More

    ಬಾಯ್​ಫ್ರೆಂಡ್​ ಬರ್ತಡೇಗೆ ನಯನಾ ಖರ್ಚು ಮಾಡಿದ ಒಟ್ಟು ಹಣ ಕೇಳಿದ್ರೆ ಹುಬ್ಬೇರಿಸ್ತಿರಾ..!

    ಚೆನ್ನೈ: ಲೇಡಿ ಸೂಪರ್​ಸ್ಟಾರ್​ ನಯನತಾರಾ, ಬಾಯ್​ಫ್ರೆಂಡ್​ ವಿಘ್ನೇಶ್​ ಶಿವನ್​ ಜತೆ ಕೆಲ ದಿನಗಳ ಹಿಂದಷ್ಟೇ ಗೋವಾಗೆ ಭೇಟಿ ನೀಡಿದ ವಿಚಾರ ಭಾರಿ ಸುದ್ದಿಯಾಗಿತ್ತು. ಫೋಟೋಗಳು ಸಹ ವೈರಲ್​ ಆಗಿದ್ದವು. ಇದೇ ಸಂದರ್ಭದಲ್ಲಿ ಬಾಯ್​ಫ್ರೆಂಡ್​ ವಿಘ್ನೇಶ್​ ಹುಟ್ಟುಹಬ್ಬವನ್ನು ನಯನಾ ಭರ್ಜರಿಯಾಗಿ ಆಚರಿಸಿದ್ದರು.

    ಮೇಲೆ ಹೇಳಿರುವುದೆಲ್ಲ ಹಳೆಯ ವಿಚಾರವೇ ಆದರೂ, ಇದೀಗ ಬರ್ತಡೇ ಸಂಬಂಧಿಸಿದ ಬಿಸಿ ಬಿಸಿ ಸುದ್ದಿಯೊಂದು ಕಾಲಿವುಡ್​ ಮೂಲಗಳಿಂದ ಕೇಳಿಬಂದಿದೆ. ಅಂದಹಾಗೆ ನಯನಾ, ತಮ್ಮ ಭಾವಿ ಪತಿಯ ಹುಟ್ಟಹಬ್ಬಕ್ಕೆ ಭಾರಿ ಹಣವನ್ನೇ ಖರ್ಚು ಮಾಡಿದ್ದಾರೆಂದು ತಿಳಿದುಬಂದಿದೆ. ಮೂರು ದಿನಗಳ ಗೋವಾ ಪ್ರವಾಸಕ್ಕಾಗಿ ನಯನಾ ಬರೋಬ್ಬರಿ 25 ಲಕ್ಷ ರೂ. ಖರ್ಚು ಮಾಡಿದ್ದಾರೆಂದು ತಮಿಳು ಚಿತ್ರರಂಗದಲ್ಲಿ ಬಹು ಚರ್ಚೆಯ ವಿಷಯವಾಗಿದೆ.

    ಇದನ್ನು ಓದಿ:‘ ಕೆಜಿಎಫ್​’ ಸಲುವಾಗಿ ಯಶ್ ವರ್ಕೌಟ್​ ಶೈಲಿ ಬದಲು

    ವಿಘ್ನೇಶ್ ತಮ್ಮ​ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾವಿ ಪತಿಗೆ ನಯನಾ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಸದ್ಯ ಪ್ರಣಯ ಪಕ್ಷಿಗಳಾಗಿರುವ ನಯನಾ ಮತ್ತು ವಿಘ್ನೇಶ್​, ಕಾಲಿವುಡ್​ನ ಸ್ಟಾರ್​ ಜೋಡಿಗಳಾಗಿದ್ದಾರೆ. ನಾಲ್ಕು ವರ್ಷಗಳಿಂದ ಡೇಟಿಂಗ್​ ಮೂಡ್​ನಲ್ಲಿರುವ ಜೋಡಿ, ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಆದರೆ, ಇದನ್ನು ತಳ್ಳಿಹಾಕಿರುವ ಜೋಡಿ ನಮ್ಮ ಮದುವೆ ಇನ್ನು ನಿಶ್ಚಯವಾಗಿಲ್ಲ. ಆದರೆ, ಯಾವುದೇ ಸಮಯದಲ್ಲೂ ನಡೆಯಬಹುದು ಎಂದು ಸ್ಪಷ್ಟನೆ ನೀಡಿದ್ದರು. (ಏಜೆನ್ಸೀಸ್​)

    ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts