More

    ಹೊಸ ಬ್ಯುಸಿನೆಸ್ ಆರಂಭಿಸಿದ ಸೌತ್ ಲೇಡಿ ಸೂಪರ್ ಸ್ಟಾರ್: ಅವರ ಕಂಪನಿಗೆ ಯಾರಾದ್ರೂ ಫಿದಾ ಆಗೋದು ಗ್ಯಾರಂಟಿ!

    ಚೆನೈ: ಇತ್ತೀಚೆಗೆ, ನಟನಟಿಯರು ತಾವು ಸಿನಿಮಾಗಳಿಂದ ದುಡಿಯುವುದಲ್ಲದೆ, ಬ್ಯುಸಿನೆಸ್​ಗಳನ್ನು ಮಾಡುವುದು ಆರಂಭಿಸಿ ತಮ್ಮ ಆದಾಯವನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ, ಸೌತ್ ಲೆಡಿ ಸೂಪರ್ ಸ್ಟಾರ್ ನಯನತಾರಾ, ಡಿಸೆಂಬರ್ 2021 ರಲ್ಲಿ ಹೊಸ ಕಾಸ್ಮೆಟಿಕ್ ಕಂಪನಿಯನ್ನು ಪ್ರಾರಂಭಿಸಿದರು. ಅವರ ಕಂಪನಿ ಬೇರೆ ಬೇರೆ ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಗಮನಹರಿಸುತ್ತಿದ್ದು, ಜೊತೆಗೆ ತುಂಬಾ ತರಹದ ತುಟಿ ಉತ್ಪನ್ನಗಳ ಸಂಗ್ರಹವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
    ಇನ್ನು, ನಟಿ ನಯನತಾರಾ ಅವರ ಕಂಪನಿಯ ಸೌಂದರ್ಯ ಉತ್ಪನ್ನವನ್ನು ಲಿಂಗ ತಟಸ್ಥಗೊಳಿಸುವತ್ತ ಗಮನಹರಿಸುತ್ತದೆ ಎನ್ನಲಾಗಿದೆ. ಏಕೆಂದರೆ, ಈಗ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಪುರುಷರೂ ಬಳಸುವುದು ಆರಂಭಿಸಿದ್ದಾರೆ. ತನ್ನ ಕಂಪನಿಯ ಪ್ರಾರಂಭದ ಸಮಯದಲ್ಲಿ ಮಾತನಾಡಿದ ನಟಿ, “ತ್ವಚೆಯ ಉತ್ಪನ್ನಗಳ ವಿಷಯದಲ್ಲಿ ನಾನು ಯಾವತ್ತು ರಾಜಿ ಆಗುವುದಿಲ್ಲ. ನನ್ನ ಸ್ವಂತ ವೈಯಕ್ತಿಕ ಆರೈಕೆಗೆ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸುರಕ್ಷತೆಗಾಗಿ ನಾನು ಹೇಗೆ ಪ್ರಾಮುಖ್ಯತೆ ನೀಡುತ್ತೇನೆ, ಅದೇ ಮೌಲ್ಯಗಳನ್ನು ನನ್ನ ಕಂಪನಿಯ ಉತ್ಪನ್ನಗಳ ವಿಚಾರದಲ್ಲೂ ಪಾಲಿಸುವೆ”, ಎಂದು ತಿಳಿಸಿದ್ದಾರೆ. 

    ಹೊಸ ಬ್ಯುಸಿನೆಸ್ ಆರಂಭಿಸಿದ ಸೌತ್ ಲೇಡಿ ಸೂಪರ್ ಸ್ಟಾರ್: ಅವರ ಕಂಪನಿಗೆ ಯಾರಾದ್ರೂ ಫಿದಾ ಆಗೋದು ಗ್ಯಾರಂಟಿ! ಹೊಸ ಬ್ಯುಸಿನೆಸ್ ಆರಂಭಿಸಿದ ಸೌತ್ ಲೇಡಿ ಸೂಪರ್ ಸ್ಟಾರ್: ಅವರ ಕಂಪನಿಗೆ ಯಾರಾದ್ರೂ ಫಿದಾ ಆಗೋದು ಗ್ಯಾರಂಟಿ!

    ಅಂದಹಾಗೆ, ನಟಿ ನಯನತಾರಾ ಅವರ ಕಂಪನಿಯ ಹೆಸರು ದಿ ಲಿಪ್ ಬಾಮ್ ಕಂಪನಿ”. ಇದಕ್ಕೆ, ಖ್ಯಾತ ಸೌಂದರ್ಯ ತಜ್ಞೆ ರೆನಿಟಾ ರಾಜನ್ ಅವರೊಟ್ಟಿಗೆ ಕೈಜೋಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿಯ ಈ ಹೊಸ ಕಂಪನಿಯಿಂದ ಎಲ್ಲ ವರ್ಗದವರಿಗೆ, ಲಿಂಗವರಿಗೆ ಹೊಂದುವಂತಹ ಲಿಪ್ ಬಾಮ್ ಅನ್ನು ಬಿಡುಗಡೆ ಮಾಡಿದ್ದರು. ಆ ಲಿಪ್ ಬಾಮ್​​ಗೆ ಈಗ ಉತ್ತಮ ಬೇಡಿಕೆ ಇದೆ.
    ಈ ಮೂಲಕ ನಟಿ ನಯನತಾರಾ ಇದೀಗ ಒಳ್ಳೆಯ ಕಂಪನಿಯನ್ನು ಆರಂಭಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು. ಇನ್ನು ಕೆಲಸದ ವಿಚಾರಕ್ಕೆ ಬಂದರೆ, ನಟಿ ನಯನತಾರಾ ಅವರು ನಟ ಶಾರುಖ್ ಖಾನ್ ಅವರ ಲಯನ್‘, ಪೃಥಿವಿರಾಜ್ ಸುಕುಮಾರನ್ ಅವರೊಟ್ಟಿಗೆ ಗೋಲ್ಡ್‘, ತಮಿಳಿನಲ್ಲಿ ಕಾಳಂಗಳ್‘, ನಟ ಚಿರಂಜೀವಿ ಜೊತೆಗೆ ಗಾಡ್ ಫಾದರ್ಮತ್ತು ಇನ್ನು 5ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಮತ್ತಷ್ಟು ರೋಮಾಂಚಕ ಫೋಟೋಗಳು: ‘ಮೆಹೆಂದಿ’ಯಲ್ಲಿ ಮೂಡಿಬಂದ ‘ವಿಕತ್ರಿನಾ’ ಕೆಮಿಸ್ಟ್ರಿ!

    71ನೇ ವಸಂತಕ್ಕೆ ಕಾಲಿಟ್ಟ ತಲೈವಾಗೆ ಶುಭಾಶಯಗಳ ಮಹಾಪೂರ: ರಜನಿ ಬಗ್ಗೆ ನಿಮಗೆ ತಿಳಿಯಬೇಕಾದ 12 ವಿಶೇಷ ಸಂಗತಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts