More

    ಹರಿಣ ಪಡೆಗೆ ಅನಿರೀಕ್ಷಿತ ಸೋಲು: ಆಫ್ರಿಕಾ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ನೆದರ್ಲೆಂಡ್

    ಧರ್ಮಶಾಲಾ: ಸಂಘಟಿತ ಬೌಲಿಂಗ್ ದಾಳಿಯ ಎದುರು ಲಯ ತಪ್ಪಿದ ದಕ್ಷಿಣ ಆಫ್ರಿಕಾ ತಂಡ, 13ನೇ ಆವೃತ್ತಿಯ ಏಕದಿನ ವಿಶ್ವಕಪ್‌ನಲ್ಲಿ ಪರಾಭವಗೊಂಡಿದೆ. ನಾಯಕ ಸ್ಕಾಟ್ ಎಡ್ವರ್ಡ್ಸ್ (78*ರನ್, 69 ಎಸೆತ, 10 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್ ಸಾಹಸ ಮತ್ತು ಬೌಲರ್ ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ನೆದರ್ಲೆಂಡ್ ತಂಡ 38 ರನ್‌ಗಳಿಂದ ಹರಿಣಗಳ ಎದುರು ಗೆದ್ದು ಬೀಗಿದೆ. ಇದರೊಂದಿಗೆ ಟೆಂಬಾ ಬವುಮಾ ಪಡೆ ಹ್ಯಾಟ್ರಿಕ್ ಗೆಲುವಿನಿಂದ ವಂಚಿತಗೊಂಡಿದೆ. ಎರಡು ದಿನದ ಅಂತರದಲ್ಲಿ 2 ಅನಿರೀಕ್ಷಿತ ಸೋಲಿನ ಲಿತಾಂಶಕ್ಕೆ ಟೂರ್ನಿ ಸಾಕ್ಷಿಯಾಗಿದೆ.
    ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನೆದರ್ಲೆಂಡ್ ಆರಂಭಿಕ ಆಘಾತ ಹಿಮ್ಮೆಟ್ಟಿಸಿ, ನಾಯಕ ಸ್ಕಾಟ್ ಎಡ್ವರ್ಡ್ಸ್ (78*ರನ್, 69 ಎಸೆತ, 10 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್ ಸಾಹಸದಿಂದ 43 ಓವರ್‌ಗಳಲ್ಲಿ 8 ವಿಕೆಟ್‌ಗೆ 245 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟರ್ ವೈಲ್ಯದಿಂದ ದ.ಆಫ್ರಿಕಾ 42.5 ಓವರ್‌ಗಳಲ್ಲಿ 207 ರನ್ ಸರ್ವಪತನ ಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts