More

    ಹೊಳೆನರಸೀಪುರ ನ್ಯಾಯಾಲಯಕ್ಕೆ ಅಗತ್ಯ ಸೌಲಭ್ಯ

    ಹೊಳೆನರಸೀಪುರ: ನಮ್ಮ ನ್ಯಾಯಾಲಯ 1893ರಲ್ಲಿ ಪ್ರಾರಂಭವಾಗಿದ್ದು, ಆರಂಭದಲ್ಲಿ 15 ವಕೀಲರಿದ್ದರು. ಇದೀಗ 140ಕ್ಕೂ ಹೆಚ್ಚು ವಕೀಲರಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ವಕೀಲರೂ ಇದ್ದಾರೆ. ಅವರಿಗೆ ಒಂದು ಪ್ರತ್ಯೇಕ ಕೋಠಡಿಯ ಅವಶ್ಯಕತೆ ಇದೆ ಎಂದು ಹಿರಿಯ ವಕೀಲ ರಾಮಪ್ರಸನ್ನ ಮನವಿ ಮಾಡಿದರು.

    ನ್ಯಾಯಾಲಯಗಳ ಸ್ಥಿತಿಗತಿ ಪರಿಶೀಲಿಸಲು ಇತ್ತೀಚೆಗೆ ಆಗಮಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿಗೆ ವಕೀಲರ ಸಂಘದಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿಗೆ ಅಧೀನ ನ್ಯಾಯಾಲಯ ಎಡಿಜೆ ಕೋರ್ಟ್ ಬೇಕಾಗಿದೆ. ಇದಕ್ಕೆ ಅಗತ್ಯವಾದ ಕಟ್ಟಡವೂ ಇದೆ. ನ್ಯಾಯಾಲಯ ಆವರಣದಲ್ಲಿ ಕಂಪ್ಯೂಟರ್, ಜೆರಾಕ್ಸ್, ಕ್ಯಾಂಟೀನ್, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ನ್ಯಾಯಾಲಯದಲ್ಲಿ ಸಿಬ್ಬಂದಿ ಕೊರತೆ ಇದ್ದು, ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ನೇಮಿಸಿ ಕೊಡಬೇಕು. ಜತೆಗೆ ಸೂಕ್ತ ಲೈಬ್ರರಿ ಬೇಕು ಎಂದು ಮನವಿ ಪತ್ರ ನೀಡಿದರು.

    ಮನವಿ ಸ್ವೀಕರಿಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರು, ತಾಲೂಕು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅಮರ್, ನ್ಯಾಯಾಧೀಶ ಪ್ರವೀಣ್, ಅಪರ ನ್ಯಾಯಾಧೀಶ ಸಿದ್ದರಾಮು ಜತೆಗೆ ಮಾತುಕತೆ ನಡೆಸಿ, ಅಗತ್ಯ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

    ವಕೀಲರ ಸಂಘದಿಂದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಸಿ.ಎಂ.ಅಶೋಕ್, ಕಾರ್ಯದರ್ಶಿ ವಿ.ಆರ್.ಸಂತೋಷ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಆರ್.ಡಿ.ರವೀಶ್, ನಟರಾಜ್, ಶಿವಮೂರ್ತಿ, ಸುನೀಲ್, ಕೆ.ರವಿ, ಹಿರಿಯ ವಕೀಲರಾದ ಎ.ಶ್ರೀಧರ್, ಪುರುಷೋತ್ತಮ್, ಸೋಮಶೇಖರ್, ರಾಜಶೇಖರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts