More

    ಪಾಕ್​, ಬಾಂಗ್ಲಾ ಮತ್ತು ಭಾರತವನ್ನು ಸೇರಿಸಿ ಒಂದೇ ರಾಷ್ಟ್ರ ಮಾಡಬೇಕಂತೆ ಈ ಅಲ್ಪಸಂಖ್ಯಾತ ಸಚಿವರಿಗೆ

    ಮುಂಬೈ: ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧದ ಬಗ್ಗೆ ನಿಮಗೆ ಗೊತ್ತೇ ಇದೆ. ಯಾವಾಗಲೂ ಭಾರತದ ಮೇಲೆ ಕತ್ತಿ ಮಸೆಯುವ ಪಾಕಿಸ್ತಾನದ ಬಗ್ಗೆ ಯಾವುದೇ ರೀತಿಯ ಒಳ್ಳೆಯ ಭಾವನೆ ಭಾರತೀಯರಿಗೆ ಉಳಿದಿಲ್ಲ. ಹೀಗಿರುವಾಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಭಾರತಕ್ಕೆ ಸೇರಿಸಿ ಏಕ ರಾಷ್ಟ್ರ ಮಾಡಬೇಕು ಎಂದಿದ್ದಾರೆ ಇಲ್ಲೊಬ್ಬ ಸಚಿವರು.

    ಇದನ್ನೂ ಓದಿ: ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ

    ಈ ರೀತಿಯ ಹೇಳಿಕೆ ಕೊಟ್ಟಿರುವುದು ಮಹಾರಾಷ್ಟ್ರದ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್​ ಮಲ್ಲಿಕ್​. ಬರ್ಲಿನ್​ ಗೋಡೆಯನ್ನು ಒಡೆದುಹಾಕಲಾಗಲಿಲ್ಲವೇ. ಅದೇ ರೀತಿಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿಕೊಳ್ಳಬೇಕು. ಈ ರೀತಿಯ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡರೆ ನಾವು ಖಂಡಿತ ಒಪ್ಪುತ್ತೇವೆ ಎಂದು ಎನ್​ಸಿಪಿ ನಾಯಕ ಹೇಳಿದ್ದಾರೆ. ಮುಂಬೈನಲ್ಲಿ ಕರಾಚಿ ಬೇಕರಿ ವಿಚಾರದಲ್ಲಿ ನಡೆದ ವಾದ ವಿವಾದದ ಸಂಬಂಧ, ಬಿಜೆಪಿ ನಾಯಕ ದೇವೇಂದ್ರ ಫರ್ನಾಂಡಿಸ್​ ಅವರು ಮುಂದೊಂದು ದಿನ ಕರಾಚಿ ಭಾರತದ ಭಾಗವಾಗುವ ಸಮಯ ಬರುತ್ತದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ನವಾಬ್​ ಅವರು ಈ ಮಾತನ್ನು ಹೇಳಿದ್ದಾರೆ.

    ಇದನ್ನೂ ಓದಿ: ಟೀ ಪ್ರೇಮಿಗಳೇ ಎಚ್ಚರ! ಟೀ ಕುಡಿದು ನಾಶವಾಯಿತು ಪೂರ್ತಿ ಕುಟುಂಬ

    2021ರಲ್ಲಿ ನಡೆಯಲಿರುವ ಬೃಹನ್ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಎನ್​ಸಿಪಿ ಪಕ್ಷ ಕಾಂಗ್ರೆಸ್​ ಮತ್ತು ಶಿವಸೇನೆಯೊಂದಿಗೆ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್​ ತಾನು ಏಕಾಂಗಿಯಾಗಿ ಸ್ಪರ್ಧೆಗಿಳಿಯುವುದಾಗಿ ಹೇಳಿಕೊಂಡಿದೆ. (ಏಜೆನ್ಸೀಸ್​)

    ಕಾಂಗ್ರೆಸ್​ಗೆ ಬಂತು ಸಂಕಷ್ಟ; 25 ಸಾವಿರ ಕೋಟಿ ರೂ. ಭೂ ಹಗರಣ ಪ್ರಕರಣದಲ್ಲಿ ಕೈ ನಾಯಕರ ಹೆಸರು

    ಸಾಲ ವಾಪಾಸು ಕೇಳಲು ಬಂದವಳನ್ನೇ ರೇಪ್​ ಮಾಡಿಬಿಟ್ಟ; ಸಾಲ ಕೇಳಿದರೆ ಹುಷಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts