More

    ಹೊಸ ಮದ್ಯದಂಗಡಿ ಪರವಾನಿಗೆ ನೀಡುವ ಪ್ರಸ್ತಾವನೆ ಕೈಬಿಡಿ

    ಸಿಂಧನೂರು: ರಾಜ್ಯ ಸರ್ಕಾರ 1,000 ಮದ್ಯದಂಗಡಿಗಳ ಪರವಾನಗಿ ನೀಡುವ ಪ್ರಸ್ತಾವವನ್ನು ರದ್ದುಪಡಿಸಲು ಒತ್ತಾಯಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

    ಇದನ್ನೂ ಓದಿ: ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

    ಮದ್ಯದ ಅಂಗಡಿಗಳ ಪರವಾನಿಗೆಯಿಂದ ಮಹಿಳೆಯರು ಮಾತ್ರವಲ್ಲ, ಸಮಾಜದ ನೆಮ್ಮದಿ, ಆರೋಗ್ಯ ಹಾಳು ಮಾಡುವ ವಿಚಾರಗಳನ್ನು ಬಿಟ್ಟು, ಮಹಾತ್ಮಾ ಗಾಂಧಿ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕು.

    ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಅಬಕಾರಿ ಇಲಾಖೆಯ ನಿರ್ಧಾರ ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಈಗಾಗಲೇ ಮದ್ಯ ವ್ಯಸನದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ.

    ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದ್ದರೆ. ಇನ್ನೊಂದೆಡೆ ರಾಜ್ಯ ಜನರ ನೈತಿಕ ಮೌಲ್ಯ ಕುಸಿಯುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ಹಾಗೂ ಅತ್ಯಾಚಾರ ಹೆಚ್ಚಳಕ್ಕೆ ಮದ್ಯಪಾನ ಪರೋಕ್ಷವಾಗಿ ಕಾರಣ ಎಂದು ಮಾಧ್ಯಮ ವರದಿಗಳು ಸಾಬೀತುಪಡಿಸುತ್ತಲೇ ಇವೆ.

    ಇಂತಹದರಲ್ಲಿ ಹೊಸ ಅಂಗಡಿಗಳಿಗೆ ಪರವಾನಗಿ ನೀಡುವ ನಿರ್ಧಾರ ಸಮಂಜಸವಾದದ್ದಲ್ಲ. ರಾಜ್ಯ ಸರ್ಕಾರ ಪರವಾನಿಗೆ ಪ್ರಸ್ತಾವ ಕೈಬಿಡಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ 100 ಪತ್ರಗಳನ್ನು ಬರೆದು ಅಂಚೆ ಪೆಟ್ಟಿಗೆಗೆ ಹಾಕಿ ಘೋಷಣೆಗಳನ್ನು ಕೂಗಿ,ಮದ್ಯ ವಿರೋಧಿ ಹಾಡನ್ನು ಹಾಡಿ ಪ್ರತಿಭಟಿಸಲಾಯಿತು.

    ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ, ತಾಲೂಕು ಕಾರ್ಯದರ್ಶಿ ಮಾಬುಸಾಬ ಬೆಳ್ಳಟ್ಟಿ, ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಅಂಬಮ್ಮ ಬಸಾಪೂರ, ರುಕ್ಮಿಣೆಮ್ಮಾ, ದುರುಗಮ್ಮ, ಮಲ್ಲಮ್ಮ, ಎಚ್.ಆರ್.ಹೊಸಮನಿ, ಹನುಮಂತಪ್ಪ ಗೋಡ್ಯಾಳ,

    ಹುಲುಗಪ್ಪ ಬಳ್ಳಾರಿ, ನಾಗಪ್ಪ ಉಮಲೂಟಿ, ತಿಮ್ಮಣ್ಣ ಯಾದವ್, ರಮಜಾನ್, ದವಲಸಾಬ, ತಿಮ್ಮಪ್ಪ, ಮಾನಪ್ಪ, ರಾಜಾಸಾಬ್, ಶಂಕ್ರಪ್ಪ, ಮದರಸಾಬ, ಯಮನೂರ, ರಾಮಣ್ಣ, ಫಕೀರಪ್ಪ, ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts