More

    ವಿಷ ಮುಕ್ತ ಕೃಷಿಯತ್ತ ಚಿತ್ತ ಅಗತ್ಯ

    ನಾಯಕನಹಟ್ಟಿ: ಅಧಿಕ ರಸಾಯನಿಕ ಬಳಸಿ ಬೆಳೆ ಬೆಳೆಯುವುದರಿಂದ ವಿಷ ಮಿಶ್ರಿತ ಆಹಾರದಿಂದ ಇಂದು ನಾವು ಅನಾರೋಗ್ಯಕ್ಕಿಡಾಗುತ್ತಿದ್ದೇವೆ ಎಂದು ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶಶಿಧರ್ ಆತಂಕ ವ್ಯಕ್ತಪಡಿಸಿದರು.

    ಇಲ್ಲಿನ ಮೈರಾಡ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹವಾಮಾನ ಬದಲಾವಣೆ ಅಳವಡಿಕೆ ಯೋಜನೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ರಸಾಯಿನಿಕ ಗೊಬ್ಬರ ಅಪಾಯ ಎಂದು ಎಚ್ಚರಿಸಿದರು.

    ನಬಾರ್ಡ್ ಹಾಗೂ ಜರ್ಮನಿಯ ಕೆಎಫ್‌ಡಬ್ಲ್ಯು ನೀಡಿದ ಸಹಾಯಧನದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಜಲಾನಯನ ಯೋಜನೆಯಡಿ 12 ಕಾಮಗಾರಿ ನಡೆಸಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಆರು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

    ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಮಾತನಾಡಿ, ಸರ್ಕಾರ ಹಲವು ಸಹಾಯಧನದ ಯೋಜನೆ ರೂಪಿಸಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಂಡರೆ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

    ಮೈರಾಡ ಜಿಲ್ಲಾ ಯೋಜನಾಧಿಕಾರಿ ಸಿ.ಎಸ್.ಗೌಡ ಮಾತನಾಡಿ, ನಾಯಕನಹಟ್ಟಿ ಭಾಗದ ನಾಲ್ಕು ಜಲಾನಯನ ಯೋಜನೆಗಳಿಗೆ 1.87 ಕೋಟಿ ರೂ. ಸಹಾಯಧನ ಸಿಕ್ಕಿದೆ. 1,047 ಎಕರೆ ಪ್ರದೇಶದಲ್ಲಿ ಬದು ನಿರ್ಮಾಣ, ಜಲಮರುಪೂರಣ, ಎರೆಹುಳು ಗೊಬ್ಬರ ತಯಾರಿಕೆಗೆ ಹಣ ನೀಡಲಾಗಿದೆ ಎಂದರು.

    ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ, ಸದಸ್ಯ ಟಿ.ಬಸಣ್ಣ ಕರಿಬಸವೇಶ್ವರಹಳ್ಳ ಜಲಾನಯನ ಸಮಿತಿಯ ಮರುಳಪ್ಪ, ಕಾರ್ಯಕ್ರಮಾಧಿಕಾರಿ ಅಶೋಕ್ ಹಗೆದಾಳ್, ಭಾಗ್ಯಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts