More

    ಪೋಲಿಯೋ ಹಾಕಿಸದರೆ ಜ್ವರ ಬರದು

    ನಾಯಕನಹಟ್ಟಿ: ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳಿಗೆ ತಗುಲುವ ಅಂಗವಿಕಲತೆ ಸಂಪೂರ್ಣ ತಡೆಗಟ್ಟಿ ಎಂದು ಹಿರಿಯ ಆರೋಗ್ಯ ಸಹಾಯಕ ಎಂ.ಶೇಷಾದ್ರಿ ಪಾಲಕರಲ್ಲಿ ಮನವಿ ಮಾಡಿದರು.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ನಾಯಕನಹಟ್ಟಿಯಲ್ಲಿ 1,060 ಮಕ್ಕಳು ಮತ್ತು ಇತರ ಪಂಚಾಯಿತಿ ವ್ಯಾಪ್ತಿಯಲ್ಲಿ 2,452 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 52 ಆಶಾ ಕಾರ್ಯಕರ್ತರು, 5 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಭಾನುವಾರ ಒಂದೇ ದಿನ ಶೇ.95ರಷ್ಟು ಗುರಿ ಮುಟ್ಟಲಾಗಿದೆ. ಇನ್ನೂ 3 ದಿನಗಳ ಕಾಲ ಮನೆಗಳಿಗೆ ತೆರಳಿ ಉಳಿದ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

    ಪಾಲಕರು ಲಸಿಕೆ ಹಾಕಿಸಿದರೆ ಮಕ್ಕಳಿಗೆ ಜ್ವರ ಬರುತ್ತದೆ ಎಂಬಿತ್ಯಾದಿ ಅನುಮಾನಗಳಿಂದ ಹೊರ ಬಂದು ಕಡ್ಡಾಯವಾಗಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

    ಕಿರಿಯ ಆರೋಗ್ಯ ಸಹಾಯಕಿ ಚೈತ್ರಾ, ಪಪಂ ಆರೋಗ್ಯ ನಿರೀಕ್ಷಕ ಎಂ.ರುದ್ರಮುನಿ, ಎಲ್.ಎಂ.ವಿಜಯಕುಮಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts