More

    ಋಣಾತ್ಮಕ ಚಿಂತನೆಗೆ ಮನಸೆ ಕಾರಣ

    ಮಾನ್ವಿ: ಧನಾತ್ಮಕ ಚಿಂತನೆ, ಸಮಯಕ್ಕೆ ಸರಿಯಾಗಿ ನಿದ್ರೆ, ಊಟ ಸೇವನೆಯಿಂದ ಉತ್ತಮವಾದ ಆರೋಗ್ಯ ಪಡೆಯಲು ಸಾಧ್ಯ ಎಂದು ಖ್ಯಾತ ಮಾನಸಿಕ ರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.

    ಇದನ್ನೂ ಓದಿ: ನೆಟ್ಟಿಗರ ಗಮನಸೆಳೆದ ಬುಲ್​ ರೈಡರ್​: ದೆಹಲಿಯ ರಸ್ತೆಗಳಲ್ಲಿಯೇ ಗೂಳಿ ಸವಾರಿ ಮಾಡಿದ್ದೇಕೆ?

    ಪಟ್ಟಣದ ಧ್ಯಾನ ಮಂದಿರದಲ್ಲಿ ರಾಜಗುರು ಲೋಕಕಲ್ಯಾಣ ಟ್ರಸ್ಟ್, ಮಾಂಟೇಸರಿ ಶಾಲೆ, ಸಿಆರ್‌ಸಿ ಸ್ನೇಹ ಬಳಗ ಬೆಂಗಳೂರುದಿಂದ ಹಮ್ಮಿಕೊಂಡ ಡಾ.ಸಿಆರ್‌ಸಿ 75ರ ಸಂಭ್ರಮ, ಸಾರ್ವಜನಿಕರೊಂದಿಗೆ ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

    ಪ್ರಕೃತಿ ಪ್ರತಿಯೊಬ್ಬರಿಗೂ 80 ರಿಂದ 100 ವರ್ಷದವರೆಗೆ ಬದಕನ್ನು ನೀಡಿದೆ. ಎಲ್ಲರು ಪೂರ್ಣ ಪ್ರಮಾಣದಲ್ಲಿ ಜೀವಿಸಬೇಕು ಆದರೆ ಶೇ.30ರಷ್ಟು ಜನರಿಗೆ ಆತಂಕ, ಖಿನ್ನತೆ, ಭಯ ಆವರಿಸಿಕೊಳ್ಳುವುದಕ್ಕೆ ಅತಿಯಾದ ಒತ್ತಡದ ಜೀವನ ಕಾರಣ.

    ಗೂಗಲ್ ವೈದ್ಯರನ್ನು ನಂಬದೆ ನೀಜವಾದ ವೈದ್ಯರ ಸಲಹೆ ಪಡೆದಲ್ಲಿ ಉತ್ತಮ ಆರೋಗ್ಯ ಹೊಂದಬಹುದು. ಹದಿಹರೆಯದ ಯುವಕ, ಯುವತಿಯರಲ್ಲಿ , ಮಧ್ಯಪಾನ, ಧೂಮಪಾನ ಅಭ್ಯಾಸ ಹೆಚ್ಚುತ್ತಿರುವುದರಿಂದ ಹೃದಯಾಘತಕ್ಕೆ ಕಾರಣವಾಗುತ್ತಿದೆ. ನಿವೃತ್ತ ಜೀವನದಲ್ಲಿ ಕೂಡ ಚಟುವಟಿಕೆಯಿಂದ ಕಳೆಯಬೇಕು ಎಂದರು.

    ಕಲಬುರ್ಗಿಯ ಎಸ್.ಎಸ್.ಹಿರೇಮಠ ಮಾತನಾಡಿ, ಡಾ.ಸಿ.ಆರ್.ಚಂದ್ರಶೇಖರ 75ರ ಸಂಭ್ರಮ ಅಂಗವಾಗಿ ಸಿಆರ್‌ಸಿ ಸ್ನೇಹ ಬಳಗ ದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 365 ದಿನಗಳ ಕಾಲ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಜತೆಗೆ ರಚಿಸಿದ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಗುವುದು ಎಂದರು.

    ರಾಜಗುರು ಲೋಕಕಲ್ಯಾಣ ಟ್ರಸ್ಟ್ ಮುಖ್ಯಸ್ಥ ಉಮಮಹೇಶ್ವರ, ಮಾಂಟೇಸರಿ ಶಾಲೆಯ ಅಧ್ಯಕ್ಷೆ ಶಶಿಕಾಲ ಪಾಟೀಲ್, ಸ್ನೇಹ ಜ್ಯೋತಿ ಶಾಲೆ ಅಧ್ಯಕ್ಷ ಚನ್ನಪ್ಪ ಗಬ್ಬೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts