More

    ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..

    ದೆಹಲಿ: ಯಾವುದೇ ತಾಯಿಗೆ ತಾನು ಹೆತ್ತ ಮಗುವನ್ನು ನೋಡುವ ಕಾತುರ ಇರುವುದು ಸಹಜ. ಆದರೆ ಇಲ್ಲೊಂದು ಕಡೆ ತಾಯಿಯೊಬ್ಬಳ ಆ ಕಾತುರ ಮೂರು ವರ್ಷಗಳ ಬಳಿಕ ತಣಿದಿದೆ. ಅರ್ಥಾತ್, ಈ ತಾಯಿ ತಾನು ಜನ್ಮ ನೀಡಿದ ಮಗುವನ್ನು ಕಂಡಿದ್ದು ಮೂರು ವರ್ಷಗಳ ನಂತರ!

    ಅಸ್ಸಾಮ್​ನ ಬರ್ಪೆಟ್ಟಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂರು ವರ್ಷಗಳ ಹಿಂದೆ ಈ ಹೆರಿಗೆ ಆಗಿತ್ತು. ಅಂದು ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರಿಗೆ ಹೆರಿಗೆ ಆಗಿತ್ತು. ಆದರೆ ಆ ಪೈಕಿ ಒಬ್ಬಾಕೆಯ ಮಗು ಹುಟ್ಟುವಾಗಲೇ ಸತ್ತಿತ್ತು.

    2019ರ ಮೇ 3ರಂದು ಬರ್ಪೆಟಾ ಜಿಲ್ಲೆಯ ನಜ್ಮಾ ಖನಂ ಎಂಬಾಕೆ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದರು. ಹೆರಿಗೆ ಬಳಿಕ ಆಕೆಯನ್ನು ಐಸಿಯುಗೆ ದಾಖಲಿಸಲಾಗಿತ್ತು ಹಾಗೂ ಮಗುವನ್ನು ಚೈಲ್ಡ್​ ಕೇರ್​ ರೂಮ್​ಗೆ ಕೊಂಡೊಯ್ಯಲಾಗಿತ್ತು. ಕೆಲವು ಗಂಟೆಗಳ ಬಳಿಕ ಆಸ್ಪತ್ರೆ ಸಿಬ್ಬಂದಿ ಇನ್ನೊಬ್ಬ ಮಹಿಳೆ ಹೆತ್ತಿದ್ದ ಸತ್ತಮಗುವನ್ನು ಈಕೆಯ ಕುಟುಂಬಸ್ಥರಿಗೆ ನೀಡಿದ್ದರು.

    ಚೇತರಿಸಿಕೊಂಡ ಬಳಿಕ ವಿಷಯ ತಿಳಿದ ನಜ್ಮಾ ತಾನು ಜೀವಂತ ಮಗುವಿಗೆ ಜನ್ಮಕೊಟ್ಟಿದ್ದು, ಮಗು ಚೆನ್ನಾಗಿಯೇ ಇತ್ತು ಎಂದು ಈ ಮಗು ತನ್ನದಲ್ಲ ಎಂದು ವಾದಿಸಿದ್ದರು. ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಆ ದಿನ ಹೆರಿಗೆ ಆದವರ ಹೆಸರಿನ ಪಟ್ಟಿಯನ್ನು ಪರಿಶೀಲಿಸಿದಾಗ ಅಂದು ನಜ್ಮಾ ಖನಂ ಮತ್ತು ನಜ್ಮಾ ಖತುನ್​ ಎಂಬಿಬ್ಬರ ಹೆರಿಗೆ ಆಗಿದ್ದು ಗಮನಕ್ಕೆ ಬಂದಿತ್ತು.

    ಬಳಿಕ ನಜ್ಮಾ ಖನಂ ಮನೆಯವರು ಬರ್ಪೆಟ್ಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ ಡಿಎನ್​ಎ ಪರೀಕ್ಷೆ ನಡೆದಿದ್ದು, ಮೂರು ವರ್ಷಗಳ ಬಳಿಕ ಕೋರ್ಟ್ ನಿರ್ದೇಶನದ ಮೇರೆಗೆ ಮಗು ತನ್ನ ನಿಜವಾದ ತಾಯಿ ನಜ್ಮಾ ಖನಂ ಮಡಿಲಿಗೆ ಸೇರಿದೆ.

    ಯುವತಿಯನ್ನು ಬೆಂಗಳೂರಿಗೆ ಕರೆದೊಯ್ಯಲು 3 ಆ್ಯಂಬುಲೆನ್ಸ್, ಶಿವಮೊಗ್ಗದಿಂದಲೇ ಜೀರೋ ಟ್ರಾಫಿಕ್​!

    ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts