More

    ದೀಪಿಕಾ ಪಡುಕೋಣೆಗೂ ಸುತ್ತಿಕೊಳ್ಳುತ್ತಾ ಡ್ರಗ್ಸ್​ ಮಾಫಿಯಾ ಉರುಳು?

    ಮುಂಬೈ: ಇತ್ತ ಸ್ಯಾಂಡಲ್​ವುಡ್​ನಲ್ಲಿ ನಟಿಯರಾದ ರಾಗಿಣಿ, ಸಂಜನಾ ಡ್ರಗ್ಸ್​ ಮಾರಾಟ ಜಾಲದಲ್ಲಿ ಸಿಲುಕಿಕೊಂಡಿರುವ ಬೆನ್ನಿಗೇ ಅತ್ತ ಬಾಲಿವುಡ್​ನಲ್ಲಿ ಕನ್ನಡದ ಹುಡುಗಿ ನಟಿ ದೀಪಿಕಾ ಪಡುಕೋಣೆಗೂ ಡ್ರಗ್ಸ್​ ಮಾಫಿಯಾ ಉರುಳು ಸುತ್ತಿಕೊಳ್ಳುತ್ತಾ ಎಂಬ ಕುತೂಹಲ ಮೂಡಿದೆ.

    ಮಾದಕ ವಸ್ತುಗಳ ನಿಯಂತ್ರಣ ವಿಭಾಗ (ಎನ್​ಸಿಬಿ) ಶೀಘ್ರದಲ್ಲೇ ದೀಪಿಕಾ ಪಡುಕೋಣೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿಗೊಳಿಸಲಿದೆ ಎಂಬ ವಿಷಯ ಹರಿದಾಡುತ್ತಿದೆ. ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಎನ್​ಸಿಬಿ ತನಿಖೆ ನಡೆಸುತ್ತಿದ್ದು, ತನ್ಮಧ್ಯೆ ಸಿಕ್ಕ ಸುಳಿವಿನ ಆಧಾರದ ಮೇರೆಗೆ ದೀಪಿಕಾ ಪಡುಕೋಣೆಗೆ ಸಮನ್ಸ್​ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಟ್ಯಾಲೆಂಟ್ ಮ್ಯಾನೇಜ್​ಮೆಂಟ್ ಏಜೆನ್ಸಿ ಕ್ವಾನ್​ನ ಕರಿಷ್ಮಾ ಎಂಬಾಕೆಯೊಂದಿಗೆ ದೀಪಿಕಾ ನಡೆಸಿದ್ದ ವಾಟ್ಸ್​ಆ್ಯಪ್​ ಚಾಟ್​ ಮಾಹಿತಿ ಕಲೆ ಹಾಕಿರುವ ಎನ್​ಸಿಬಿ ಅಧಿಕಾರಿಗಳು, ದೀಪಿಕಾರನ್ನು ವಿಚಾರಣೆಗೆ ಕರೆಸಲು ಮುಂದಾಗಿದ್ದಾರೆ. ಜತೆಗೆ ನಟಿಯರಾದ ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಅವರಿಗೂ ವಿಚಾರಣಾ ಸಮನ್ಸ್ ಜಾರಿಯಾಗುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts