More

    ಖಾತ್ರಿ ಸಮರ್ಪಕ ಬಳಕೆ ಅಗತ್ಯ

    ನಾಯಕನಹಟ್ಟಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿಗಳು ಯೋಜನೆಗಳನ್ನು ರೂಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಟಿ.ಯೋಗೀಶ್ ಹೇಳಿದರು.

    ಸಮೀಪದ ಮನಮೈನಹಟ್ಟಿ ಹಾಗೂ ಎನ್.ಮಹಾದೇವಪುರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.

    ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಸೇರಿ ವಿವಿಧ ಕಾಮಗಾರಿಗಳನ್ನು ರೈತರಿಗೆ ನೇರವಾಗಿ ಮಾಡಿಕೊಳ್ಳಬಹುದು. ಇನ್ನಷ್ಟು ಪರಿಣಾಮಕಾರಿಯಾಗಿ ಇವುಗಳನ್ನು ಬಳಸಿದರೆ ರೈತರ ಆದಾಯ ಹೆಚ್ಚಾಗುತ್ತದೆ ಎಂದರು.

    ಬದುಗಳು ವ್ಯರ್ಥವಾಗದಂತೆ ನುಗ್ಗೆ, ಪಶುಗಳು ತಿನ್ನುವ ಗಿಡಗಳು, ಜೈವಿಕ ಗೊಬ್ಬರದ ಗಿಡಗಳನ್ನು ಬೆಳೆಸಬೇಕು. ಇದರ ಜತೆಗೆ ಮಾವು, ನೇರಳೆ, ಹಲಸು ಸೇರಿ ಸಸಿಗಳನ್ನು ಬೆಳೆಸಿದರೆ ರೈತರಿಗೆ ಆದಾಯವೂ ಬರುತ್ತದೆ. ಅಗತ್ಯವಾದ ಗಿಡಗಳನ್ನು ನೀಡುವಂತೆ ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

    ಎನ್.ಮಹಾದೇವಪುರದಲ್ಲಿ ರೈತರು ಉದ್ಯೋಗದ ದಿನಗಳನ್ನು 100ರಿಂದ 150ಕ್ಕೆ ಹಾಗೂ ಕೂಲಿ ದರ ಹೆಚ್ಚಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ, ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯ ಹಂತದಲ್ಲಿದೆ. ಮಾನವ ದಿನಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

    ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಗ್ರಾಪಂ ಅಧ್ಯಕ್ಷ ಪಿ.ಜಿ.ಬೋರನಾಯಕ, ಪಿಡಿಒ ರಾಘವೇಂದ್ರ, ಗ್ರಾಪಂ ಸದಸ್ಯ ಮಂಜಣ್ಣ, ಮುಖಂಡ ಎನ್.ತಿಪ್ಪೇಸ್ವಾಮಿ, ಇಂಜಿನಿಯರ್ ಮಹೇಂದ್ರ, ಪ್ರವೀಣ್, ಮೌನೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts