More

    ಭಕ್ತರಿಗೆ ಮರಳಿ ಸಿಕ್ಕಿತು 1.5 ಲಕ್ಷ ರೂ. ಮೌಲ್ಯದ ಚಿನ್ನದ ಸರ; ಮಾದಪ್ಪ ಮೆಚ್ಚುವಂಥ ಪ್ರಾಮಾಣಿಕತೆ‌ ಮೆರೆದ ಸಿಬ್ಬಂದಿ

    ಮಹದೇಶ್ವರ ಬೆಟ್ಟ: ಕಡೇ ಕಾರ್ತಿಕ‌ಮಾಸದ ಪ್ರಯುಕ್ತ ಮಹದೇಶ್ವರನ ದರ್ಶನ ಪಡೆಯಲು ಬೆಟ್ಟಕ್ಕೆ ಬಂದು ಭಕ್ತರೊಬ್ಬರು ಕಳೆದುಕೊಂಡಿದ್ದ 1.5 ಲಕ್ಷ ರೂ.ಮೌಲ್ಯದ ಚಿನ್ನದ ಸರವನ್ನು ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

    ನಾಗಮಲೆ ಭವನ ವಸತಿ ಗೃಹದ ಸಿಬ್ಬಂದಿ ಮಹೇಶ್, ಶಂಕರಪ್ಪ, ನಾಗೇಂದ್ರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರಿನ ಚಿಕ್ಕಳ್ಳಿ ಗ್ರಾಮದ ಕುಮಾರ್ ಕುಟುಂಬ ಸಮೇತ ಭಾನುವಾರ ಬೆಟ್ಟಕ್ಕೆ ಆಗಮಿಸಿ ನಾಗುಮಲೆ ವಸತಿ ಗೃಹದಲ್ಲಿ ಉಳಿದಿದ್ದರು. ಬಳಿಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿದ್ದರು. ಆದರೆ ನಾಗಮಲೆ ಭವನದ ಸ್ನಾನದ ಗೃಹದಲ್ಲಿ ಚಿನ್ನದ ಸರವನ್ನು ಮರೆತು ಅಲ್ಲೇ ಇಟ್ಟು ಹೋಗಿದ್ದರು.

    ಇದನ್ನೂ ಓದಿ: ಮನುಷ್ಯ ಇದನ್ನೆಲ್ಲ ತಿಂದರೆ ಭೂಮಿಗೇ ಆಪತ್ತು!; ಸಮೀಕ್ಷೆಯಿಂದ ಆತಂಕಕಾರಿ ಮಾಹಿತಿ ಹೊರಬಿತ್ತು..

    ಈ ಕೊಠಡಿಯನ್ನು ಬೇರೆ ಭಕ್ತರಿಗೆ ನೀಡಲು ಸ್ವಚ್ಚಗೊಳಿಸಲು ಮುಂದಾದ‌ ಸಿಬ್ಬಂದಿ ಮಹೇಶ್, ಶಂಕರಪ್ಪ, ನಾಗೇಂದ್ರಗೆ ಚಿನ್ನದ ಸರ ಸಿಕ್ಕಿದೆ.‌ ಈ ವಿಷಯವನ್ನು ವ್ಯವಸ್ಥಾಪಕ ಮಾದೇಶ್ ಗಮನಕ್ಕೆ ತಂದಿದ್ದಾರೆ. ಇವರು ಕೊಠಡಿಯಲ್ಲಿ ಉಳಿದಿದ್ದ ಕುಮಾರ್ ಸಂಪರ್ಕಿಸಿ ಸರವನ್ನು ವಾಪಸ್ ನೀಡಿದ್ದಾರೆ. ಸಿಬ್ಬಂದಿ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಾಧಿಕಾರದ ಸಿಬ್ಬಂದಿ ಜಯವಿಭವಸ್ವಾಮಿ ಸಿಬ್ಬಂದಿ ಪ್ರಾಮಾಣಿಕತೆಯನ್ನು ಪ್ರಶಂಸಿಸಿದ್ದಾರೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್​ಎನ್​ಎಲ್​ ಪ್ರೇಮ; ಕಾರಣ ಆ ಮೂವರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts