More

    ನೇತಾಜಿ ಸ್ವಾಭಿಮಾನದ ದಿಟ್ಟ ಚೇತನ

    ಶಿಕಾರಿಪುರ: ಸುಭಾಷ್ ಚಂದ್ರ ಬೋಸ್ ಅವರ ಪ್ರಖರ ನಿಲುವು ಹಾಗೂ ಸ್ವಾತಂತ್ರ‍್ಯ ಹೋರಾಟದ ವೇಗಕ್ಕೆ ಬ್ರಿಟಿಷ್ ಸರ್ಕಾರ ಬೆದರಿ ಹೋಗಿತ್ತು. ಸ್ವಾಭಿಮಾನದ ದಿಟ್ಟ ಚೇತನವಾಗಿದ್ದ ಅವರು ನೇರ ನಡೆ ನುಡಿಯ ಕ್ಷಾತ್ರ ತೇಜವಾಗಿದ್ದರು ಎಂದು ಪ್ರಾಚಾರ್ಯ ಪಿ.ವಿಶ್ವನಾಥ ಹೇಳಿದರು.
    ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಜಯಂತ್ಯುತ್ಸವದಲ್ಲಿ ಮಾತನಾಡಿ, ರಾಷ್ಟçಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದು ಎಂಬ ದಿಟ್ಟ ನಿಲುವು ಹೊಂದಿದ್ದ ಬೋಸ್ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲ ತುಂಬಿದ್ದರು ಎಂದರು.
    ಕಷ್ಟಪಟ್ಟು ಗಳಿಸಿದ್ದ ಐಸಿಎಸ್ ಪದವಿಯನ್ನೇ ತಿರಸ್ಕರಿಸಿ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಧುಮುಕಿದ್ದ ಬೋಸ್ ಅವರ ರಾಜಕೀಯ ಚಿಂತನೆಯ ವೈಶಾಲ್ಯ ಯಾರಲ್ಲೂ ಇರಲಿಲ್ಲ. ಹಲವು ರಾಷ್ಟçಗಳನ್ನು ಓಡಾಡಿ ಭಾರತದ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ಹೆಚ್ಚಿಸಿದರು. ತಮ್ಮ ಕ್ರಾಂತಿ ಪಥದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ ಎಂದು ಹೇಳಿದರು.
    ಜಪಾನ್‌ನಿಂದ ಬೆಂಬಲಿತವಾದ ಆಜಾದ್ ಹಿಂದ್ -Ëಜ್ ಮತ್ತು ಭಾರತದೊಳಗಿನ ದಂಗೆಯ ಸಹಾಯದಿಂದ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಕೊನೆಗೊಳಿಸಬಹುದು ಎಂದು ನೇತಾಜಿ ನಂಬಿದ್ದರು. ಅದಕ್ಕಾಗಿ ಅವರು ಆಗ್ನೇಯ ಏಷ್ಯಾದಲ್ಲಿ ವಾಸಿಸುವ ಎಲ್ಲ ಧರ್ಮಗಳು ಮತ್ತು ಪ್ರದೇಶಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ತಮ್ಮ ಪ್ರಖರ ಭಾಷಣದ ಮೂಲಕ ಯುವಕರನ್ನು ಹುರಿದುಂಬಿಸುತ್ತಿದ್ದರು ಎಂದರು.
    ಪ್ರಭಾರಿ ಮುಖ್ಯಶಿಕ್ಷಕ ಪ್ರಶಾಂತ ಕುಬಸದ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts