More

    ನಿರ್ಲಕ್ಷೃ ತೋರಿದರೆ ಕಠಿಣ ಕ್ರಮ

    ಸವದತ್ತಿ: ಕರೊನಾ ಸೋಂಕು ನಿಯಂತ್ರಣದಲ್ಲಿ ನಿರ್ಲಕ್ಷೃ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗ್ರಾಮಲೆಕ್ಕಾಧಿಕಾರಿಗಳು ಹಳ್ಳಿಗಳಿಗೆ ನೇರವಾರಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

    ಸ್ಥಳೀಯ ತಾಪಂ ಸಭಾಭವನದಲ್ಲಿ ಜರುಗಿದ ವಿವಿಧ ಟಾಸ್ಕ್‌ಫೋರ್ಸ್‌ಗಳ ಸಭೆಯಲ್ಲಿ ಅವರು ಮಾತನಾಡಿದರು. ನಿರಂತರ ಸಭೆಗಳು, ಅಗತ್ಯ ಕ್ರಮದಿಂದ ಸವದತ್ತಿ ತಾಲೂಕಿನಲ್ಲಿ ಈವರೆಗೆ ಒಂದೂ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಇದು ತಾಲೂಕು ಆಡಳಿದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ, ಸರಿಯಾಗಿ ಕಾರ್ಯನಿರ್ವಹಿಸದ ಗ್ರಾಮಲೆಕ್ಕಾಧಿಕಾರಿಳನ್ನು ವರ್ಗಾವಣೆ ಮಾಡಲು ಕ್ರಮ ಜರುಗಿಸಿ ಎಂದು ತಹಸೀಲ್ದಾರ್‌ಗೆ ತಿಳಿಸಿದರು. ಜನತಾ ಕರ್ಫ್ಯೂ ನಂತರ ಯಾವುದೇ ಗ್ರಾಮಲೆಕ್ಕಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿಲ್ಲವೆಂಬ ಮಾಹಿತಿ ಇದೆ.

    ಎಲ್ಲವೂ ಮೇಲಾಧಿಕಾರಿಗಳೇ ಮಾಡಬೇಕೆಂದರೆ ಅದು ಅಸಾಧ್ಯ. ಪ್ರತಿಯೊಬ್ಬ ತಲಾಠಿಯೂ ಆಯಾ ಗ್ರಾಮಗಳ ಟಾಸ್ಕ್ ಫೋರ್ಸ್‌ನೊಂದಿಗೆ ಸೇರಿಕೊಂಡು ಕೆಲಸ ಮಾಡಬೇಕು. ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ರೋಗದ ತೀವ್ರತೆ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಪುರಸಭೆ ವ್ಯಾಪ್ತಿಯ ಶಾಂತಿ ನಗರದಲ್ಲಿ ಅನುಮತಿ ಇಲ್ಲದ ಮಾಂಸದ ಅಂಗಡಿ ತೆರೆಯಲಾಗಿದ್ದು, ಕೂಡಲೇ ವಿಚಾರಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಕೆ.ಐ.ನಾಗನೂರ ಅವರಿಗೆ ಸೂಚಿಸಿದರು. ತಹಸೀಲ್ದಾರ್ ಪ್ರಶಾಂತ ಪಾಟೀಲ ಮಾತನಾಡಿದರು. ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ತಾಪಂ ಇಒ ಯಶವಂತಕುಮಾರ, ಉಪತಹಸೀಲ್ದಾರ್ ಡಿ.ವಿ.ಗುಂಡಪ್ಪಗೋಳ, ನರೇಗಾ ಅಧಿಕಾರಿ ಸಂಗನಗೌಡ ಹಂದ್ರಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts