More

    ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಶಿಕ್ಷಕರನ್ನು ಒತ್ತಾಯವಾಗಿ ಕರೆತರಲಾಗುತ್ತಿದೆ; ಆಪ್​ ವಿರುದ್ಧ ಬಿಜೆಪಿ ಮುಖಂಡ ಕಪಿಲ್​ ಶರ್ಮಾ ಟೀಕೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರ್ಕಾರಿ ಶಾಲೆಗಳ ಮುಖ್ಯಸ್ಥರನ್ನು ಅರವಿಂದ ಕೇಜ್ರಿವಾಲ ಆಹ್ವಾನಿಸಿದ್ದಾರೆ.

    ಈ ಕ್ರಮಕ್ಕೆ ಮೆಚ್ಚುಗೆ ಮತ್ತು ವಿರೋಧಗಳೆರಡು ಕೇಳಿಬಂದಿವೆ. ಬಿಜೆಪಿ ಮುಖಂಡ ಕಪಿಲ್​ ಮಿಶ್ರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶಾಲಾ ಮುಖ್ಯಸ್ಥರನ್ನು ಆಹ್ವಾನಿಸಿದ್ದು ಸರಿ. ಆದರೆ ಅವರನ್ನು ಒತ್ತಾಯಪೂರ್ವಕವಾಗಿ ಕರೆತರಲಾಗುತ್ತಿದೆ ಎಂದು ಟೀಕಿಸಿದ್ದಾರೆ.

    ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಿಕ್ಷಕರನ್ನು ಆಹ್ವಾನಿಸಿರುವುದು ಒಳ್ಳೆಯದು. ಆದರೆ ಅವರನ್ನು ಬರಲೇಬೇಕು ಎಂದು ಒತ್ತಾಯಿಸುವ ಮೂಲಕ ಕೆಟ್ಟ ಸಂಪ್ರಾದಾಯಕ್ಕೆ ಆಮ್​ ಆದ್ಮಿ ಪಕ್ಷ ನಾಂದಿ ಹಾಡುತ್ತಿದೆ. ಇಂತಹದ್ದಕ್ಕೆ ಬೆಂಬಲಿಸಲ್ಲ ಎಂದು ಅವರು ಟೀಕಿಸಿದ್ದಾರೆ.

    ನಾಳೆ (ಭಾನುವಾರ ಫೆ.16) ಪ್ರಮಾಣವಚನ ಸಮಾರಂಭಕ್ಕೆ ಶಾಲಾ ಮುಖ್ಯಸ್ಥರು, ಸಿಬ್ಬಂದಿ ಮತ್ತು 20 ಮಂದಿ ಶಿಕ್ಷಕರು ಆಗಮಿಸಬೇಕು ಎಂದು ಆಪ್​ ಮನವಿ ಮಾಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts