿಂದ ಗುಣಮುಖರಾಗುವ ಅವಧಿ ಹೆಚ್ಚಾಗಿರುತ್ತದೆ ಎಂದು ಡಿಪಾರ್ಟ್​ಮೆಂಟ್ ಆಫ್ ಬ್ಲಡ್​ ಟ್ರಾನ್ಸ್​ಫ್ಯೂಷನ್​ ಮುಖ್ಯಸ್ಥ ಡಾ.ವಿವೇಕ್ ರಂಜನ್​ ತಿಳಿಸಿದ್ದಾರೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts