More

    ಹದಿಮೂರು ವರ್ಷಗಳ ನಂತರ ಆಗಮಿಸಿದ ದೊಡ್ಲಮಾರಿಕಾಂಬೆ

    ನಾಯಕನಹಟ್ಟಿ: ಶ್ರೀ ಕ್ಷೇತ್ರ ನಾಯಕನಹಟ್ಟಿಯಲ್ಲಿ ಮೂರು ದಿನಗಳ ಕಾಲ ಜರುಗಲಿರುವ ದೊಡ್ಲಮಾರಿಕಾಂಬೆ ಜಾತ್ರೆಗೆ ಮಂಗಳವಾರ ಚಾಲನೆ ದೊರಕಿತು.
    ದೊಡ್ಲಮಾರಿಕಾಂಬ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಗಂಗಾಪೂಜೆಗಾಗಿ ದೊಡ್ಡಹಳ್ಳಕ್ಕೆ ಕೊಂಡೊಯ್ಯಲಾಯಿತು. ನಂತರ ನಗಾರಿಯೊಂದಿಗೆ ದೈವದವರು ಎನ್.ದೇವರಹಳ್ಳಿಗೆ ಹೋಗಿ ಪೂಜಾ ವಿಧಿ-ವಿಧಾನಗಳೊಂದಿಗೆ ಅಲ್ಲಿನ ದೇವಿಯನ್ನು ನಾಯಕನಹಟ್ಟಿಗೆ ಕರೆತಂದರು.
    ಪಟ್ಟಣದ ತಳಕು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು 13 ವರ್ಷಗಳ ನಂತರ ಬರುತ್ತಿರುವ ದೇವಿಯ ದರ್ಶನಕ್ಕಾಗಿ ಕಾದು ಕುಳಿತರು. ತಮಟೆ, ಉರುಮೆ, ಜಾನಪದ ವಾದ್ಯಗಳೊಂದಿಗೆ ಕೆ.ಇ.ಬಿ ಬಳಿಯಲ್ಲಿ ತಾತ್ಕಾಲಿಕವಾಗಿ ತಂಗಲುಕಟ್ಟೆಯನ್ನು ನಿರ್ಮಿಸಲಾಗಿತ್ತು. ಕರಿಕಂಬಳಿ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಮಹಿಳೆಯರು ಆರತಿ ಮಾಡಿದರು. ನಂತರ ಅಲ್ಲಿಂದ ಮಾರಿಕಾಂಬ ದೇವಸ್ಥಾನಕ್ಕೆ ದೇವಿಯನ್ನು ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಭಕ್ತರು ದೇವಿಯ ದರ್ಶನ ಪಡೆದರು. ನೆರೆದಿದ್ದ ಭಕ್ತರಿಗೆ ಬೆಸ್ಕಾಂ ಬಳಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ದೊಡ್ಲಮಾರಿಕಾಂಬೆ ಉತ್ಸವದ ದೈವಸ್ಥರು ಹಾಜರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts