More

    ನೇಪಾಳ ರಾಜಕೀಯದಲ್ಲಿ ಭಾರತೀಯ ಸಂಜಾತರ ಪ್ರಾತಿನಿಧ್ಯಕ್ಕೆ ಮತ್ತಷ್ಟು ಬಲ; ಹೊಸ ಪಕ್ಷಕ್ಕೆ ಮಾನ್ಯತೆ

    ನವದೆಹಲಿ: ಚೀನಾ ಪರ ನಿಲುವು ತಾಳುತ್ತ ಕಮ್ಯುನಿಸ್ಟ್​ ರಾಷ್ಟ್ರವೆಂಬಂತೆ ವರ್ತಿಸುತ್ತಿರುವ ನೇಪಾಳದಲ್ಲಿ ಹಾಗೂ ನೇಪಾಳದ ರಾಜಕೀಯದಲ್ಲಿ ಭಾರತೀಯ ಸಂಜಾತರಿಗೆ ಮತ್ತಷ್ಟು ಬಲ ಬಂದಂತಾಗಿದೆ.

    ನೂತನವಾಗಿ ರಚಿಸಲಾದ ಮಾದೇಶಿ ( ಬಹುತೇಕ ಭಾರತೀಯ ಸಂಜಾತರು ಈ ಗುಂಪಿಗೆ ಸೇರುತ್ತಾರೆ) ರಾಜಕೀಯ ಪಕ್ಷ ಜನತಾ ಸಮಾಜವಾದಿ ಪಾರ್ಟಿ ಆಫ್​ ನೇಪಾಳಕ್ಕೆ ಚುನಾವಣಾ ಆಯೋಗವು ಮಾನ್ಯತೆ ನೀಡಿದೆ.

    ಇದನ್ನೂ ಓದಿ; ಕಾಠ್ಮಂಡು ಕಂಗೆಡಿಸುವ, ಶಿಮ್ಲಾ, ದೆಹಲಿ ನಡುಗಿಸುವ ವಿದ್ಯಮಾನ ಬಾಕಿಯಿದೆ…!

    ಕಳೆದ ಏಪ್ರಿಲ್​ 23ರಂದು ಸಮಾಜವಾದಿ ಪಾರ್ಟ್​ ಆಫ್​ ನೇಪಾಳ್​ ಹಾಗೂ ರಾಷ್ಟ್ರೀಯ ಜನತಾ ಪಾರ್ಟಿ ವಿಲೀನಗೊಳಿಸಿ ಹೊಸ ಪಕ್ಷ ರಚಿಸಲಾಗಿದೆ. ಜೂನ್​ ಏಳರಂದೇ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಗೆ ಪೂರ್ಣಗೊಳ್ಳದಿರಲು ಪ್ರಧಾನಿ ಕೆ.ಪಿ. ಶರ್ಮ ಓಲಿ ಇದಕ್ಕೆ ಅಡ್ಡಗಾಲು ಹಾಕಿದ್ದರೆಂದು ಆರೋಪಿಸಲಾಗಿದೆ.

    ಒಟ್ಟು 32 ಸದಸ್ಯ ಬಲದೊಂದಿಗೆ ನೇಪಾಳದಲ್ಲಿ ಮೂರನೇ ಅತಿ ದೊಡ್ಡ ಪಕ್ಷವೆಂಬ ಹೆಗ್ಗಳಿಕೆ ಇದರದ್ದಾಗಿದೆ. ನೇಪಾಳ ಕಮ್ಯುನಿಸ್ಟ್​ ಪಾರ್ಟಿ (ಎನ್​ಸಿಪಿ) 173 ಸ್ಥಾನದೊಂದಿಗೆ ಅಧಿಕಾರದಲ್ಲಿದ್ದರೆ, ವಿರೋಧ ಪಕ್ಷವಾಗಿರುವ ನೇಪಾಳ ಕಾಂಗ್ರೆಸ್​ 60 ಸ್ಥಾನಗಳಲ್ಲಿ ಜಯಗಳಿಸಿದೆ.
    ಪ್ರಧಾನಿ ಓಲಿಯನ್ನು ಕೆಳಗಿಳಿಸುವ ಪ್ರಯತ್ನಗಳು ಎನ್​ಸಿಪಿಯಲ್ಲಿ ಮುಂದುವರಿದಿರುವಂತೆಯೇ, ಮತ್ತೊಂದು ರಾಜಕೀಯ ಶಕ್ತಿ ಉದಯವಾಗಿದೆ. ಇದರಿಂದಾಗಿ ನೇಪಾಳದ ಚೀನಾ ಪರ ಒಲವು ಕಡಿಮೆಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ; ಭಾರತದ ಪರ ದನಿ ಎತ್ತಿದ ಸಂಸದೆಯ ಲೋಕಸಭಾ ಸದಸ್ಯತ್ವವನ್ನೇ ಕಸಿದ ನೇಪಾಳ…!

    ನೇಪಾಳದ ಪೌರತ್ವ ಕಾಯ್ದೆ ತಿದ್ದುಪಡಿಗೆ ಮಾದೇಶಿಗಳು ಭಾರಿ ವಿರೋದ ವ್ಯಕ್ತಪಡಿಸಿ ದೇಶಾದ್ಯಂತ ಹಲವು ದಿನಗಳವರೆಗೆ ಪ್ರತಿಭಟನೆ ನಡೆಸಿದ್ದರು.

    ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts