More

    ನೆಲ್ಲರಗಿ ಗ್ರಾಮದೇವಿ ಪ್ರಸನ್ನಗೆ ಪ್ರಥಮ

    ಹಳಿಯಾಳ: ತಾಲೂಕಿನ ತೇರಗಾಂವ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಒಂದು ಕ್ವಿಂಟಾಲ್ ಮರಳು ತುಂಬಿದ ಚೀಲವನ್ನು ಬಂಡಿಯಲ್ಲಿ ಹೇರಿಕೊಂಡು ಓಡಿಸುವ ಎತ್ತಿನ ಬಂಡಿ ಶರ್ಯತ್​ನಲ್ಲಿ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ನೆಲ್ಲರಗಿ ಗ್ರಾಮದೇವಿ ಪ್ರಸನ್ನ ಎತ್ತುಗಳ ಜೋಡಿ ಪ್ರಥಮ ಸ್ಥಾನ ಪಡೆಯಿತು.

    ತೇರಗಾಂವ, ಮಾಗವಾಡ, ಅಂತ್ರೋಳ್ಳಿ ಗ್ರಾಮಸ್ಥರು ಆಯೋಜಿಸಿದ್ದ ಶರ್ಯತ್ ತೇರಗಾಂವ ಗ್ರಾಮದ ಕುಂಬಾರ ಕೆರೆಗೆ ಹೋಗುವ ರಸ್ತೆ ಪಕ್ಕದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೂ ನಡೆಯಿತು.

    ಹಳಿಯಾಳ ತಾಲೂಕು ಸೇರಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಕೊಲ್ಲಾಪುರ, ಕಲಘಟಗಿಯಿಂದ 46ಕ್ಕೂ ಹೆಚ್ಚು ಎತ್ತಿನ ಜೋಡಿಗಳು ಶರ್ಯತ್​ನಲ್ಲಿ ಭಾಗವಹಿಸಿದ್ದವು. ಒಟ್ಟು 5.86 ಲಕ್ಷ ರೂ. ಮೊತ್ತದ ಬಹುಮಾನಗಳನ್ನು ಘೊಷಿಸಲಾಗಿತ್ತು.

    ಬಂಡಿ ಎಳೆಯುವ ಶರ್ಯತ್: ಒಂದು ನಿಮಿಷದಲ್ಲಿ ಅತಿ ಹೆಚ್ಚು ದೂರ ಬಂಡಿ ಎಳೆದುಕೊಂಡು ಹೋಗುವ ಎತ್ತುಗಳ ಜೋಡಿಯು ಬಹುಮಾನಕ್ಕೆ ಪಾತ್ರವಾಗುತ್ತದೆ.

    ಕಲಘಟಗಿ ತಾಲೂಕಿನ ನೆಲ್ಲರಗಿಯ ಗ್ರಾಮದೇವಿ ಪ್ರಸನ್ನ ಎತ್ತುಗಳು ಪ್ರಥಮ ಬಹುಮಾನ 91 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ಪಡೆದವು. ಹಿರೇಹೊನ್ನಳ್ಳಿಯ ಉಳವಿ ಚನ್ನಬಸವೇಶ್ವರ ಪ್ರಸನ್ನ ಜೋಡಿಯು ದ್ವಿತೀಯ ಬಹುಮಾನ 71 ಸಾವಿರ ರೂ. ನಗದು ಮತ್ತು ಟ್ರೋಫಿ ಪಡೆಯಿತು.

    ಬೆಳಗಾವಿಯ ವಾಘೊಡೆ ಚವಾಟೆಪ್ಪ ಪ್ರಸನ್ನ ಜೋಡಿ ತೃತೀಯ ಬಹುಮಾನ 55 ಸಾವಿರ ರೂ. ನಗದು ಮತ್ತು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬೆಳಗಾವಿ ಮುತಗಾದ ಲಕ್ಷ್ಮೀದೇವಿ ಪ್ರಸನ್ನ ಜೋಡಿಯು ನಾಲ್ಕನೇ ಬಹುಮಾನ 41 ಸಾವಿರ ರೂ., ಕುಪ್ಪಟಗೇರಿಯ ಶ್ರೀ ಭಾವೇಶ್ವರ ಪ್ರಸನ್ನ ಜೋಡಿಯು ಐದನೇ ಬಹುಮಾನ 35 ಸಾವಿರ ರೂ. ಪಡೆದವು. ತೇರಗಾಂವ ಗ್ರಾಮದ ಜನಪ್ರತಿನಿಧಿಗಳು, ರೈತ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts