More

    ಮನೆಯಲ್ಲೇ ಇದ್ದು ರಂಜಾನ್ ಹಬ್ಬ ಆಚರಿಸಿ

    ನಾಯಕನಹಟ್ಟಿ: ಲಾಕ್‌ಡೌನ್ ಕಾರಣ ಮನೆಯಲ್ಲೇ ಇದ್ದು ರಂಜಾನ್ ಹಬ್ಬ ಆಚರಿಸುವ ಮೂಲಕ ಕರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪೊಲೀಸ್ ಉಪನಿರೀಕ್ಷಕ ಎಸ್.ರಘುನಾಥ್ ಮನವಿ ಮಾಡಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಈಗಾಗಲೇ ರಾಜ್ಯ ವಕ್ಫ್ ಮಂಡಳಿ ಹೊರಡಿಸಿರುವ ನಿಯಮಾವಳಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನಮಾಜ್ ಇತ್ಯಾದಿ ಕಾರಣ ನೀಡಿ ಮಸೀದಿಗೆ ಹೋಗುವಂತಿಲ್ಲ. ಏ.25ರಿಂದ ಆರಂಭವಾಗುವ ರಂಜಾನ್ ಉಪವಾಸ ವ್ರತಾಚರಣೆಯನ್ನು ಮನೆಯಲ್ಲೇ ಇದ್ದು ಆಚರಿಸಬೇಕು ಎಂದು ತಿಳಿಸಿದರು.

    ಐದಕ್ಕಿಂತ ಹೆಚ್ಚು ಜನ ಸೇರದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಧಾರ್ಮಿಕ ವಿಧಿವಿಧಾನ ನೆರವೇರಿಸಬೇಕು. ಇಫ್ತಾರ್‌ಕೂಟ, ಧಾರ್ಮಿಕ ಮೆರವಣಿಗೆ ನಡೆಸುವಂತಿಲ್ಲ. ಅನಗತ್ಯವಾಗಿ ಯುವಕರು ಬೈಕ್‌ಗಳಲ್ಲಿ ಸುತ್ತಾಡದಂತೆ ಬುದ್ಧಿ ಮಾತು ಹೇಳಬೇಕು. ವಕ್ಫ್ ಮಂಡಳಿಯ ನಿಯಮ ಉಲ್ಲಂಘಿಸಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.

    ಜಾಮಿಯಾ ಮಸೀದ್ ಅಧ್ಯಕ್ಷ ಸೈಯದ್ ಅನ್ವರ್, ಮದೀನಾ ಮಸೀದ್ ಅಧ್ಯಕ್ಷ ಮಹಮ್ಮದ್ ಯೂಸುಫ್, ಪಪಂ ಸದಸ್ಯ ಎನ್.ಐ.ಮಹಮ್ಮದ್ ಮನ್ಸೂರ್, ಮುಖಂಡರಾದ ಅಬೂಬಕ್ಕರ್ ಸಿದ್ದಿಕಿ, ಏಜಾಜ್ ಬಾಷಾ, ರಸೂಲ್‌ಬಾಷಾ, ವಾಸೀಂ ಅಹಮ್ಮದ್, ಪ್ರೊಬೇಷನರಿ ಪಿಎಸ್‌ಐ ರಮೇಶ್ ಇದ್ದರು.

    ಚಳ್ಳಕೆರೆ: ರಂಜಾನ್ ಹಬ್ಬದ ಪ್ರಯುಕ್ತ ಚಳ್ಳಕೆರೆ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಆವರಣದಲ್ಲಿ ಭಾನುವಾರ ಮುಸ್ಲಿಂ ಮುಖಂಡರ ಸಭೆ ಜರುಗಿತು. ಡಿವೈಎಸ್ಪಿ ರೋಷನ್ ಜಮೀರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts