More

    ಗ್ಯಾರಂಟಿ ಹಿಂದೆಬಿದ್ದು ಅಭಿವೃದ್ಧಿಗಳ ಕಡೆಗಣನೆ: ಬಿವೈಆರ್ ಬೇಸರ

    ಶಿವಮೊಗ್ಗ: ರಾಜ್ಯ ಸರ್ಕಾರ ಜನರಿಗೆ ಗ್ಯಾರಂಟಿ ಭಾಗ್ಯಗಳನ್ನು ನೀಡುವ ಜತೆಗೆ ಬಡವರ ಜೇಬಿಗೆ ಕತ್ತರಿಯನ್ನೂ ಹಾಕಿದೆ. ಗ್ಯಾರಂಟಿಗಳ ಪೂರೈಕೆಗಾಗಿ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದೂರಿದರು.

    ಗ್ಯಾರಂಟಿ ಈಡೇರಿಕೆಗಾಗಿ ತರಾತುರಿಯಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದು ಒಂದೆಡೆಯಾದರೆ ವಿದ್ಯುತ್ ಕೊರತೆಯಿಂದ ಉಂಟಾಗುತ್ತಿರುವ ಲೋಡ್‌ಶೆಡ್ಡಿಂಗ್ ನಿರ್ವಹಣೆ ಮಾಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಮುಂಗಾರು ಕೈಕೊಟ್ಟಿರುವುದರಿಂದ ಪಂಪ್‌ಸೆಟ್ ಮೂಲಕವಾದರೂ ಕೃಷಿ ಜಮೀನಿಗೆ ನೀರು ಪೂರೈಸಲು ರೈತರು ಮುಂದಾದರೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದರು.
    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಈ ಕಠಿಣ ಸಂದರ್ಭದಲ್ಲಿ ನೆರೆ ರಾಜ್ಯಗಳಿಂದಾದರೂ ವಿದ್ಯುತ್ ಖರೀದಿಸಿ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
    ಶಿಕಾರಿಪುರ ತಾಲೂಕಿನಲ್ಲಿ ಬಿ.ಎಸ್.ಯಡಿಯೂರಪ್ಪ ಏತನೀರಾವರಿ ಯೋಜನೆ ಅನುಷ್ಟಾನಗೊಳಿಸಿದ್ದರು. ಈಗ ನಿರಂತರ ವಿದ್ಯುತ್ ಪೂರೈಕೆಯಾದರೆ ಹಲವು ಕೆರೆಗಳನ್ನು ತುಂಬಿಸಬಹುದು. ಅದರಿಂದ ಬರದ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಸಾಧ್ಯವಿದೆ. ಆದರೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts